ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಧನ ವ್ಯಯವಾಗಲಿದೆ. ಕಾರ್ಯ ನಿಮಿತ್ತ ಅಧಿಕ ಓಡಾಟದಿಂದ ದೇಹಾಯಾಸವಾಗಬಹುದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಸಾಂಸಾರಿಕವಾಗಿ ಅನಗತ್ಯ ಮಾತುಗಳಿಗೆ ಅವಕಾಶ ಕೊಡಬೇಡಿ.
ವೃಷಭ: ಆರ್ಥಿಕ ಪರಿಸ್ಥಿತಿಯೂ ಆತಂಕಕಾರಿಯಾಗಿದ್ದರೂ ಅನಿರೀಕ್ಷಿತ ರೀತಿಯಲ್ಲಿ ಸ್ನೇಹಿತರ ಸಹಾಯ ಸಿಗಲಿದೆ. ದೇಹಾರೋಗ್ಯದಲ್ಲಿ ಏರುಪೇರಾದೀತು ಎಚ್ಚರಿಕೆ ಅಗತ್ಯ. ವೃತ್ತಿರಂಗದಲ್ಲಿ ಮುನ್ನಡೆ ತೋರಿಬರಲಿದೆ. ದೇವತಾ ಪ್ರಾರ್ಥನೆ ಮಾಡಿ.
ಮಿಥುನ: ಸರಕಾರಿ ಉದ್ಯೋಗಿಗಳಿಗೆ ಉತ್ತಮ ಧನಾದಾಯ ಕಂಡುಬರಲಿದೆ. ಬಂಧು ಬಳಗದವರ ಸಹಾಯದಿಂದ ಕಷ್ಟಗಳು ತೀರಲಿವೆ. ವೃತ್ತಿರಂಗದಲ್ಲಿ ಅನವಶ್ಯಕ ಕಲಹಗಳಾಗದಂತೆ ಎಚ್ಚರಿಕೆ ವಹಿಸಿ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ.
ಕರ್ಕಟಕ: ಅನಿರೀಕ್ಷಿತ ರೀತಿಯಲ್ಲಿ ಹಳೆಯ ಮಿತ್ರನ ಭೇಟಿಯಾಗಲಿದ್ದು, ಸಂತಸವಾಗಲಿದೆ. ಮನೆಯಲ್ಲಿ ಸಂತೋಷದಾಯಕ ವಾತಾವರಣವಿರಲಿದೆ. ಆದರೆ ನಿಮ್ಮ ದುಡುಕಿನ ಮಾತಿನಿಂದ ಬೇರೆಯವರಿಗೆ ನೋವಾಗದಂತೆ ನೋಡಿಕೊಳ್ಳಿ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.
ಸಿಂಹ: ಮಹಿಳೆಯರಿಗೆ ಗೃಹ ಕೃತ್ಯಗಳಲ್ಲಿ ಬಿಡುವಿಲ್ಲದ ದುಡಿಮೆಯಿಂದ ದೇಹಾಯಾಸವಾದೀತು. ಕುಲದೇವರ ಆಶೀರ್ವಾದದಿಂದ ನೀವು ಅಂದುಕೊಂಡ ಕೆಲಸಗಳು ಹಂತ ಹಂತವಾಗಿ ನೆರವೇರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ.
ಕನ್ಯಾ: ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯುವ ಯೋಗ ನಿಮ್ಮದಾಗುವುದು. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದ್ದು, ಹೊಸ ಯೋಜನೆಗಳಿಗೆ ಕೈ ಹಾಕಲಿದ್ದೀರಿ. ಆರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ನಿವಾರಣೆಯಾಗಲಿವೆ.
ತುಲಾ: ನಿಮ್ಮ ಮನಸ್ಸಿನ ಭಾರವನ್ನು ಸಂಗಾತಿಯ ಜತೆ ಹಂಚಿಕೊಳ್ಳಲಿದ್ದೀರಿ. ನಿರುದ್ಯೋಗಿಗಳು ಉದ್ಯೋಗ ಬೇಟೆಗಾಗಿ ದೂರ ಸಂಚಾರ ಮಾಡಬೇಕಾದೀತು. ವಿವಾಹ ಪ್ರಸ್ತಾಪಗಳು ಸ್ವಲ್ಪದರಲ್ಲೇ ಕೈ ತಪ್ಪಿ ಹೋದೀತು. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.
ವೃಶ್ಚಿಕ: ದೈವಾನುಕೂಲದಿಂದ ಇಂದು ನೀವು ಅಂದುಕೊಂಡಿದ್ದ ಕೆಲಸಗಳು ಸುಗಮವಾಗಿ ನೆರವೇರಲಿದೆ. ಹೊಸ ಯೋಜನೆಗಳಿಗೆ ಇದುವರೆಗೆ ಇದ್ದ ವಿಘ‍್ನಗಳು ದೂರವಾಗಲಿದೆ. ಸರಕಾರಿ ಕೆಲಸದಲ್ಲಿರುವವರಿಗೆ ಕಾರ್ಯದೊತ್ತಡ ತಪ್ಪದು. ತಾಳ್ಮೆಯಿರಲಿ.
ಧನು: ಅನಗತ್ಯ ವಿಚಾರಗಳಿಗೆ ತಾವೂ ನೆಮ್ಮದಿ ಹಾಳು ಮಾಡಿಕೊಂಡು ಬೇರೆಯವರ ನೆಮ್ಮದಿಯನ್ನೂ ಹಾಳು ಮಾಡುವುದು ಬೇಡ. ಅನಿರೀಕ್ಷಿತ ರೀತಿಯಲ್ಲಿ ಕಾರ್ಯ ಸಾಧನೆಯಾಗಲಿದೆ. ಮಹಿಳೆಯರಿಗೆ ಚಿನ್ನಾಭರಣಗಳನ್ನು ಕಾಪಾಡುವ ಹೊಣೆಗಾರಿಕೆ ಸಿಗಲಿದೆ.
ಮಕರ: ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲು ಇದು ಸಕಾಲವಾಗಿದೆ. ದೇಹಾರೋಗ್ಯದಲ್ಲಿ ಏರುಪೇರಾದರೂ ನಿಮ್ಮ ಮನೋಬಲದಿಂದ ಎಲ್ಲವನ್ನೂ ಗೆಲ್ಲಲಿದ್ದೀರಿ. ನಿರುದ್ಯೋಗಿಗಳಿಗೆ ಹಲವು ಅವಕಾಶಗಳು ಬರಲಿವೆ. ಜಾಣತನದಿಂದ ಬಳಸಿಕೊಳ್ಳಿ.
ಕುಂಭ: ಕಾರ್ಯಕ್ಷೇತ್ರದಲ್ಲಿ ನಿಮ್ಮ ಕಾರ್ಯಕ್ಷಮತೆ ಎಲ್ಲರಿಗೂ ಇಷ್ಟವಾಗಲಿದೆ. ಕ್ರಿಯಾತ್ಮಕವಾಗಿ ಆಲೋಚಿಸುವುದರಿಂದ ಸಮಸ್ಯೆಗೆ ಪರಿಹಾರ ಕಂಡುಬರಲಿದೆ. ವಿದ್ಯಾರ್ಥಿಗಳು ಅಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಕುಲದೇವರ ಪ್ರಾರ್ಥನೆ ಮಾಡಿ.
ಮೀನ: ಸಾಂಸಾರಿಕವಾಗಿ ಸಣ್ಣ ಪುಟ್ಟ ಮನಸ್ತಾಪಗಳು ಸಾಮಾನ್ಯ. ಹಿರಿಯರ ಮಧ್ಯಸ್ಥಿಕೆಯಲ್ಲಿ ಅವುಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ. ಎಲೆಕ್ಟ್ರಿಕಲ್ ವೃತ್ತಿಯವರಿಗೆ ಉದ್ಯೋಗದಲ್ಲಿ ಮುನ್ನಡೆ ಕಂಡುಬರಲಿದೆ. ಗೃಹ ಬಳಕೆ ವಸ್ತುಗಳ ಖರೀದಿ ಮಾಡುವಿರಿ.