Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶುಕ್ರವಾರ, 14 ಫೆಬ್ರವರಿ 2020 (08:49 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ವೃತ್ತಿರಂಗದಲ್ಲಿ ಭಿನ್ನಾಭಿಪ್ರಾಯಗಳಿಂದಾಗಿ ಮಾನಸಿಕವಾಗಿ ನೆಮ್ಮದಿಯಿರದು. ನಿಮ್ಮ ಆಂತರಿಕ ವಿಚಾರದಲ್ಲಿ ಮೂರನೆಯವರಿಗೆ ಮೂಗು ತೂರಿಸಲು ಅವಕಾಶ ಕೊಡಬೇಡಿ. ಸಾಂಸಾರಿಕವಾಗಿ ಸಂಗಾತಿಯ ಸಹಕಾರ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ಹಳೆಯ ಸಮಸ್ಯೆಗಳು ಮತ್ತೆ ದುತ್ತನೆ ಎದುರಾಗಲಿವೆ. ಮಿತ್ರರ ಸಹಕಾರ ಸಿಗಲಿದೆ. ಸಾಂಸಾರಿಕವಾಗಿ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸಂಗಾತಿಯ  ಅಭಿಪ್ರಾಯಕ್ಕೆ ಬೆಲೆಕೊಡಿ. ಆಕಸ್ಮಿಕವಾಗಿ ಧನಾಗಮನವಾಗಲಿದ್ದು, ಅಂದುಕೊಂಡ ಕೆಲಸ ನೆರವೇರಿಸುವಿರಿ.

ಮಿಥುನ: ಆರ್ಥಿಕವಾಗಿ ಕಷ್ಟದ ದಿನಗಳು ದೂರವಾಗಲಿದ್ದು, ಒಂದೊಂದಾಗಿ ಅಭಿವೃದ್ಧಿ ಕೆಲಸಗಳಿಗೆ ಮುಂದಾಗುವಿರಿ. ವೃತ್ತಿರಂಗದಲ್ಲಿ ಕೆಲವು ಅಡೆತಡೆಗಳು ಬಂದಾವು. ಅವಿವಾಹಿತರಿಗೆ ಶೀಘ‍್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ದಿನದಂತ್ಯಕ್ಕೆ ಶುಭ ಸುದ್ದಿ.

ಕರ್ಕಟಕ: ಉದ್ಯೋಗ ಕ್ಷೇತ್ರದಲ್ಲಿ ನೀವು ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಲಿದ್ದೀರಿ. ಮೇಲಧಿಕಾರಿಗಳ ಪ್ರಶಂಸೆಗೊಳಗಾಗುವಿರಿ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಕೆಲಸದಲ್ಲಿ ನಿರಾಸಕ್ತಿ ಕಂಡುಬರಲಿದೆ. ವಾತ ಸಂಬಂಧೀ ಆರೋಗ್ಯ ಸಮಸ್ಯೆ ಬಗ್ಗೆ ಎಚ್ಚರಿಕೆಯಿರಲಿ.

ಸಿಂಹ: ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸಲಿದ್ದೀರಿ. ಆರ್ಥಿಕವಾಗಿ ಹಣಕಾಸಿನ ತೊಂದರೆಗಳು ದೂರವಾಗಲಿದೆ. ಹೊಸ ಯೋಜನೆಗಳಿಗೆ ಕೈಹಾಕಲು ಇದು ಸಕಾಲ. ನಿರುದ್ಯೋಗಿಗಳು ಉದ್ಯೋಗ ಸಂಬಂಧವಾಗಿ ದೂರ ಸಂಚಾರ ಮಾಡಬೇಕಾಗುತ್ತದೆ.

ಕನ್ಯಾ: ತಾಳ‍್ಮೆ ಕಳೆದುಕೊಂಡರೆ ಸಾಂಸಾರಿಕ ಸಂಬಂಧಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಸಂಯಮದಿಂದ ವರ್ತಿಸಿದರೆ ಉತ್ತಮ. ವಿದ್ಯಾರ್ಥಿಗಳಿಗೆ ಪ್ರಯತ್ನಬಲವಿದ್ದರೆ ಮಾತ್ರ ಯಶಸ್ಸು ಸಾಧ‍್ಯ. ಅಧಿಕ ಲಾಭ ತರುವ ಯೋಜನೆಗಳಿಗೆ ಕೈ ಹಾಕುವ ಮುನ್ನ ಸರಿಯಾಗಿ ಯೋಚಿಸಿ.

ತುಲಾ: ವ್ಯಾಪಾರ ವ್ಯವಹಾರದಿಂದ ನಷ್ಟವಾಗದು. ಹೊಸ ಮನೆ, ಭೂಮಿ ಖರೀದಿಗೆ ಮನಸ್ಸು ಮಾಡುವಿರಿ. ಸರಕಾರಿ ಕೆಲಸಗಳಲ್ಲಿ ಜಯ ಸಿಗಲಿದೆ. ನಿಮ್ಮ ಯಶಸ್ಸು ನೋಡಿ ಆಪ್ತರೇ ಅಸೂಯೆಪಡುವರು. ಶುಭ ಲಾಭಗಳಿಗೆ ಕುಲ ದೇವರ ಪ್ರಾರ್ಥನೆ ಮಾಡಿ.

ವೃಶ್ಚಿಕ: ವೈವಾಹಿಕ ಪ್ರಸ್ತಾಪಗಳಿಗೆ ಇದುವರೆಗೆ ಇದ್ದ ಅಡೆತಡೆಗಳು ದೂರವಾಗಲಿದ್ದು, ಶೀಘ್ರ ಕಂಕಣ ಬಲ ಕೂಡಿಬರಲಿದೆ. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು, ಆದರೆ ದುಂದು ವೆಚ್ಚಗಳಿಗೆ ಕಡಿವಾಣ ಹಾಕುವುದು ಉತ್ತಮ. ಕಿರು ಸಂಚಾರದಿಂದ ಕಾರ್ಯಪ್ರಾಪ್ತಿಯಾಗುವುದು.

ಧನು: ಕಾರ್ಯಕ್ಷೇತ್ರದಲ್ಲಿ ಸಾಕಷ್ಟು ಅಡೆತಡೆಗಳು ತೋರಿಬಂದೀತು. ಧನಾರ್ಜನೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳುವಿರಿ. ನಿರುದ್ಯೋಗಿಗಳು ಹೊಸ ಸವಾಲಿಗೆ ಸಿದ್ಧರಾಗುವಿರಿ. ಜೀರ್ಣಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬರಬಹುದು, ಎಚ್ಚರಿಕೆ ವಹಿಸಿ.

ಮಕರ: ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಸಿಗಲಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಹಿರಿಯರಿಗೆ ಪುಣ್ಯ ಕ್ಷೇತ್ರಗಳ ಸಂದರ್ಶನ ಯೋಗವಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ವ್ಯವಹಾರದಿಂದ ಲಾಭವಾಗಲಿದೆ.

ಕುಂಭ: ಯಾವುದೇ ಕೆಲಸ ಕಾರ್ಯಗಳನ್ನು ಮಾಡುವ ಮೊದಲು ಕುಲದೇವರ ಪ್ರಾರ್ಥನೆ ಮಾಡಿ ಮುನ್ನಡೆಯುವುದು ಒಳ್ಳೆಯದು. ವೈಯಕ್ತಿಕವಾಗಿ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಿ. ಮನೆಗೆ ಅನಿರೀಕ್ಷಿತವಾಗಿ ನೆಂಟರಿಷ್ಟರ ಆಗಮನವಾಗಲಿದೆ.

ಮೀನ: ಮಕ್ಕಳ ಆರೋಗ್ಯದ ವಿಚಾರದಲ್ಲಿ ಉದಾಸೀನ ಮಾಡಬೇಡಿ. ಮಹಿಳೆಯರಿಗೆ ಚಿನ್ನಾಭರಣ ಖರೀದಿ ಯೋಗವಿದೆ. ವ್ಯಾಪಾರ ವ್ಯವಹಾರದಲ್ಲಿ ನಿವ್ವಳ ಲಾಭ ಸಿಗಲಿದೆ. ಆದರೆ ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರವಿರಲಿ. ದೇವತಾ ಪ್ರಾರ್ಥನೆ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ದಿನ ಅಪ್ಪಿತಪ್ಪಿಯೂ ತುಳಸಿ ದಳಗಳನ್ನು ಕೀಳಬೇಡಿ