Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಮಂಗಳವಾರ, 13 ಅಕ್ಟೋಬರ್ 2020 (09:20 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಸಂಗಾತಿಯೊಂದಿಗೆ ಅನಗತ್ಯ ಸಂಘರ್ಷದಿಂದ ಮನೆಯಲ್ಲಿ ಅಶಾಂತಿಯ ವಾತಾವರಣವಿರುವುದು. ಇಷ್ಟ ದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿ. ಉದ್ಯೋಗ ಕ್ಷೇತ್ರದಲ್ಲಿ ಕೊಂಚ ಬಿಡುವು ಸಿಗಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ.

ವೃಷಭ: ಉದ್ಯೋಗ, ವ್ಯವಹಾರದಲ್ಲಿ ಕೊಂಚ ಮುನ್ನಡೆ ಕಾಣಲಿದ್ದೀರಿ. ಇಷ್ಟು ದಿನ ನೀವು ಚಿಂತೆ ಮಾಡುತ್ತಿದ್ದ ವಿಚಾರಗಳಿಗೆ ಪರಿಹಾರ ಸಿಗಲಿದೆ. ಮನೆ ದೇವರ ಅನುಗ್ರಹ ನಿಮಗೆ ಸಿಗುವುದು. ಯೋಗ್ಯ ವಯಸ್ಕರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ.

ಮಿಥುನ: ನೀವು ನಿರೀಕ್ಷಿಸಿದ ರೀತಿಯಲ್ಲಿ ಕೆಲಸ ಕಾರ್ಯಗಳು ನಡೆದುಹೋಗಲಿವೆ. ಸಂಗಾತಿಯ ಬಹುದಿನಗಳ ಮನದಾಸೆ ಪೂರೈಸಲಿದ್ದೀರಿ. ವ್ಯಾಪಾರಿಗಳಿಗೆ ಸ್ವಲ್ಪ ಮಟ್ಟಿಗೆ ಲಾಭವಾಗಲಿದೆ. ಸರಕಾರಿ ಉದ್ಯೋಗಿಗಳಿಗೆ ಕಾರ್ಯದೊತ್ತಡ ತಪ್ಪದು.

ಕರ್ಕಟಕ: ನಿರುದ್ಯೋಗಿಗಳು ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆ ಪಡೆಯಲಿದ್ದಾರೆ. ವಿದ್ಯಾರ್ಥಿಗಳಿಗೆ ಭವಿಷ್ಯದ ದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಕೃಷಿಕರಿಗೆ ಬೆಳೆ ನಷ್ಟದ ಭೀತಿ ಕಾಡಲಿದೆ. ದೇವತಾ ಪ್ರಾರ್ಥನೆ ಮಾಡಿ.

ಸಿಂಹ: ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಅನುಕೂಲಕರ ವಾತಾವರಣವಿರಲಿದೆ. ಮನಸ್ಸಿನಲ್ಲಿ ಅಂದುಕೊಂಡ ಕೆಲಸ ಕಾರ್ಯಗಳನ್ನು ಸುಗಮವಾಗಿ ನೆರವೇರಿಸಲಿದ್ದೀರಿ. ಹಿರಿಯರಿಗೆ ದೇವಾಲಯ ಸಂದರ್ಶನ ಯೋಗವಿದೆ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ಕನ್ಯಾ: ಬೇರೆಯವರು ನಿಮ್ಮ ಬಗ್ಗೆ ಏನು ತಿಳಿದುಕೊಳ್ಳುವರೋ ಎನ್ನುವ ಚಿಂತೆ ಬಿಟ್ಟು ನಿಮ್ಮ ಕರ್ತವ್ಯದತ್ತ ಗಮನ ಕೊಡಿ. ನೆರೆಹೊರೆಯವರ ಮಾತುಗಳಿಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಶೈಕ್ಷಣಿಕ ರಂಗದಲ್ಲಿ ಮುನ್ನಡೆ ಪಡೆಯುವಿರಿ. ಪ್ರೀತಿ ಪಾತ್ರರ ಭೇಟಿ ಸಾಧ‍್ಯತೆ.

ತುಲಾ: ಅನಿವಾರ್ಯ ಕಾರಣಗಳಿಗೆ ದೂರ ಸಂಚಾರ ಮಾಡಬೇಕಾಗಿ ಬರಲಿದೆ. ಬಂಧು ಮಿತ್ರರ ಭೇಟಿಯಾಗುವ ಸಾಧ‍್ಯತೆಯಿದೆ. ವೃತ್ತಿರಂಗದಲ್ಲಿ ಮೇಲಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ತಾಳ್ಮೆಯಿಂದಿರಿ.

ವೃಶ್ಚಿಕ: ಪ್ರೀತಿ ಪಾತ್ರರೊಂದಿಗೆ ಕೆಲವು ಸಮಯ ಕಳೆಯಲು ಮನಸ್ಸು ಹಾತೊರೆಯುವುದು. ಅವಿವಾಹಿತರಿಗೆ ವಿವಾಹ ಮಾತುಕತೆಗಳು ಸ್ವಲ್ಪದರಲ್ಲೇ ತಪ್ಪಿ ಹೋಗಿ ಬೇಸರವಾಗಬಹುದು. ಮಹಿಳೆಯರಿಗೆ ಗೃಹಕೃತ್ಯಗಳಿಂದ ಕೊಂಚ ವಿರಾಮ ಸಿಗಲಿದೆ.

ಧನು: ದೇಹಾರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಎದುರಾಗಲಿದೆ. ಸಂಗಾತಿಯ ಮಾತಿಗೆ ಕಿವಿಗೊಡಬೇಕಾಗುತ್ತದೆ. ವಿದ್ಯಾರ್ಥಿಗಳು ಹೊಸ ಪರೀಕ್ಷೆಗೆ ಸಿದ್ಧರಾಗಬೇಕಾಗುತ್ತದೆ. ಆರ್ಥಿಕವಾಗಿ ಖರ್ಚು ವೆಚ್ಚದ ಬಗ್ಗೆ ಹಿಡಿತವಿರಲಿ.

ಮಕರ: ವ್ಯಾಪಾರೀ ವರ್ಗದವರು ವ್ಯವಹಾರದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾಣುವರು. ಕ್ರಿಯಾತ್ಮಕ ಯೋಚನೆಗಳಿಂದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಿರಿ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ. ಕಿರು ಓಡಾಟ ನಡೆಸಬೇಕಾಗುತ್ತದೆ.

ಕುಂಭ: ದೂರ ಸಂಚಾರದಲ್ಲಿ ವಿಘ್ನಗಳು ಎದುರಾಗಲಿವೆ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ಆರ್ಥಿಕವಾಗಿ ಹೊಸ ಯೋಜನೆಗಳನ್ನು ಹಾಕಿಕೊಳ್ಳಲಿದ್ದೀರಿ. ವೃತ್ತಿರಂಗದಲ್ಲಿ ಅಡೆತಡೆಗಳಿದ್ದರೂ ಕಾರ್ಯಸಾಧನೆಯಾಗಲಿದೆ.

ಮೀನ: ಹಿರಿಯರ ಮಾರ್ಗದರ್ಶನದಂತೆ ನಡೆದುಕೊಂಡರೆ ಶ್ರೇಯೋಭಿವೃದ್ಧಿ ಕಂಡುಬರುವುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸಂಗಾತಿಯೊಂದಿಗೆ ಚರ್ಚಿಸಲಿದ್ದೀರಿ. ನೂತನ ದಂಪತಿಗಳಿಗೆ ಮಧುರ ಕ್ಷಣ ಕಳೆಯುವ ಯೋಗವಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

Lucky number: ಹುಟ್ಟಿದ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ನೋಡಿ

ಮುಂದಿನ ಸುದ್ದಿ
Show comments