Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಗುರುವಾರ, 13 ಫೆಬ್ರವರಿ 2020 (09:03 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ದೂರ ಸಂಚಾರದಿಂದ ಕಾರ್ಯಪ್ರಾಪ್ತಿಯಾಗಲಿದೆ. ಆದರೆ ಮಾನಸಿಕವಾಗಿ ಯಾವುದೇ ಕೆಲಸದಲ್ಲೂ ಸಂತೃಪ್ತಿ ಸಿಗದು. ಹಣಕಾಸಿನ ವ್ಯವಸ್ಥೆಗೆ ಪರದಾಡಬೇಕಾಗುತ್ತದೆ. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸುವಿರಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ವೃಷಭ: ಸಾಂಸಾರಿಕವಾಗಿ ಕಡಿದು ಹೋದ ಸಂಬಂಧಗಳು ಮತ್ತೆ ಬೆಸೆಯಲಿವೆ. ಸಾಂಸಾರಿಕ ಸುಖ ಅನುಭವಿಸುವಿರಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯವಿದೆ. ವ್ಯಾಪಾರ ವ್ಯವಹಾರದಲ್ಲಿ ಅಡೆತಡೆಗಳು ನಿವಾರಣೆಯಾಗಲಿವೆ. ದೇವತಾ ಪ್ರಾರ್ಥನೆ ಮರೆಯದಿರಿ.

ಮಿಥುನ: ವೈವಾಹಿಕ ಜೀವನದ ಸುಖ ಅನುಭವಿಸಿದರೂ ಮಕ್ಕಳ ವಿಚಾರದಲ್ಲಿ ಬೇಸರ ಉಂಟಾಗಬಹುದು. ವೃತ್ತಿರಂಗದಲ್ಲಿ ಕೈಗೆ ಸಿಕ್ಕ ತುತ್ತು ಬಾಯಿಗೆ ಬರದ ಸ್ಥಿತಿಯಾಗಬಹುದು. ಆದರೆ ಆರ್ಥಿಕವಾಗಿ ಧನಾಗಮನಕ್ಕೆ ಕೊರತೆಯಾಗದು. ಕಿರು ಸಂಚಾರ ಮಾಡುವಿರಿ.

ಕರ್ಕಟಕ: ನಿಮ್ಮ ಸಮಸ್ಯೆಗಳಿಗೆ ನೀವೇ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗದೇ ಹೋದೀತು. ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಸೂಕ್ತ. ವಿವಾಹ ಪ್ರಸ್ತಾಪಗಳು ಬರಲಿದ್ದು, ಸೂಕ್ತ ಸಂಬಂಧಕ್ಕೆ ಕಾಯುವುದು ಉತ್ತಮ.

ಸಿಂಹ: ಸಾಮಾಜಿಕ ಕೆಲಸಗಳಲ್ಲಿ ಆಸಕ್ತಿ ಬರಲಿದ್ದು, ಊರಿಗೆ ಉಪಕಾರಿ ಎನಿಸಿಕೊಳ್ಳುವಿರಿ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಸ್ಥಾನ ಪಲ್ಲಟ ಭೀತಿ ಎದುರಾಗಲಿದೆ. ಪ್ರೇಮ ಸಂಬಂಧಗಳು ಯಶಸ್ವಿಯಾಗುವುದು. ಉದ್ದೇಶಿತ ಕಾರ್ಯಗಳನ್ನು ದಿಡೀರ್ ಆಗಿ ಬದಲಾಯಿಸಬೇಕಾಗುತ್ತದೆ.

ಕನ್ಯಾ: ವಿದ್ಯಾರ್ಥಿಗಳಿಗೆ ಹೊಸ ವಿಚಾರಗಳನ್ನು ಕಲಿಯುವ ಆಸಕ್ತಿ ಬೆಳೆಯಲಿದೆ. ಪಾಲಿಗೆ ಬಂದ ಅವಕಾಶಗಳನ್ನು ಬಳಸಿಕೊಳ್ಳಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಆರ್ಥಿಕವಾಗಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿಯಿದೆ.

ತುಲಾ: ವೃತ್ತಿರಂಗದಲ್ಲಿ ಬರುವ ಸಮಸ್ಯೆಗಳನ್ನು ಸಂಗಾತಿಯ ಸಲಹೆಯಿಂದ ಪರಿಹಾರ ಮಾಡುವಿರಿ. ಆಸ್ತಿ ವಿಚಾರಗಳಲ್ಲಿ ದಾಯಾದಿಗಳೊಂದಿಗಿನ ಕಲಹ ಅಂತ್ಯವಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಹಿರಿಯರಿಗೆ ಪುಣ್ಯ ಕ್ಷೇತ್ರದ ಸಂದರ್ಶನ ಯೋಗವಿದೆ.

ವೃಶ್ಚಿಕ: ಹಳೆಯ ಮಿತ್ರರ ಭೇಟಿಯಿಂದ ಮನಸ್ಸಿಗೆ ಸಂತಸವಾಗಲಿದೆ. ಉದ್ದೇಶಿತ ಕೆಲಸಗಳನ್ನು ಸುಗಮವಾಗಿ ನೆರವೇರಿಸುವಿರಿ. ವ್ಯಾಪಾರ, ವಹಿವಾಟುಗಳು ಕೈ ಹಿಡಿಯಲಿವೆ. ಸಂಗಾತಿಗೆ ಉಡುಗೊರೆ ನೀಡಿ ಖುಷಿಪಡಿಸಲಿದ್ದೀರಿ. ಆರೋಗ್ಯದ ಬಗ್ಗೆ ಎಚ್ಚರ.

ಧನು: ದುಡುಕು, ಮಾತು ವರ್ತನೆಯಿಂದ ಕಾರ್ಯ ಹಾಳು ಎಂಬುದನ್ನು ಮರೆಯಬೇಡಿ. ಹೊಸ ಮಿತ್ರರ ಸಂಪಾದನೆ ಮಾಡಲಿದ್ದೀರಿ. ಯಾವುದೇ ಕೆಲಸ ಮಾಡುವ ಮೊದಲು ಹಿರಿಯರ ಸಲಹೆಗಳಿಗೆ ಮನ್ನಣೆ ಕೊಡಿ. ವಿದ್ಯಾರ್ಥಿಗಳಿಗೆ ಸತ್ವ ಪರೀಕ್ಷೆ ಕಾಲವಿದು.

ಮಕರ: ಸಾಂಸಾರಿಕವಾಗಿ ಬರುವ ಖರ್ಚು ವೆಚ್ಚಗಳನ್ನು ಸರಿದೂಗಿಸುವ ತಲೆನೋವು ಎದುರಾಗಲಿದೆ. ಧನಾರ್ಜನೆಗೆ ನಾನಾ ಮಾರ್ಗಗಳನ್ನು ಹುಡುಕಲಿದ್ದೀರಿ. ಭೂ ವಿವಾದಗಳು ಬಗೆಹರಿಯಲಿವೆ. ಸರಕಾರಿ ಉದ್ಯೋಗಿಗಳಿಗೆ ಮುನ್ನಡೆಯಿರಲಿದೆ. ಕುಲದೇವರ ಪ್ರಾರ್ಥನೆಯಿಂದ ಶುಭವಾಗುವುದು.

ಕುಂಭ: ಮಹಿಳಾ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಉನ್ನತ ಸ್ಥಾನ ಮಾನದ ಯೋಗವಿದೆ. ಕೌಟುಂಬಿಕವಾಗಿ ಇತರ ಸದಸ್ಯರ ಅಭಿಪ್ರಾಯಗಳಿಗೆ ಬೆಲೆಕೊಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕ ಫಲ ಸಿಗುವುದು. ದುರ್ಜನರ ಸಂಗದಿಂದ ದೂರವಿರುವುದು ಉತ್ತಮ.

ಮೀನ: ನಯವಾಗಿ ಮಾತನಾಡಿ ಕೆಲಸ ಮಾಡಿಸಿಕೊಳ್ಳುವವರ ಬಗ್ಗೆ ಎಚ್ಚರ. ವ್ಯವಹಾರದಲ್ಲಿ ಇನ್ನೊಬ್ಬರು ಮೂಗು ತೂರಿಸುವುದರಿಂದ ಕಿರಿ ಕಿರಿಯಾಗಬಹುದು. ಆದರೆ ಹಣಕಾಸಿನ ಮುಗ್ಗಟ್ಟುಗಳು ದೂರವಾಗಿ ಅಂದುಕೊಂಡ ಕೆಲಸ ನೆರವೇರಿಸುವಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಲಗುವ ಕೋಣೆಯಲ್ಲಿರುವ ಈ ವಸ್ತು ದಂಪತಿಗಳ ನಡುವೆ ಕಲಹಕ್ಕೆ ಕಾರಣ