Select Your Language

Notifications

webdunia
webdunia
webdunia
webdunia

ಕರ್ನಾಟಕ ಬಂದ್ ಹಿನ್ನಲೆ; ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿಯನ್ನು ಗೃಹಬಂಧನದಲ್ಲಿಟ್ಟ ಪೊಲೀಸರು

ಕರ್ನಾಟಕ ಬಂದ್ ಹಿನ್ನಲೆ; ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿಯನ್ನು ಗೃಹಬಂಧನದಲ್ಲಿಟ್ಟ ಪೊಲೀಸರು
ಬೆಂಗಳೂರು , ಗುರುವಾರ, 13 ಫೆಬ್ರವರಿ 2020 (10:43 IST)
ಬೆಂಗಳೂರು : ಕರ್ನಾಟಕ ಬಂದ್ ಗೆ ಕರೆ ನೀಡಿದ ಹಿನ್ನಲೆಯಲ್ಲಿ  ಕನ್ನಡ ಪರ ಸಂಘಟನೆಗಳ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿಯನ್ನು ಪೊಲೀಸರು ಗೃಹಬಂಧನದಲ್ಲಿಟ್ಟಿದ್ದಾರೆ.


ಇಂದು ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ತರುವಂತೆ ಆಗ್ರಹಿಸಿ ಇಂದು ವಿವಿಧ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. ಆದರೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ನಿನ್ನೆ ಬಂದ್ ಗೆ ನಮ್ಮ ಬೆಂಬವಿಲ್ಲವೆಂದು ಹೇಳಿದ್ದರು. ಆದರೆ  ಇಂದು ಬೆಂಬಲ ನೀಡಿ ಕಾರ್ಯಕರ್ತರನ್ನು ಪ್ರಚೋದಿಸುವ ಸಾಧ್ಯತೆಯಿರುವ ಹಿನ್ನಲೆಯಲ್ಲಿ  ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಗೃಹಬಂಧನದಲ್ಲಿಡಲಾಗಿದೆ.


ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ಪೊಲೀಸರು ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಪ್ರವೀಣ್ ಅವರ ನಿವಾಸದಲ್ಲಿ ಬಂಧನದಲ್ಲಿಟ್ಟಿದ್ದು, ಬೆಳಿಗ್ಗೆ ವಾಕಿಂಗ್ ಹೋಗುವುದನ್ನು ತಡೆದಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಆಸ್ತಿಗಾಗಿ ಜಗಳ: ಮಗನನ್ನೇ ಕೊಂದ ದಂಪತಿ