ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 30 ಆಗಸ್ಟ್ 2020 (09:18 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಉದ್ವೇಗ ಆತುರಕ್ಕೆ ಕಟ್ಟು ಬಿದ್ದು ಯಾವುದೇ ನಿರ್ಧಾರ ಕೈಗೊಳ್ಳಬೇಡಿ. ಕಾರ್ಯದೊತ್ತಡದಿಂದ ದೇಹಾಯಾಸವಾಗಬಹುದು. ನಿಮ್ಮ ತಾಳ್ಮ ಪರೀಕ್ಷೆಯ ಕಾಲವಿದು. ದೇಹಾರೋಗ್ಯದ ಬಗ್ಗೆ ಅನಗತ್ಯ ಚಿಂತೆ ಬೇಡ.

ವೃಷಭ: ಆರೋಗ್ಯದಲ್ಲಿ ಏರುಪೇರಾಗುತ್ತಲೇ ಇರಲಿದೆ. ಆದರೆ ಮಾನಸಿಕ ಸ್ಥೈರ್ಯ ಕಳೆದುಕೊಳ್ಳಬೇಡಿ. ನಿಮ್ಮ ಕಷ್ಟಗಳಿಗೆ ಸಂಗಾತಿಯ ಸಹಕಾರ ದೊರೆಯಲಿದೆ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮಪಡಬೇಕಾಗಬಹುದು.

ಮಿಥುನ: ಅನ್ಯರ ಕಷ್ಟಗಳಿಗೆ ಹೆಗಲು ಕೊಡಲು ಹೋಗಿ ನೀವೇ ಕಷ್ಟಕ್ಕೆ ಸಿಲುಕಿಕೊಳ್ಳಬೇಕಾದೀತು. ಕೌಟುಂಬಿಕವಾಗಿ ನಡೆಯುವ ಕೆಲವೊಂದು ಘಟನೆಗಳು ನಿಮ್ಮ ಮನಸ್ಸಿಗೆ ಬೇಸರವುಂಟುಮಾಡಬಹುದು. ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ.

ಕರ್ಕಟಕ: ಮಕ್ಕಳ ಭವಿಷ್ಯದ ಕುರಿತಾಗಿ ಆತಂಕವಾಗಲಿದೆ. ಹೊಸ ಯೋಜನೆಗಳನ್ನು ಕೈಗೊಳ್ಳಲು ಕೆಲವು ದಿನ ಕಾಯುವುದು ಒಳಿತು. ಆರ್ಥಿಕವಾಗಿ ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ಕೈಗೊಳ‍್ಳಲು ಸಿದ್ಧತೆ ನಡೆಸುವಿರಿ.

ಸಿಂಹ: ಸಹೋದರಿಯ ವಿವಾಹ ಮಾತುಕತೆ ವಿಚಾರವಾಗಿ ಓಡಾಟ ನಡೆಸಬೇಕಾಗುತ್ತದೆ. ನೀವು ಕೈಗೊಳ‍್ಳುವ ನಿರ್ಧಾರವು ನಿಮ್ಮ ಕುಟುಂಬದ ಮೇಲೆ ಪರಿಣಾಮ ಬೀರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ.

ಕನ್ಯಾ: ವೃತ್ತಿರಂಗದಲ್ಲಿ ಸಮಾಧಾನಕರ ವಾತಾವಾರಣವಿರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನಕ್ಕಾಗಿ ದೂರ ಪ್ರಯಾಣ ಮಾಡಬೇಕಾದೀತು. ವಾಹನ ಖರೀದಿ ಯೋಗವಿದೆ. ವಿವಾಹಾದಿ ಮಾತುಕತೆಗಳಿಗೆ ಕೆಲವು ದಿನ ಕಾಯುವುದು ಒಳಿತು.

ತುಲಾ: ಕೆಲಸ ಕಾರ್ಯಗಳಲ್ಲಿ ಇದುವರೆಗೆ ಇದ್ದ ಅಡೆತಡೆಗಳು ನಿವಾರಣೆಯಾಗಲಿದ್ದು, ನೀವು ಅಂದುಕೊಂಡ ರೀತಿಯಲ್ಲೇ ಎಲ್ಲವೂ ನಡೆಯಲಿದೆ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವ ಯೋಗವಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ  ಅಗತ್ಯ.

ವೃಶ್ಚಿಕ: ನೀವು ಉದ್ದೇಶಿಸಿದ ಕಾರ್ಯಗಳಿಗೆ ಅಡೆತಡೆಗಳು ಬಂದೀತು. ಕ್ರಿಯಾತ್ಮಕವಾಗಿ ಯೋಚನೆ ಮಾಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಮನಸ್ಸಿಗೆ ಇಷ್ಟವಾದವರ ಭೇಟಿಯಾಗುವ ಯೋಗವಿದೆ. ಉದರ ಸಂಬಂಧೀ ಆರೋಗ್ಯ ಸಮಸ್ಯೆ ಬಾರದಂತೆ ನೋಡಿಕೊಳ್ಳಿ.

ಧನು: ಅಧಿಕ ಕಾರ್ಯದೊತ್ತಡದಿಂದ ದೇಹಾಯಾಸವಾದೀತು. ಮುನ್ನೆಚ್ಚರಿಕೆ ಅಗತ್ಯ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲು ಮನಸ್ಸು ಹಾತೊರೆಯಲಿದೆ. ಪ್ರೇಮಿಗಳ ಗುಟ್ಟು ಮನೆಯವರೆದುರು ಬಹಿರಂಗವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಕರ: ವೃತ್ತಿರಂಗದಲ್ಲಿ ನಿಮ್ಮ ಪರಿಸ್ಥಿತಿ ಸುಧಾರಣೆಗೆ ಕ್ರಮ ಕೈಗೊಳ್ಳಲಿದ್ದೀರಿ. ಪ್ರೀತಿ ಪಾತ್ರರಿಗೆ ಇಷ್ಟವಾಗುವ ಉಡುಗೊರೆ ನೀಡಿ ಸಂತೋಷ ಕೊಡಲಿದ್ದೀರಿ. ನಿಮ್ಮ ಬಹುದಿನಗಳ ಕನಸು, ಆಸೆಯನ್ನು ಪೂರೈಸಲಿದ್ದೀರಿ. ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ.

ಕುಂಭ: ನಿಮ್ಮ ಕಾರ್ಯನಿರ್ವಹಣೆ ನಿಮ್ಮ ಮನಸ್ಸಿಗೆ ತೃಪ್ತಿ ಕೊಡಲಿದೆ. ಇಷ್ಟ ಮಿತ್ರರೊಂದಿಗೆ ಕೆಲವು ಸುಮಧುರ ಕ್ಷಣ ಕಳೆಯುವ ಯೋಗವಿದೆ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದೇ ಇದ್ದರೆ ಆರೋಗ್ಯ ಸಮಸ್ಯೆ ಕಾಡೀತು. ದೇವತಾ ಪ್ರಾರ್ಥನೆ ಮರೆಯದಿರಿ.

ಮೀನ: ಇಷ್ಟ ದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ನೀವಂದುಕೊಂಡಂತೇ ನಡೆಯಲಿದೆ. ಸಾಮಾಜಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮಹಿಳೆಯರಿಗೆ ತವರಿನ ಸಂಬಂಧಿಗಳ ಭೇಟಿಯಾಗುವ ಯೋಗವಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ಈ ವಸ್ತುಗಳನ್ನು ಮನೆಗೆ ತರಬೇಡಿ

ದೀಪ ಹಚ್ಚುವಾಗ ಗೊತ್ತಿಲ್ಲದೆ ಈ ತಪ್ಪು ಮಾಡಬೇಡಿ, ಶ್ರೇಯಸ್ಸಲ್ಲ

ಪವರ್ ಫುಲ್ ಸರಸ್ವತಿ ಮಂತ್ರ ಕನ್ನಡದಲ್ಲಿ ಇಲ್ಲಿದೆ

ಮಕರ ಸಂಕ್ರಾಂತಿ ನಾಳೆಯಾ, ನಾಡಿದ್ದಾ.. ಕನ್ ಫ್ಯೂಷನ್ ಬೇಡ ಇಲ್ಲಿ ನೋಡಿ

ಏಕಾದಶಮುಖ ಹನುಮತ್ಕವಚ ಸ್ತೋತ್ರಂ ಕನ್ನಡದಲ್ಲಿ

ಮುಂದಿನ ಸುದ್ದಿ
Show comments