Publish Date: Sat, 15 Aug 2020 (08:59 IST)
Updated Date: Sat, 15 Aug 2020 (09:00 IST)
ಬೆಂಗಳೂರು: ಆಯಾ ನಕ್ಷತ್ರಕ್ಕೆ ಆಯಾ ಗುಣ ಲಕ್ಷಣಗಳಿರುತ್ತವೆ. ಒಂದೊಂದು ನಕ್ಷತ್ರದವರಿಗೆ ಯಾವ ಸ್ವಭಾವ ಮತ್ತು ಅವರ ಹೆಸರು ಯಾವ ರೀತಿ ಆರಂಭವಾಗಬೇಕು ಎಂಬುದರ ಬಗ್ಗೆ ನೋಡುತ್ತಾ ಹೋಗೋಣ.
ಪೂರ್ವಾಭದ್ರ
ಹಣ, ಯಶಸ್ಸು ಸಂಪಾದನೆ ಮಾಡುವುದರಲ್ಲಿ ಇವರನ್ನು ಯಾರೂ ಹಿಂದಿಕ್ಕಿಲಾಗದು. ಜ್ವಾನಿಗಳು, ಹಾಗೆಯೇ ಉತ್ತಮ ವಾಗ್ಮಿಗಳು. ಕಲೆ, ಸಾಹಿತ್ಯದಲ್ಲೂ ನಿಪುಣರಾಗಿರುತ್ತಾರೆ. ಇವರಿಗೆ ತಕ್ಕ ಸಂಗಾತಿಯೇ ಸಿಗುತ್ತಾರೆ ಮತ್ತು ಮಕ್ಕಳಿಂದ ಸಂತಸ ಅನುಭವಿಸುತ್ತಾರೆ. ಆದರೆ ಯೋಜನೆ ಮಾಡುವಲ್ಲಿ ವಿಫಲರಾಗುತ್ತಾರೆ. ಸಂಗಾತಿಯೇ ಮೇಲುಗೈ ಸಾಧಿಸುತ್ತಾರೆ. ಇವರಿಗೆ ಸೇ, ಸೊ, ದಾ, ದೀ ಕಾರದಿಂದ ಬರುವ ಹೆಸರುಗಳನ್ನಿಡಬಹುದು.