Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಮಂಗಳವಾರ, 11 ಫೆಬ್ರವರಿ 2020 (09:01 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ವೃತ್ತಿರಂಗದಲ್ಲಿ ಬರುವ ಹೊಸ ಸವಾಲುಗಳಿಗೆ ಸಿದ್ಧರಾಗಬೇಕಾಗುತ್ತದೆ. ಮೇಲಧಿಕಾರಿಗಳ ಅಸಹಕಾರ ನಿಮ್ಮ ಸಹನೆ ಪರೀಕ್ಷೆ ಮಾಡಲಿದೆ. ಸಂಗಾತಿಯ ಕೆಲವೊಂದು ನಿರ್ಧಾರಗಳು ನಿಮಗೆ ಹಿಡಿಸದೇ ಹೋಗಬಹುದು. ಆದರೂ ಸಂಯಮದಿಂದ ನಡೆದುಕೊಳ್ಳುವುದು ಮುಖ್ಯ.

ವೃಷಭ: ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಹಳೆಯ ಬಾಕಿಗಳು ಪಾವತಿಯಾಗಲಿವೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಆದರೆ ನಿಮ್ಮ ದುಡುಕು ಮಾತಿನಿಂದ ಸ್ನೇಹ ಕಳೆದುಕೊಳ್ಳಬೇಕಾದೀತು.

ಮಿಥುನ: ದೈವ ಬಲವಿಲ್ಲದೇ ಕೈ ಹಿಡಿದ ಕೆಲಸಗಳು ಅರ್ಧಕ್ಕೇ ನಿಲ್ಲಲಿವೆ. ಇದರಿಂದ ಮನಸ್ಸಿಗೆ ಬೇಸರವಾಗಬಹುದು. ಶತ್ರುಬಾಧೆ ಕಾಡಲಿದೆ. ತಾಳ್ಮೆಯಿಂದ ವ್ಯವಹರಿಸುವುದು ಮುಖ್ಯ. ಹಿರಿಯರ ಸಲಹೆಗೆ ಕಿವಿಗೊಡಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ಕರ್ಕಟಕ: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ರಂಗದಲ್ಲಿ ಪ್ರಗತಿ, ಉತ್ತಮ ಫಲಿತಾಂಶ ಕಂಡುಬರಲಿದೆ. ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾಪಗಳು ಬರಲಿವೆ. ಮಿತ್ರರಿಂದ ಸಹಕಾರ ಸಿಗಲಿದೆ. ಅನಿರೀಕ್ಷಿತವಾಗಿ ಸಿಗುವ ವ್ಯಕ್ತಿಗಳಿಂದ ಅನುಕೂಲವಾಗಲಿದೆ. ಬಂಧು ಜನರ ಚಾಡಿ ಮಾತುಗಳಿಗೆ ಕಿವಿಗೊಡಬೇಡಿ.

ಸಿಂಹ: ಕೊಡು ಕೊಳ್ಳುವಿಕೆ ವ್ಯವಹಾರದಲ್ಲಿ ಲಾಭವಿರಲಿದೆ. ಮನೆಯಲ್ಲಿ ಸಮಾಧಾನಕರ ವಾತಾವರಣವಿರಲಿದ್ದು, ಮಕ್ಕಳಿಂದ ಸಂತಸದ ವಾರ್ತೆ ಆಲಿಸುವಿರಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಸ್ತ್ರೀಯರಿಗೆ ಚಿನ್ನಾಭರಣ ಖರೀದಿ ಯೋಗವಿದೆ. ನಿರುದ್ಯೋಗಿಗಳಿಗೆ ಉದ್ಯೋಗಕ್ಕಾಗಿ ಅಲೆದಾಟ ತಪ್ಪದು.

ಕನ್ಯಾ: ಮಹಿಳೆಯರಿಂದ ತೊಂದರೆಗಳು ಎದುರಾಗಬಹುದು. ನಿಮ್ಮ ಸ್ವಾಭಿಮಾನ ಸಂಗಾತಿಯ ಅಸಹನೆಗೆ ಕಾರಣವಾಗಬಹುದು. ದೂರ ಸಂಚಾರದಿಂದ ದೇಹಾಯಾಸವಾಗಬಹುದು. ಆರ್ಥಿಕವಾಗಿ ನಾನಾ ರೀತಿಯ ಖರ್ಚು ವೆಚ್ಚಗಳು ಕಂಡುಬರಲಿವೆ.

ತುಲಾ: ಸಣ್ಣ ಪುಟ್ಟ ವಿಚಾರಕ್ಕೆ ಕೋಪಗೊಂಡು ಇತರರ ಮೇಲೆ ಕೂಗಾಡುವುದನ್ನು ಬಿಡಿ. ಇದರಿಂದ ಸಂಬಂಧ ಹಾಳಾಗುವುದು ಖಂಡಿತಾ. ಹಿರಿಯರಿಂದ ಉಡುಗೊರೆ ಸ್ವೀಕರಿಸಲು ಸಿದ್ಧರಾಗಿ. ಕೀಲು ನೋವಿನ ಸಮಸ್ಯೆ ಕಾಡಬಹುದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಶ್ಚಿಕ: ನಿಮ್ಮ ದೇಹಾರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ಹಂತ ಹಂತವಾಗಿ ಚೇತರಿಕೆ ಇರಲಿದೆ. ಮನೆಯಲ್ಲಿ ಶುಭ ಕಾರ್ಯಗಳಿಗೆ ಸಿದ್ಧತೆ ನಡೆಸಬೇಕಾಗುತ್ತದೆ. ವಾಹನ, ಭೂಮಿ ಖರೀದಿಯ ಯೋಗವಿದೆ. ಪಾಲಿಗೆ ಬಂದ ಅವಕಾಶವನ್ನು ಬಳಸಿಕೊಳ್ಳಿ.

ಧನು: ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಲು ಹೋಗಿ ಅಪಾಯ ಮೈಮೇಲೆಳೆದುಕೊಳ್ಳಬೇಡಿ. ಸಕಾಲದಲ್ಲಿ ಸಂಗಾತಿಯಿಂದ ಬರವ ಸಲಹೆಗಳು ಉಪಯೋಗಕ್ಕೆ ಬರಲಿವೆ. ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ವ್ಯವಹಾರದಲ್ಲಿ ಲಾಭ ಪಡೆಯಬಹುದು, ಆದರೆ ನಯವಂಚಕರ ಬಗ್ಗೆ ಎಚ್ಚರ.

ಮಕರ: ನಿಮ್ಮ ರಹಸ್ಯಗಳು ಇಂದು ಮನೆಯವರೆದುರು ಬಹಿರಂಗವಾಗಲಿದೆ. ಅರ್ಧಕ್ಕೆ ನಿಂತ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ನಿಮ್ಮ ಕ್ರಿಯಾಶೀಲತೆಯನ್ನು ಪ್ರಕಟಿಸಲು ಇದುವೇ ಸಕಾಲ. ದೂರ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ.

ಕುಂಭ: ಉದರ ಸಂಬಂಧೀ ಆರೋಗ್ಯ ಸಮಸ್ಯೆಗಳು ಕಂಡುಬರಲಿದೆ. ಆಸ್ಪತ್ರೆಗೆ ಅಲೆದಾಟ ತಪ್ಪದು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆಯ ಕೊರತೆ ಅನುಭವಕ್ಕೆ ಬರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ. ದೇವತಾ ಪ್ರಾರ್ಥನೆ ಮಾಡಿ.

ಮೀನ: ಆರ್ಥಿಕವಾಗಿ ಸಕಾಲದಲ್ಲಿ ಧನಾಗಮನವಾಗುವುದರಿಂದ ಸಂಭಾವ್ಯ ಸಮಸ್ಯೆಗಳಿಂದ ಪಾರಾಗುವಿರಿ. ಮಹಿಳಾ ಸಂಗಾತಿಯಿಂದ ಒಳಿತಾಗಲಿದೆ. ದುಂದು ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳಿತು. ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲ ಬೇಕಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮಾವಾಸ್ಯೆಯ ದಿನ ಈ ಕೆಲಸ ಮಾಡಿದರೆ ದರಿದ್ರ ಆವರಿಸುವುದು ಖಂಡಿತ