Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶನಿವಾರ, 18 ಜುಲೈ 2020 (08:41 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಹಣಕಾಸಿನ ಸಮಸ್ಯೆಗಳು ದೂರವಾಗಲಿದೆ. ಹಾಗಿದ್ದರೂ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ. ಸಂಗಾತಿಯ ದೇಹಾರೋಗ್ಯದಲ್ಲಿ ಏರುಪೇರಾಗಲಿದೆ. ಹಿಂದೆ ಮಾಡಿದ ತಪ್ಪಿನ ಫಲ ಅನುಭವಿಸಲಿದ್ದೀರಿ.

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಆತಂಕದ ಕ್ಷಣಗಳು ಎದುರಾದೀತು. ಬಯಸಿದ್ದು ಸಿಗಲು ಪರಿಶ್ರಮ ಪಡಬೇಕಾಗುತ್ತದೆ. ಯೋಗ್ಯ ವಯಸ್ಕರು ಸೂಕ್ತ ಸಂಬಂಧಕ್ಕಾಗಿ ಕೆಲವು ದಿನ ಕಾಯಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಮುನ್ನಡೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ಮಿಥುನ: ಹಿತ ಶತ್ರುಗಳ ಕಾಟವಿದ್ದರೂ ವೃತ್ತಿರಂಗದಲ್ಲಿ ನಿಮ್ಮ ಯಶಸ್ಸು ತಡೆಯಲು ಯಾರಿಂದಲೂ ಸಾಧ‍್ಯವಿಲ್ಲ. ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನ ಕರೆ ಬರಲಿದೆ. ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗ ಮಾಡಲಿದ್ದೀರಿ.

ಕರ್ಕಟಕ: ಅನಗತ್ಯ ಯೋಚನೆಗಳಿಗೆ ಕಡಿವಾಣ ಹಾಕಿದಲ್ಲಿ ಮಾನಸಿಕ ನೆಮ್ಮದಿ ಸಿಗಲಿದೆ. ನಿಮ್ಮದಲ್ಲದ ವಸ್ತುಗಳಿಗೆ ಆಸೆಪಡಲು ಹೋದರೆ ನಿರಾಸೆಯಾದೀತು. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ಸಿಂಹ: ಸಾಂಸಾರಿಕವಾಗಿ ನಿಮ್ಮ ಮನಕ್ಲೇಶಗಳು ಸಂಬಂಧ ಹಾಳು ಮಾಡೀತು. ತಾಳ್ಮೆ, ಸಂಯಮದಿಂದ ವರ್ತಿಸಬೇಕಾಗುತ್ತದೆ. ಕೋರ್ಟು ಕಚೇರಿ ವ್ಯವಹಾರಗಳಿಗೆ ಓಡಾಟ ನಡೆಸಬೇಕಾಗಬಹುದು. ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಕನ್ಯಾ: ಚರ್ಮ ಸಂಬಂಧೀ ರೋಗ ರುಜಿನಗಳು ಕಾಣಿಸಿಕೊಂಡೀತು. ಎಚ್ಚರಿಕೆ ಅಗತ್ಯ. ಸಂಗಾತಿಯ ಹಿತ ವಚನಗಳಿಗೆ ಕಿವಿಗೊಡಬೇಕಾಗುತ್ತದೆ. ರಾಜಕೀಯ ರಂಗದಲ್ಲಿರುವವರಿಗೆ ಮುನ್ನಡೆಯಿರಲಿದೆ. ಸಕಾಲದಲ್ಲಿ ಧನಾಗಮನವಾಗುವುದರಿಂದ ಆರ್ಥಿಕ ಅಡಚಣೆ ತಪ್ಪುವುದು.

ತುಲಾ: ಚಿಂತಿತ ಕೆಲಸಗಳನ್ನು ಜಾರಿಗೆ ತರಲು ಇದು ಸಕಾಲ. ಸಾಂಸಾರಿಕವಾಗಿ ಸಾಕಷ್ಟು ಬದಲಾವಣೆಗೆ ಸಿದ್ಧರಾಗಬೇಕಾಗುತ್ತದೆ. ಎಲ್ಲರ ಅಭಿಪ್ರಾಯ ಪಡೆದು ಮುನ್ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಕಿರು ಸಂಚಾರ ಮಾಡಬೇಕಾಗುತ್ತದೆ.

ವೃಶ್ಚಿಕ: ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿವೆ. ಸಾರ್ವಜನಿಕ ವಲಯದಲ್ಲಿ ನಿಮ್ಮ ಕೆಲಸ ಕಾರ್ಯಗಳಿಗೆ ಪ್ರಶಂಸೆ ವ್ಯಕ್ತವಾಗಲಿದೆ. ಆರ್ಥಿಕವಾಗಿ ಆಕಸ್ಮಿಕ ಧನಲಾಭ ಯೋಗವಿದೆ. ವಿದ್ಯಾರ್ಥಿಗಳಿಗೆ ಭವಿಷ್ಯದ ಯೋಜನೆ ಮಾಡುವ ಕಾಲ.

ಧನು: ದೇಹಾರೋಗ್ಯದಲ್ಲಿ ಸುಧಾರಣೆಯಾಗಲಿದ್ದು, ಮನಸ್ಸಿಗೆ ಸಂತಸವಾಗಲಿದೆ. ಮನೆಗೆ ಅನಿರೀಕ್ಷಿತ ನೆಂಟರಿಷ್ಟರ ಆಗಮನವಾಗಲಿದೆ. ಮಕ್ಕಳ ವಿಚಾರದಲ್ಲಿ ಅನಗತ್ಯ ಚಿಂತೆ ಬೇಡ. ಆರ್ಥಿಕವಾಗಿ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ.

ಮಕರ: ಹಿರಿಯರೊಡನೆ ಕೆಲವು ಭಿನ್ನಾಭಿಪ್ರಾಯಗಳು ತಲೆದೋರೀತು. ಆದರೆ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಜವಾಬ್ಧಾರಿ ನಿಮ್ಮದಾಗಲಿದೆ. ಅಪರಿಚಿತರಿಂದ ದೂರವಿರುವುದೇ ಉತ್ತಮ. ಕಿರು ಪ್ರಯಾಣ ಮಾಡಬೇಕಾಗುತ್ತದೆ. ವಾಹನ ಚಾಲನೆಯಲ್ಲಿ ಎಚ್ಚರಿಕೆಯಿಂದಿರಿ.

ಕುಂಭ: ಸಾಂಸಾರಿಕವಾಗಿ ಕೆಲವೊಂದು ಘಟನೆಗಳು ನಿಮ್ಮ ಮನಸ್ಸಿಗೆ ಬೇಸರವುಂಟು ಮಾಡಬಹುದು. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದಿರುವುದು ಅಗತ್ಯ. ಮಕ್ಕಳ ದೇಹಾರೋಗ್ಯದ ಬಗ್ಗೆ ಗಮನಕೊಡಿ. ಶೈಕ್ಷಣಿಕ ರಂಗದಲ್ಲಿರುವವರಿಗೆ ಪ್ರಗತಿ ಯೋಗವಿದೆ.

ಮೀನ: ನಿಮ್ಮ ಭವಿಷ್ಯದ ಯೋಜನೆಗಳನ್ನು ನನಸು ಮಾಡಲು ತಯಾರಿ ನಡೆಸಲಿದ್ದೀರಿ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಕೊಂಚ ಬಿಡುವು ಸಿಗಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಧನವ್ಯಯ ಮಾಡಲಿದ್ದೀರಿ. ಹಿರಿಯರು ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತುಳಸಿ ಕಟ್ಟೆ ಹತ್ತಿರ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬಾರದು