Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶುಕ್ರವಾರ, 29 ಮೇ 2020 (08:42 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕಾರ್ಯಕ್ಷೇತ್ರದಲ್ಲಿ ನಿರ್ಧಾರ ಕೈಗೊಳ್ಳುವಾಗ ಗೊಂದಲ ಕಾಡಬಹುದು. ಮೇಲಧಿಕಾರಿಗಳು ನಿಮ್ಮ ಅಭಿಪ್ರಾಯಗಳನ್ನು ಕಡೆಗಣಿಸುವುದರಿಂದ ಮನಸ್ಸಿಗೆ ಬೇಸರವಾಗಬಹುದು. ಅವಿವಾಹಿತರಿಗೆ ಶೀಘ‍್ರ ಕಂಕಣ ಬಲ ಕೂಡಿಬರಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ದೈವಾನುಕೂಲದಿಂದ ಇಂದು ನೀವು ಕೈಗೊಳ್ಳಲಿರುವ ಕಾರ್ಯಗಳು ಸುಗಮವಾಗಿ ನೆರವೇರಲಿದೆ. ಕಾರ್ಯರಂಗದಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಸಮಸ್ಯೆಗಳು ಬಗೆಹರಿಯಲಿವೆ. ಉದ್ಯೋಗ ಬದಲಾವಣೆಗೆ ಮನಸ್ಸು ಮಾಡಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ಮಿಥುನ: ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡುವುದನ್ನು ಕಲಿಯಬೇಕು. ಆರ್ಥಿಕವಾಗಿ ಹಣಕಾಸಿನ ಸಮಸ್ಯೆಗಳು ದೂರವಾಗಲಿದೆ. ನೆರೆಹೊರೆಯವರೊಂದಿಗೆ ಸಹಕಾರವಿದ್ದರೆ ಉತ್ತಮ. ಆದರೆ ಹಿತಶತ್ರುಗಳಿಗೆ ನಿಮ್ಮ ಜೀವನದಲ್ಲಿ ಮೂಗು ತೂರಿಸಲು ಅವಕಾಶ ಕೊಡಬೇಡಿ.

ಕರ್ಕಟಕ: ಕಾರ್ಯಕ್ಷೇತ್ರದಲ್ಲಿ ಅಧಿಕ ಕಾರ್ಯದೊತ್ತಡದಿಂದ ದೇಹಾಯಾಸವಾಗಬಹುದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಗೃಹ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚಗಳಾಗಲಿವೆ. ಸಂಗಾತಿಯ ಮನೋಭಿಲಾಷೆ ಈಡೇರಿಸಲಿದ್ದೀರಿ. ದಿನದಂತ್ಯಕ್ಕೆ ಶುಭ ಸುದ್ದಿ.

ಸಿಂಹ: ನಿಮ್ಮ ಸುತ್ತಲಿನ ಜನರೇ ನಿಮ್ಮ ದಾರಿ ತಪ್ಪಿಸಲಿದ್ದೀರಿ. ದೃಢ ನಿರ್ಧಾರದಿಂದ ಮುನ್ನಡೆದರೆ ಕಾರ್ಯದಲ್ಲಿ ಯಶಸ್ಸು ಕಾಣಲಿದ್ದೀರಿ. ಧನಾದಾಯ ಗಳಿಕೆಗೆ ನಾನಾ ಮಾರ್ಗಗಳನ್ನು ಹುಡುಕಾಡಲಿದ್ದೀರಿ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಇಷ್ಟ ಭೋಜನ ಯೋಗವಿದೆ.

ಕನ್ಯಾ: ಅನಾವಶ್ಯಕ ಉದ್ವೇಗಕ್ಕೊಳಗಾಗಬೇಡಿ. ನಯವಂಚಕರ ಮಾತಿಗೆ ಮರಳಾಗಬೇಡಿ. ಉದ್ಯೋಗ ಕ್ಷೇತ್ರದಲ್ಲಿ ಮೈಮರೆತರೆ ಅನಾಹುತವಾದೀತು. ಆರ್ಥಿಕವಾಗಿ ಅನಿರೀಕ್ಷಿತ ಖರ್ಚು ವೆಚ್ಚಗಳಾಗಲಿವೆ. ಬಾಕಿ ಹಣ ಸಂದಾಯವಾಗಲಿದೆ.

ತುಲಾ: ಅನಿರೀಕ್ಷಿತವಾಗಿ ದೂರ ಪ್ರಯಾಣಕ್ಕೆ ಸಿದ್ಧತೆ ನಡೆಸಬೇಕಾಗುತ್ತದೆ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆ ಬರಲಿದೆ. ದಾಯಾದಿಗಳಿಂದ ಆಸ್ತಿ ತಗಾದೆ ಬರಲಿದೆ. ಹಿರಿಯರ ಮಾತಿಗೆ ಬೆಲೆಕೊಡಿ. ದೇವಾಲಯ ಸಂದರ್ಶನ ಯೋಗವಿದೆ.

ವೃಶ್ಚಿಕ: ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಭರವಸೆ ಸಿಗಲಿದೆ. ದೇಹಾರೋಗ್ಯದಲ್ಲಿ ಕೈಕೊಟ್ಟು ಚಿಂತೆಗೆ ಕಾರಣವಾಗಬಹುದು. ಆರ್ಥಿಕವಾಗಿ ಹಣಕಾಸಿನ ಸಮಸ್ಯೆಗಳು ದೂರವಾಗಲಿದೆ. ದೇವತಾ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.

ಧನು: ವಿದ್ಯಾರ್ಥಿಗಳಿಗೆ ಯಶಸ್ಸಿಗೆ ಕಠಿಣ ಪರಿಶ್ರಮ ಅಗತ್ಯ. ಉದ್ಯೋಗ ಬದಲಾವಣೆಗೆ ಮನಸ್ಸು ಮಾಡಲಿದ್ದೀರಿ. ಗೃಹ ರಿಪೇರಿ ಕೆಲಸಗಳಿಗೆ ಖರ್ಚು ವೆಚ್ಚಗಳಾಗಲಿವೆ. ಆಹಾರ ಬದಲಾವಣೆಯಿಂದ ದೇಹಾರೋಗ್ಯದಲ್ಲಿ ಏರುಪೇರಾಗಲಿದೆ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕಿ.

ಮಕರ: ಕೌಟುಂಬಿಕವಾಗಿ ಬಂಧುಮಿತ್ರರ ಆಗಮನದಿಂದ ಮನಸ್ಸಿಗೆ ಸಂತಸವಾಗಲಿದೆ. ವೃತ್ತಿರಂಗದಲ್ಲಿ ಮುನ್ನಡೆಯ ಯೋಗವಿದೆ. ಸರಕಾರಿ ಕೆಲಸಗಳಿಗಾಗಿ ಓಡಾಟ ನಡೆಸಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸಲಿದ್ದೀರಿ.

ಕುಂಭ: ಸಾಂಸಾರಿಕವಾಗಿ ಸುಖಕ್ಕೆ ಕೊರತೆಯಿರದು. ಆದರೆ ಅನಗತ್ಯ ಚಿಂತೆಗಳಿಗೆ ಕಡಿವಾಣ ಹಾಕಬೇಕು. ವೃತ್ತಿರಂಗದಲ್ಲಿ ಇದ್ದ ಸಮಸ್ಯೆಗಳು ನಿಧಾನವಾಗಿ ದೂರವಾಗಲಿದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ಅವಸರದ ನಿರ್ಧಾರ ಕೈಗೊಳ್ಳಲು ಹೋಗಬೇಡಿ.

ಮೀನ: ಮನೋಕಾಮನೆ ಪೂರೈಸಲು ಪರಿಶ್ರಮಪಡಬೇಕು. ಮಹಿಳೆಯರಿಗೆ ಉದ್ಯೋಗದಲ್ಲಿ ಮುನ್ನಡೆಯ ಯೋಗವಿದೆ. ಹಿರಿಯರಿಂದ ಅನಿರೀಕ್ಷಿತ ಉಡುಗೊರೆ ನಿರೀಕ್ಷಿಸಬಹುದು. ನಿಮ್ಮ ಕ್ರಿಯಾಶೀಲತೆ ಪ್ರಕಟಿಸಲಿ ವೇದಿಕೆ ಸಿಗಲಿದೆ. ದಿನದಂತ್ಯಕ್ಕೆ ಶುಭ ಸುದ್ದಿ ಕಾದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಣ ಪರ್ಸ್ ನಲ್ಲಿ ಸದಾ ಇರಬೇಕೆಂದರೆ ಶುಕ್ರವಾರದಂದು ಪರ್ಸ್ ಗೆ ಹೀಗೆ ಮಾಡಿ