Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಗುರುವಾರ, 28 ಮೇ 2020 (09:12 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಚಿತ್ತ ಚಾಂಚಲ್ಯದಿಂದಾಗಿ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗಬಹುದು. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಮೇಲೆ ಅಸಹನೆ ಮೂಡಬಹುದು. ಸಾಂಸಾರಿಕವಾಗಿ ನಿಮ್ಮ ತಾಳ್ಮೆಯೇ ಮುಖ್ಯವಾಗಲಿದೆ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ವೃತ್ತಿರಂಗದಲ್ಲಿ ಕಾರ್ಯದೊತ್ತಡ ಅಧಿಕವಿದ್ದರೂ ನಿಮ್ಮ ಚಾಕಚಕ್ಯತೆಯಿಂದ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವಿರಿ. ನಿಮ್ಮ ನೇರ ಮಾತು ಇತರರಿಗೆ ಇಷ್ಟವಾಗದೇ ಹೋಗಬಹುದು. ಅವಿವಾಹಿತರಿಗೆ ಕಂಕಣ ಬಲವಿದೆ. ಪಾಲಿಗೆ ಬಂದ ಅವಕಾಶ ಸದುಪಯೋಗಪಡಿಸಿಕೊಳ್ಳಿ.

ಮಿಥುನ: ಉದ್ಯೋಗ ಬದಲಾವಣೆಗೆ ಚಿಂತನೆ ನಡೆಸಲಿದ್ದೀರಿ. ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಮಾಲಿಕರ ಕಿರಿ ಕಿರಿ ಎದುರಾದೀತು. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸಲಿದ್ದೀರಿ. ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನ ಕರೆ ಬರುವುದು.

ಕರ್ಕಟಕ: ವೈಯಕ್ತಿಕ ವಿಚಾರವನ್ನು ಇತರರೊಂದಿಗೆ ಹಂಚಿಕೊಳ್ಳುವ ಮೊದಲು ಅವರು ವಿಶ್ವಾಸಾರ್ಹರೋ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕಾರ್ಯಕ್ಷೇತ್ರದಲ್ಲಿ ಕ್ಷುಲ್ಲುಕ ಕಾರಣಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಆದಾಯ ಗಳಿಕೆಗೆ ನಾನಾ ಮಾರ್ಗ ಹುಡುಕಾಡಲಿದ್ದೀರಿ.

ಸಿಂಹ: ಸಾಮಾಜಿಕ ಸೇವೆಗಳಲ್ಲಿ ಆಸಕ್ತಿ ಮೂಡಲಿದೆ. ಸರಕಾರಿ ಉದ್ಯೋಗಿಗಳಿಗೆ ಸ್ಥಾನ ಪಲ್ಲಟ ಭೀತಿ ಎದುರಾಗಬಹುದು. ದೇಹಾರೋಗ್ಯದಲ್ಲಿ ಏರುಪೇರಾಗುವ ಸಾಧ‍್ಯತೆಯಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಸಕ್ತಿ ಮೂಡಲಿದೆ. ದೇವತಾ ಪ್ರಾರ್ಥನೆ ಮಾಡಿದರೆ ಶುಭ.

ಕನ್ಯಾ: ವಿದ್ಯಾರ್ಥಿಗಳು ಕೆಟ್ಟ ಸ್ನೇಹಿತರ ಸಂಗದಿಂದ ಹಾಳು ವ್ಯಸನಕ್ಕೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕು. ಮನೆಯಲ್ಲಿ ಶುಭ ಮಂಗಲ ಕಾರ್ಯಗಳ ಸಿದ್ಧತೆ ನಡೆಸಲಿದ್ದೀರಿ. ಸಾಂಸಾರಿಕ ಸುಖಕ್ಕೆ ಕೊರತೆಯಿರದು. ಆರ್ಥಿಕವಾಗಿ ಖರ್ಚು ವೆಚ್ಚಗಳಾಗಲಿವೆ.

ತುಲಾ: ವಾಹನ ಖರೀದಿಗೆ ಅನುಕೂಲಕರವಾದ ದಿನವಿದು. ಅವಿವಾಹಿತ ಕನ್ಯಾಮಣಿಗಳಿಗೆ ಶೀಘ್ರದಲ್ಲೇ ಮನಸ್ಸಿಗೆ ಹಿಡಿಸುವ ಸಂಬಂಧಗಳು ಕೂಡಿಬರಲಿವೆ. ಕಾರ್ಯನಿಮಿತ್ತ ಬೇರೆ ಊರಿಗೆ ಸಂಚಾರ ಮಾಡಬೇಕಾಗುತ್ತದೆ. ವಾಹನ ಸವಾರರು ಚಾಲನೆಯಲ್ಲಿ ಎಚ್ಚರಿಕೆ ವಹಿಸಬೇಕು.

ವೃಶ್ಚಿಕ: ಉದ್ಯೋಗ ಕ್ಷೇತ್ರದಲ್ಲಿ ವೈಯಕ್ತಿಕ ಏಳಿಗೆಗೆ ಅವಕಾಶಗಳು ಒದಗಿಬರಲಿವೆ. ಕ್ರಿಯಾತ್ಮಕತೆಯಿಂದ ಕ್ಲಿಷ್ಟಕರ ಸಮಸ್ಯೆಯನ್ನು ಪರಿಹರಿಸಲಿದ್ದೀರಿ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಹಿರಿಯರ ಸಲಹೆಗಳನ್ನು ಗೌರವಿಸಿ.

ಧನು: ಹಿರಿಯರಿಗೆ ವಾತ ಸಂಬಂಧೀ ಆರೋಗ್ಯ ಸಮಸ್ಯೆಗಳು ಕಂಡುಬಂದೀತು. ಎಚ್ಚರಿಕೆ ಅಗತ್ಯ. ಮಾತಿನ ಮೇಲೆ ನಿಗಾ ಇರಲಿ. ದುಡುಕಿನ ವರ್ತನೆಯಿಂದ ಕೈಗೆ ಬಂದ ಅವಕಾಶ ಹಾಳುಮಾಡಿಕೊಳ್ಳಬೇಡಿ. ಆರ್ಥಿಕವಾಗಿ ಸಮಾಧಾನಕರ ದಿನವಾಗಿರಲಿದೆ.

ಮಕರ: ಕಳೆದು ಹೋದ ವಸ್ತು, ಸಂಬಂಧಗಳು ಮರಳಿ ಕೈ ಸೇರಲಿದ್ದು, ಸಂತಸದ ದಿನ ನಿಮ್ಮದಾಗಲಿದೆ. ಹೊಸ ಯೋಜನೆಗಳಿಗೆ ಕೈ ಹಾಕಲಿದ್ದೀರಿ. ಕೂಡಿಟ್ಟ ಹಣ ಖರ್ಚಾಗುವ ಭೀತಿ. ಹಿತಶತ್ರುಗಳನ್ನು ದೂರವಿಡುವುದು ಉತ್ತಮ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕುಂಭ: ನಿರುದ್ಯೋಗಿಗಳು ಉದ್ಯೋಗ ಸಂದರ್ಶನಕ್ಕಾಗಿ ಪರವೂರಿಗೆ ಪ್ರಯಾಣ ಮಾಡಬೇಕಾಗಿ ಬರಬಹುದು. ಮಾನಸಿಕ ನೆಮ್ಮದಿಗಾಗಿ ದೇವರ ಮೊರೆ ಹೋಗುವಿರಿ. ಹಿರಿಯರಿಗೆ ದೇವಾಲಯ ಸಂದರ್ಶನ ಯೋಗವಿದೆ. ಬಾಕಿ ಹಣ ಪಾವತಿಯಾಗಲಿದೆ.

ಮೀನ: ಸಾಂಸಾರಿಕವಾಗಿ ನಿಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳದೇ ಇದ್ದರೆ ಭಿನ್ನಾಭಿಪ್ರಾಯಗಳು ಎದುರಾದೀತು. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೇ ಸಾಧನೆಯ ಕಡೆಗೆ ಗಮನ ಹರಿಸಬೇಕು. ಅನಿರೀಕ್ಷಿತ ರೀತಿಯಲ್ಲಿ ಕಾರ್ಯಸಾಧನೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಮತ್ತೆ ಹಣ ನಿಮ್ಮ ಕೈ ಸೇರಬೇಕೆಂದರೆ ಬೀರುವಿನಿಂದ ಹಣ ತೆಗೆಯುವಾಗ ಹೀಗೆ ಮಾಡಿ