Publish Date: Fri, 14 Aug 2020 (08:48 IST)
Updated Date: Fri, 14 Aug 2020 (08:50 IST)
ಬೆಂಗಳೂರು: ಆಯಾ ನಕ್ಷತ್ರಕ್ಕೆ ಆಯಾ ಗುಣ ಲಕ್ಷಣಗಳಿರುತ್ತವೆ. ಒಂದೊಂದು ನಕ್ಷತ್ರದವರಿಗೆ ಯಾವ ಸ್ವಭಾವ ಮತ್ತು ಅವರ ಹೆಸರು ಯಾವ ರೀತಿ ಆರಂಭವಾಗಬೇಕು ಎಂಬುದರ ಬಗ್ಗೆ ನೋಡುತ್ತಾ ಹೋಗೋಣ.
ಶತಭಿಷ
ಕಷ್ಟದಲ್ಲಿರುವ ಜನರಿಗೆ ಉದಾರ ಮನಸ್ಸಿನಿಂದ ಸಹಾಯ ಮಾಡುತ್ತಾರೆ. ಇತರರ ಗೌರವಾದರಗಳಿಗೆ ಪಾತ್ರರಾಗುತ್ತಾರೆ. ಇನ್ನೊಬ್ಬ ವ್ಯಕ್ತಿಯ ಮೇಲೆ ಪ್ರಭಾವ ಬೀರಲು ಸಮರ್ಥರಿರುತ್ತಾರೆ. ಇವರಿಗೆ ಜೀವನದಲ್ಲಿ ಶಿಸ್ತು ಇರುತ್ತದೆ. ಆದರೆ ಕೆಲವೊಮ್ಮೆ ಆತ್ಮವಿಶ್ವಾಸದ ಕೊರತೆ, ಏಕಾಂಗಿತನವೇ ಇವರ ವೈರಿಯಾಗಿರುತ್ತದೆ. ಈ ನಕ್ಷತ್ರದವರಿಗೆ ಗೊ, ಸಾ, ಸೀ ಮತ್ತು ಸೂ ಕಾರದಿಂದ ಆರಂಭವಾಗುವ ಹೆಸರಿಡುವುದು ಉತ್ತಮ.