Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಸೋಮವಾರ, 20 ಜುಲೈ 2020 (09:13 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಆಕಸ್ಮಿಕ ಪ್ರಯಾಣಗಳಿಗೆ ಸಿದ್ಧರಾಗಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಸವಾಲುಗಳನ್ನು ಎದುರಿಸಲು ರೂಢಿ ಮಾಡಿಕೊಳ್ಳಬೇಕಾಗುತ್ತದೆ. ದೇಹಾರೋಗ್ಯ ಚಿಂತೆಗೆ ಕಾರಣವಾಗಬಹುದು. ಗೃಹಿಣಿಯರಿಗೆ ಕಾರ್ಯದೊತ್ತಡದಿಂದ ದೇಹಾಯಾಸವಾಗಬಹುದು.

ವೃಷಭ: ಸರಕಾರಿ ಉದ್ಯೋಗಿಗಳಿಗೆ ಧನಾದಾಯ ಉತ್ತಮವಾಗಿರಲಿದೆ. ಅಂದುಕೊಂಡ ಕಾರ್ಯ ನೆರವೇರಿಸಲಿದ್ದೀರಿ. ಕೌಟುಂಬಿಕವಾಗಿ ಅನಪೇಕ್ಷಿತ ಅತಿಥಿಗಳ ಆಗಮನ ಇರಿಸುಮುರಿಸು ಉಂಟುಮಾಡಬಹುದು. ಸಂಗಾತಿಯೊಂದಿಗೆ ಹೊಂದಾಣಿಕೆ ಅಗತ್ಯ.

ಮಿಥುನ: ದೇವತಾ ಕಾರ್ಯಗಳಲ್ಲಿ ಆಸಕ್ತಿ ತೋರಿಬರಲಿದೆ. ನೂತನ ದಂಪತಿಗಳಿಗೆ ಸಂತಾನ ಫಲ ಸೂಚನೆ ದೊರೆಯಲಿದೆ. ಮನಸ್ಸಿಗೆ ಇಷ್ಟವಾಗುವವರ ಭೇಟಿ ಸಂಭವವಿದೆ. ಹಿರಿಯರಿಗೆ ದೇವಾಲಯ ಸಂದರ್ಶನ ಯೋಗವಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

ಕರ್ಕಟಕ: ನೆರೆಹೊರೆಯವರು ನಿಮ್ಮ ದೌರ್ಬಲ್ಯವನ್ನು ಲಾಭಕ್ಕೆ ಬಳಸಿಕೊಳ್ಳಬಹುದು. ಅತಿಯಾದ ಉದಾರತೆಯೂ ಕೆಲವೊಮ್ಮೆ ತೊಂದರೆ ತರಬಹುದು, ಎಚ್ಚರಿಕೆ ಅಗತ್ಯ. ಶೀತ ಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬಂದೀತು. ಅನಗತ್ಯ ಚಿಂತೆ ಬೇಡ.

ಸಿಂಹ: ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಉದಾಸೀನ ಪ್ರವೃತ್ತಿ ಕಂಡುಬರಲಿದೆ. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ದೂರ ಸಂಚಾರಗಳನ್ನು ಕೆಲವು ದಿನ ಮುಂದೂಡುವುದು ಒಳಿತು. ಕಾರ್ಯಸಾಧನೆಗೆ ಪರಿಶ್ರಮ ಅಗತ್ಯ.

ಕನ್ಯಾ: ಯೋಗ್ಯ ವಯಸ್ಕರಿಗೆ ಸೂಕ್ತ ಸಂಬಂಧಗಳು ಹುಡುಕಿಕೊಂಡು ಬಂದರೂ ಸ್ವಲ್ಪದರಲ್ಲೇ ಕೈ ತಪ್ಪಿ ನಿರಾಸೆ ಅನುಭವಿಸಬೇಕಾಗಬಹುದು. ಹಿರಿಯರಿಗೆ ದೇಹಾರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ದೇವತಾ ಪ್ರಾರ್ಥನೆ ಮಾಡಿ.

ತುಲಾ: ನಿರೀಕ್ಷಿತ ರೀತಿಯಲ್ಲಿ ಕಾರ್ಯಸಾಧನೆಯಾಗಿ ಮನಸ್ಸಿಗೆ ನೆಮ್ಮದಿಯಾಗುವುದು. ಮಕ್ಕಳ ವಿವಾಹ ವಿಚಾರಗಳು ಪೋಷಕರ ಚಿಂತೆಗೆ ಕಾರಣವಾಗಲಿದೆ. ಕೃಷಿಕರಿಗೆ ವ್ಯವಹಾರದಲ್ಲಿ ಮುನ್ನಡೆ ಸಿಗಲಿದೆ. ಮಹಿಳೆಯರಿಗೆ ಆಕಸ್ಮಿಕ ಧನಲಾಭವಾಗಲಿದೆ.

ವೃಶ್ಚಿಕ: ವಿಘ್ನ ಭಯಗಳಿದ್ದರೂ ಕೆಲಸ ಕಾರ್ಯಗಳಲ್ಲಿ ಅಂತಿಮ ಜಯ ನಿಮ್ಮದಾಗಲಿದೆ. ವಿದ್ಯಾರ್ಥಿಗಳಿಗೆ ಬಯಸಿದ ಫಲಿತಾಂಶ ಸಿಕ್ಕ ಸಂತೋಷ ಸಿಗಲಿದೆ. ಹಿರಿಯ ಅಧಿಕಾರಿಗಳಿಗೆ ಮುಂಬಡ್ತಿ ಯೋಗವಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.

ಧನು: ವೃತ್ತಿರಂಗದಲ್ಲಿ ನಿಮ್ಮ ಚಾಣಕ್ಯತನದಿಂದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಿದ್ದೀರಿ. ಆರ್ಥಿಕವಾಗಿ ಲಾಭವಾಗದಿದ್ದರೂ ನಷ್ಟವಾಗದು. ಆದರೆ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿಕೊಳ್ಳಿ. ಸಾಂಸಾರಿಕವಾಗಿ ನೆಮ್ಮದಿ ಇರಲಿದೆ. ಪ್ರೀತಿ ಪಾತ್ರರ ಭೇಟಿಯಾಗಲಿದ್ದೀರಿ.

ಮಕರ: ಉದ್ದೇಶಿತ ಕೆಲಸಗಳನ್ನು ಹಂತ ಹಂತವಾಗಿ ಪೂರೈಸಿಕೊಳ್ಳುವಿರಿ. ಅಪರಿಚಿತರಿಂದ ವಂಚನೆಗೊಳಗಾಗಲಿದ್ದೀರಿ. ಎಚ್ಚರಿಕೆ ಅಗತ್ಯ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸಲಿದ್ದೀರಿ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ.

ಕುಂಭ: ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡಬೇಕಾದೀತು. ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಧನವಿನಿಯೋಗ ಮಾಡಲಿದ್ದೀರಿ. ಗೃಹಿಣಿಯರಿಗೆ ಹೆಚ್ಚಿನ ಹೊಣೆಗಾರಿಕೆ ಹೆಗಲಿಗೇರಲಿದೆ.

ಮೀನ: ಕಾರ್ಯರಂಗದಲ್ಲಿ ನಿಮ್ಮ ಕೆಲವೊಂದು ನಿರ್ಧಾರಗಳು ಇತರರ ಅಸಮಾಧಾನಕ್ಕೆ ಕಾರಣವಾದೀತು. ಅನಗತ್ಯ ಮಾತಿಗೆ ಕಡಿವಾಣ ಹಾಕುವುದು ಉತ್ತಮ. ಆರ್ಥಿಕವಾಗಿ ಹಣಕಾಸಿನ ಸಮಸ್ಯೆಗಳು ಪರಿಹಾರವಾಗಲಿದೆ. ಭವಿಷ್ಯದ ಬಗ್ಗೆ ಚಿಂತೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭೀಮನ ಅಮಾವಾಸ್ಯೆಯಂದು ಈ ಒಂದು ಚಿಕ್ಕ ಕೆಲಸ ಮಾಡಿದರೆ ಗಂಡನ ಆಯಸ್ಸು ಹೆಚ್ಚಾಗುತ್ತದೆ