ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶನಿವಾರ, 30 ಮೇ 2020 (08:51 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಆರ್ಥಿಕವಾಗಿ ನಿಮ್ಮ ಜವಾಬ್ಧಾರಿಯುತ ನಡೆ ಮುಂದಿನ ಭವಿಷ್ಯಕ್ಕೆ ಪೂರಕವಾಗಲಿದೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಕೆಲಸ ಸುಗಮವಾಗಲಿದೆ. ಸಾಂಸಾರಿಕವಾಗಿ ನೆಮ್ಮದಿಯಿರಲಿದೆ. ದೇವತಾ ಪ್ರಾರ್ಥನೆ ಮರೆಯದಿರಿ.

ವೃಷಭ: ನಿಮ್ಮ ಮರೆವಿನ ಕಾರಣದಿಂದ ವೃತ್ತಿರಂಗದಲ್ಲಿ ಅಚಾತುರ್ಯ ನಡೆಯಬಹುದು. ಎಚ್ಚರಿಕೆಯಿಂದ ಹೆಜ್ಜೆಯಿಡಬೇಕಿದೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಬೇಕೆಂದುಕೊಂಡರೂ ಸಮಯದ ಅಭಾವ ಕಾಡಲಿದೆ. ಮಾನಸಿಕ ನೆಮ್ಮದಿಗೆ ದೇವರ ಪ್ರಾರ್ಥನೆ ಮಾಡಿ.

ಮಿಥುನ: ಸಾಂಸಾರಿಕವಾಗಿ ನಿಮ್ಮ ಕೆಲವೊಂದು ನಿರ್ಧಾರಗಳು ಭಿನ್ನಾಭಿಪ್ರಾಯಗಳಿಗೆ ಕಾರಣವಾಗಬಹುದು. ಕೈ ಹಾಕಿದ ಕೆಲಸಗಳಿಗೆ ಅಡೆತಡೆಗಳು ತೋರಿಬಂದೀತು. ಚಿತ್ತ ಚಾಂಚಲ್ಯದಿಂದ ನಿರ್ಧಾರಗ ಕೈಗೊಳ್ಳಲು ತೊಂದರೆಯಾಗಬಹುದು. ದಿನದಂತ್ಯಕ್ಕೆ ಶುಭ ಸುದ್ದಿ.

ಕರ್ಕಟಕ: ಸರಕಾರಿ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಆಸ್ತಿ ವಿಚಾರದಲ್ಲಿ ಇದುವರೆಗೆ ಇದ್ದ ಸಂಘರ್ಷಗಳಿಗೆ ಒಂದು ರೀತಿಯ ಅಂತ್ಯ ಕಾಣಿಸಲಿದ್ದೀರಿ. ಉದ್ದೇಶಿತ ಮಂಗಲ ಕಾರ್ಯಗಳನ್ನು ನೆರವೇರಿಸಲಿದ್ದೀರಿ. ಅತಿಥಿಗಳ ಆಗಮನವಾಗಲಿದೆ.

ಸಿಂಹ: ವಿದ್ಯಾರ್ಥಿಗಳು ಪ್ರಯತ್ನಬಲದಿಂದ ಉತ್ತಮ ಫಲಿತಾಂಶ ಕಾಣಲಿದ್ದಾರೆ. ಸಾಂಸಾರಿಕ ಸುಖಕ್ಕೆ ಕೊರತೆಯಿರದು. ಅವಿವಾಹಿತರು ಶೀಘ‍್ರ ಕಂಕಣ ಭಾಗ್ಯ ಅನುಭವಿಸಲಿದ್ದಾರೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ತಾಳ್ಮೆ, ಸಂಯಮವಿರಲಿ.

ಕನ್ಯಾ: ಮನೆಯಲ್ಲಿ ಹಿರಿಯರ ಮನಸ್ಸಿಗೆ ನೋವಾಗುವಂತಹ ಮಾತುಗಳಾಡಬೇಡಿ. ಸಂಗಾತಿಯ ಮನೋಭಿಲಾಷೆ ಈಡೇರಿಸಲಿದ್ದೀರಿ. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸಲಿದ್ದೀರಿ. ಅತಿಯಾದ ಆತ್ಮವಿಶ್ವಾಸವೂ ಒಳ್ಳೆಯದಲ್ಲ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ತುಲಾ: ದೇಹಾರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ವಾಹನ ಸವಾರರು ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು. ಪ್ರೇಮಿಗಳಿಗೆ ಇಷ್ಟ ವ್ಯಕ್ತಿಗಳ ಅಗಲುವಿಕೆಯ ದೂರ ಕಾಡಲಿದೆ. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ.

ವೃಶ್ಚಿಕ: ಚಿಂತಿತ ಕೆಲಸಗಳನ್ನು ಪೂರೈಸಲು ಅಡ್ಡಿ ಆತಂಕಗಳು ಎದುರಾದರೂ ಅಂತಿಮ ಜಯ ನಿಮ್ಮದಾಗಲಿದೆ. ಆತ್ಮವಿಶ್ವಾಸವೇ ನಿಮ್ಮ ಅಸ್ತ್ರವಾಗಲಿದೆ. ಆರ್ಥಿಕವಾಗಿ ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ಧನು: ಸಾಂಸಾರಿಕವಾಗಿ ಸುಖ ಶಾಂತಿ ಉತ್ತಮವಾಗಿರಲಿದೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಇಷ್ಟ ದೇವರ ಪ್ರಾರ್ಥೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಶುಭವಾಗಲಿದೆ. ಹಿರಿಯರಿಗೆ ವಾತ ಸಂಬಂಧೀ ಆರೋಗ್ಯ ಸಮಸ್ಯೆ ಕಾಡಬಹುದು.

ಮಕರ: ಸ್ವಪ್ರಯತ್ನದಿಂದ ಮುನ್ನಡೆದರೆ ನಿಮ್ಮನ್ನು ಯಾರಿಗೂ ತಡೆಯಲಾಗದು. ನೂತನ ವೃತ್ತಿ ಆರಂಭಿಸಿದವರಿಗೆ ಹೊಸ ಸವಾಲುಗಳು ಎದುರಾಗಲಿವೆ. ಅನಿರೀಕ್ಷಿತ ರೀತಿಯಲ್ಲಿ ಧನಾಗಮನವಾಗಲಿದೆ. ಹೊಸ ಮಿತ್ರರ ಸಂಪಾದನೆ ಮಾಡಲಿದ್ದೀರಿ. ಚಿಂತೆ ಬೇಡ.

ಕುಂಭ: ಮಾನಸಿಕ ಸ್ಥಿತಿ ಅಲ್ಲೋಕಲ್ಲೋಲವಾಗಲಿದೆ. ಆರ್ಥಿಕವಾಗಿ ಹೆಚ್ಚಿನ ಖರ್ಚು ವೆಚ್ಚಗಳಾಗದಂತೆ ಎಚ್ಚರಿಕೆ ವಹಿಸಿ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದಿದ್ದರೆ ದೇಹಾರೋಗ್ಯದಲ್ಲಿ ಏರುಪೇರಾಗಬಹುದು. ದಾಯಾದಿಗಳಿಂದ ಕಿರಿ ಕಿರಿ ಉಂಟಾಗಬಹುದು.

ಮೀನ: ನಿಮ್ಮ ದೃಢ ನಿರ್ಧಾರಗಳೇ ನಿಮಗೆ ರಕ್ಷಣೆಯಾಗಲಿದೆ. ಮಹಿಳೆಯರಿಗೆ ಉದ್ಯೋಗದಲ್ಲಿ ಒತ್ತಡವಿರಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಮುನ್ನಡೆ ಸಿಗಲಿದೆ. ಮನಸ್ಸಿನಲ್ಲಿ ಅಂದುಕೊಂಡ ಕೆಲಸಗಳನ್ನು ಕಾರ್ಯರೂಪಕ್ಕೆ ಇಳಿಸಲಿದ್ದೀರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಹಣಕಾಸಿನ ಸಮಸ್ಯೆಯಿದ್ದರೆ ಕನಕಧಾರಾ ಸ್ತೋತ್ರ ತಪ್ಪದೇ ಓದಿ

2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪ್ರಾರ್ಥನೆ ಮಾಡಬೇಕು ಗಮನಿಸಿ

ಗಣೇಶ ಕವಚ ಸ್ತೋತ್ರವನ್ನು ಮಕ್ಕಳಿಗೆ ಹೇಳಿಸಿ

ಈ ಐದು ರಾಶಿಯವರಿಗೆ 2026 ರಲ್ಲಿ ಸ್ವಂತ ಮನೆ ಕನಸು ನನಸಾಗುತ್ತದೆ

ಮಂಗಳವಾರ ದೇವಿಯ ಅನುಗ್ರಹಕ್ಕಾಗಿ ನವರತ್ನ ಮಾಲಿಕಾ ಸ್ತೋತ್ರ

ಮುಂದಿನ ಸುದ್ದಿ
Show comments