Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

webdunia
ಬೆಂಗಳೂರು , ಮಂಗಳವಾರ, 10 ನವೆಂಬರ್ 2020 (08:46 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯ ಮಾರ್ಗಗಳು ತೋರಿಬರಲಿವೆ. ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ. ಧನಾದಾಯ ಹೆಚ್ಚುವುದು. ಆದರೆ ದೇಹಾರೋಗ್ಯದಲ್ಲಿ ಏರುಪೇರಾಗುವ ಸಾಧ‍್ಯತೆಯಿದೆ. ತಾಳ್ಮೆಯಿಂದಿರುವುದು ಮುಖ್ಯ.

ವೃಷಭ: ವಾಹನ ಸಂಚಾರದಲ್ಲಿ ಅತೀವ ಎಚ್ಚರಿಕೆ ವಹಿಸಬೇಕು. ಅಪಘಾತದ ಭಯವಿದೆ. ದೂರಾಲೋಚನೆಯಿಂದ ಆರ್ಥಿಕ ಯೋಜನೆ ಮಾಡುವುದು ಉತ್ತಮ. ವೈವಾಹಿಕ ಸಂಬಂಧದಲ್ಲಿ ಬಿರುಕು ಮೂಡದಂತೆ ಎಚ್ಚರಿಕೆ ವಹಿಸಿ. ದೇವತಾ ಪ್ರಾರ್ಥನೆ ಮಾಡಿ.

ಮಿಥುನ: ಮನಸ್ಸಿಗೆ ಇಷ್ಟವಾದವರ ಜತೆ ಕೆಲವು ಸುಂದರ ಕ್ಷಣ ಕಳೆಯಲಿದ್ದೀರಿ. ವೃತ್ತಿರಂಗದಲ್ಲಿ ನಿಮ್ಮ ಸಲಹೆಗಳಿಗೆ ಬೆಲೆ ಸಿಗಲಿದೆ. ಆರ್ಥಿಕವಾಗಿ ಅಧಿಕ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಬೇಕಿದೆ. ಕಾರ್ಯನಿಮಿತ್ತ ಕಿರು ಸಂಚಾರ ಮಾಡುವಿರಿ.

ಕರ್ಕಟಕ: ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡುವುದರಿಂದ ಶುಭವಾಗುವುದು. ಹಿರಿಯರಿಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಂಡುಬಂದೀತು. ಉಪೇಕ್ಷೆ ಬೇಡ.

ಸಿಂಹ: ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ಹಿರಿಯರಿಗೆ ಮಾನಸಿಕವಾಗಿ ಏಕಾಂಗಿತನದ ಅನುಭವವಾದೀತು. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗವಿದೆ. ಕುಲದೇವರ ಪ್ರಾರ್ಥನೆ ಮಾಡಿ.

ಕನ್ಯಾ: ಸಾಂಸಾರಿಕವಾಗಿ ಅನಗತ್ಯ ಋಣಾತ್ಮಕ ಚಿಂತನೆಗಳಿಂದ ಮನೆಯ ಸದಸ್ಯರಲ್ಲಿ ತಪ್ಪು ಅಭಿಪ್ರಾಯಕ್ಕೊಳಗಾಗುವಿರಿ. ಮಹಿಳೆಯರಿಗೆ ವಸ್ತ್ರಾಭರಣ ಖರೀದಿ ಯೋಗವಿದೆ. ನಿರುದ್ಯೋಗಿಗಳಿಗೆ ತಕ್ಕ ಉದ್ಯೋಗಕ್ಕೆ ಸಂದರ್ಶನ ಕರೆ ಬರಲಿದೆ.

ತುಲಾ: ಎಂದೋ ಅಂದುಕೊಂಡಿದ್ದ ಕೆಲಸಗಳಿಗೆ ಇಂದು ಚಾಲನೆ ನೀಡಲಿದ್ದೀರಿ. ಹಣಕಾಸಿನ ಅಭಿವೃದ್ಧಿಗೆ ದಾರಿಗಳು ತೋರಿಬರಲಿವೆ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಸಿಗಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆಯ ಯೋಗವಿದೆ.

ವೃಶ್ಚಿಕ: ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಜಯ ನಿಮ್ಮದಾಗುವುದು. ಸಂಗಾತಿಗೆ ಅಚ್ಚರಿಯ ಉಡುಗೊರೆ ನೀಡಲಿದ್ದೀರಿ. ಮಕ್ಕಳ ವಿಚಾರದಲ್ಲಿ ಸಂತಸದ ವಾರ್ತೆ ಕೇಳಿಬರಲಿದೆ. ಮನಸ್ಸಿನ ಮಾತಿಗೆ ಕಿವಿಗೊಟ್ಟು ಅದರಂತೆ ನಡೆಯಿರಿ.

ಧನು: ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ಹೆಚ್ಚಲಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಕೆಳಹಂತದ ನೌಕರರಿಗೆ ಉದ್ಯೋಗದಲ್ಲಿ ಬಡ್ತಿ ಯೋಗವಿದೆ. ಅವಿವಾಹಿತರ ವಿವಾಹ ಮಾತುಕತೆ ಪ್ರಯತ್ನದಲ್ಲಿ ಮುನ್ನಡೆ ತೋರಿಬರಲಿದೆ.

ಮಕರ: ಕೆಲಸದಲ್ಲಿ ನಿಮ್ಮ ಶ್ರದ್ಧಾಭಕ್ತಿಯೇ ಮುನ್ನಡೆಗೆ ಕಾರಣವಾಗಲಿದೆ. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ನೂತನ ದಂಪತಿಳಿಗೆ ಸದ್ಯದಲ್ಲೇ ಸಂತಾನ ಫಲ ಸೂಚನೆ ಸಿಗಲಿದೆ. ದಿನದಂತ್ಯಕ್ಕೆ ಅಚ್ಚರಿಯ ವಾರ್ತೆ.

ಕುಂಭ: ಬಹುದಿನಗಳ ಬಳಿಕ ಆಪ್ತೇಷ್ಟರ ಭೇಟಿ ಮಾಡಲಿದ್ದು, ಮನಸ್ಸಿಗೆ ಸಂತಸವಾಗಲಿದೆ. ನಿರ್ಧಾರ ಕೈಗೊಳ್ಳುವಾಗ ಸಂಗಾತಿಯೊಂದಿಗೆ ಪರಾಮರ್ಶಿಸಿದರೆ ಉತ್ತಮ. ಸ್ವಯಂ ವ್ಯಾಪಾರಿಗಳಿಗೆ ಅಭಿವೃದ್ಧಿ ಕಂಡುಬರುವುದು.

ಮೀನ: ಬಂಧು ಮಿತ್ರರಿಂದ ಸಂತೋಷದ ವಾರ್ತೆ ಆಲಿಸುವಿರಿ. ಮನೆಯಲ್ಲಿ ಶುಭ ಮಂಗಲ ಕಾರ್ಯ ನಡೆಸಲು ಸಿದ್ಧತೆ ನಡೆಸಲಿದ್ದೀರಿ. ಕಾರ್ಯಕ್ಷೇತ್ರದಲ್ಲಿ ವಿಳಂಬಗತಿಯಲ್ಲಿ ಸಾಗಿದರೂ ನೀವು ಅಂದುಕೊಂಡ ಕೆಲಸ ನೆರವೇರಲಿದೆ. ಚಿಂತೆ ಬೇಡ.

Share this Story:

Follow Webdunia kannada

ಮುಂದಿನ ಸುದ್ದಿ

ದಿನ ಪಂಚಾಂಗ ಹೀಗಿದೆ!