Publish Date: Fri, 14 Feb 2020 (06:20 IST)
Updated Date: Fri, 14 Feb 2020 (06:22 IST)
ಬೆಂಗಳೂರು : ತುಳಸಿ ಗಿಡ ಶ್ರೀಲಕ್ಷ್ಮೀದೇವಿಯ ಸ್ವರೂಪ. ಆದಕಾರಣ ಎಲ್ಲರೂ ಮನೆಯಲ್ಲಿಯೂ ತುಳಸಿ ಗಿಡ ಇರಬೇಕು. ಅಂತಹ ಮನೆಯಲ್ಲಿ ಲಕ್ಷ್ಮೀ ದೇವಿ ಸದಾಕಾಲ ನೆಲೆಸಿರುತ್ತಾಳೆ ಎಂದು ಪಂಡಿತರು ಹೇಳುತ್ತಾರೆ. ಆದರೆ ತುಳಸಿ ಗಿಡಕ್ಕೆ ಸಂಬಂಧಪಟ್ಟಂತೆ ಅಪ್ಪಿತಪ್ಪಿಯೂ ಈ ತಪ್ಪಗಳನ್ನು ಮಾಡಬೇಡಿ.
ತುಳಸಿ ಗಿಡಕ್ಕೆ ಸ್ನಾನವಾದ ಮೇಲೆಯೇ ಶುದ್ಧವಾದ ನೀರನ್ನು ಹಾಕಬೇಕು. ಅದನ್ನು ಎಂಜಲು ಕೈಯಿಂದ ಮುಟ್ಟಬಾರದು. ಹಾಗೇ ಬೇರೆಯವರ ಮನೆಗೆ ಹೋಗಿ ಅವರ ಮನೆಯ ತುಳಸಿ ಗಿಡದ ಮೇಲೆ ನಿಮ್ಮ ದೃಷ್ಟಿ ಹಾಯಿಸಬಾರದು.
ಹಾಗೇ ತುಳಸಿ ಗಿಡವನ್ನು ಈಶಾನ್ಯ ದಿಕ್ಕಿನಲ್ಲಿಟ್ಟು ಪೂಜೆ ಮಾಡಿದರೆ ನಿಮ್ಮ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ. ಅಲ್ಲದೇ ಶನಿವಾರ ಮತ್ತು ಏಕಾದಶಿಯ ದಿನದಂದು ತುಳಸಿ ಎಲೆ ಕೀಳಬೇಡಿ.