Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಭಾನುವಾರ, 9 ಫೆಬ್ರವರಿ 2020 (09:07 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಹೊಸ ಉದ್ಯೋಗಕ್ಕಾಗಿ ಅಲೆದಾಟ ತಪ್ಪದು. ಸಾಕಷ್ಟು ಅಡೆತಡೆಗಳು ಎದುರಾಗಲಿವೆ. ಗೃಹ ಸಂಬಂಧೀ ಕೆಲಸಗಳಿಗೆ ಕೈ ಹಾಕಲಿದ್ದೀರಿ. ಸಂಗಾತಿಯೊಂದಿಗೆ ಮನಸ್ತಾಪವಾಗದಂತೆ ಎಚ್ಚರಿಕೆ ವಹಿಸಿ. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ವೃಷಭ: ವೃತ್ತಿರಂಗದಲ್ಲಿ ಇಂದೂ ಬಿಡುವಿಲ್ಲದ ದುಡಿತದಿಂದ ದೇಹಾಯಾಸವಾಗಲಿದೆ. ಪ್ರೀತಿ ಪಾತ್ರರ ಭೇಟಿಯಿಂದ ಮನಸ್ಸಿಗೆ ಸಂತಸವಾಗಲಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದಿದ್ದರೆ ಅನಾರೋಗ್ಯ ಖಂಡಿತಾ.

ಮಿಥುನ: ಸಂಸಾರದಲ್ಲಿ ಸಾಮರಸ್ಯವಿರಲಿದೆ. ಮಕ್ಕಳಿಂದ ಸಂತಸದ ವಾರ್ತೆ ನಿರೀಕ್ಷಿಸಬಹುದು. ವಾಹನ ಖರೀದಿಯಿಂದ ಲಾಭವಾಗಲಿದೆ. ಕ್ರಯ ವಿಕ್ರಯ ವ್ಯವಹಾರದಲ್ಲಿ ಲಾಭ ಕಂಡುಕೊಳ್ಳುವಿರಿ. ಆರ್ಥಿಕ ಅಡಚಣೆಯಿರದು. ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ.

ಕರ್ಕಟಕ: ಇಷ್ಟ ಮಿತ್ರರೊಂದಿಗೆ ಪ್ರವಾಸ, ಭೋಜನ ಮನಸ್ಸಿಗೆ ಖುಷಿಯಾಗಲಿದೆ. ಆದರೆ ಖರ್ಚು ವೆಚ್ಚದ ಬಗ್ಗೆ ನಿಗಾ ಇರಲಿ. ಮನೆಯಲ್ಲಿ ಶುಭ ಮಂಗಲ ಕಾರ್ಯ ನಡೆಯಲಿದೆ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರ. ಯಾರಿಗೂ ಸಾಲ ಕೊಡಲು ಹೋಗಬೇಡಿ.

ಸಿಂಹ: ಅಂದುಕೊಂಡ ಕೆಲಸ ಕಾರ್ಯಗಳನ್ನು ಪೂರ್ತಿ ಮಾಡಲು ಅಡ್ಡಿ, ಆತಂಕಗಳು ಎದುರಾಗಬಹುದು. ಕುಲದೇವರ ಪ್ರಾರ್ಥನೆ ನಡೆಸಿ ಮುನ್ನಡೆಯಿರಿ. ಹಳೆಯ ಸಂಬಂಧಗಳು ಮತ್ತೆ ಬೆಸೆಯಲಿವೆ. ಹಿರಿಯರ ತೀರ್ಥಯಾತ್ರೆಗೆ ಸಿದ್ಧತೆ ನಡೆಸುವಿರಿ.

ಕನ್ಯಾ: ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನ ಕರೆ ಬರಲಿದ್ದು, ದೂರದ ಊರಿಗೆ ಪ್ರಯಾಣ ಮಾಡಬೇಕಾದೀತು. ಮಾನಸಿಕವಾಗಿ ಹಲವು ಆಲೋಚನೆಗಳು ಓಡಾಡಲಿದ್ದು, ಒಂದು ರೀತಿಯ ಆಲಸ್ಯತನ ಕಾಡಬಹುದು. ಸಂಗಾತಿಯ ಸಲಹೆಗೆ ಕಿವಿಗೊಡಿ.

ತುಲಾ: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆಯಿರದು. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶಗಳನ್ನು ಬಳಸಿಕೊಳ್ಳಬೇಕು. ಇಷ್ಟದೇವರ ದೇವಾಲಯ ಸಂದರ್ಶನ ಮಾಡುವಿರಿ. ಅನಗತ್ಯ ದುಂದು ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳಿತು.

ವೃಶ್ಚಿಕ: ಪಾಲು ಬಂಡವಾಳ ವ್ಯವಹಾರದಿಂದ ಲಾಭವಾಗಲಿದೆ. ಕೃಷಿಕರಿಗೆ ವೃತ್ತಿಯಲ್ಲಿ ಅಡೆತಡೆಗಳು ತೋರಿಬಂದೀತು. ನೀರಿಗಾಗಿ ನೆರೆಮನೆಯವರೊಡನೆ ಕಲಹವಾಗಬಹುದು. ಸಂಯಮದಿಂದ ವರ್ತಿಸಿ. ಮಕ್ಕಳ ಭವಿಷ್ಯಕ್ಕಾಗಿ ಯೋಜನೆ ರೂಪಿಸುವಿರಿ.

ಧನು: ಶುಭ ಮಂಗಲ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಅಧಿಕ ಓಡಾಟದಿಂದ ದೇಹಾಯಾಸವಾಗಬಹುದು. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಧನವ್ಯಯವಾಗಲಿದೆ. ದಿನದಂತ್ಯಕ್ಕೆ ಅಚ್ಚರಿಯ ವಾರ್ತೆಯಿದೆ.

ಮಕರ: ಮಕ್ಕಳ ವಿಚಾರವಾಗಿ ಸಂಗಾತಿಯೊಂದಿಗೆ ಮನಸ್ತಾಪಗಳು ಬರಬಹುದು. ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಹಿರಿಯರ ಸಲಹೆ ಪಡೆಯುವುದು ಉತ್ತಮ. ಮಹಿಳೆಯರಿಗೆ ಚಿನ್ನಾಭರಣ ಖರೀದಿ ಯೋಗವಿದೆ. ಮನೆಗೆ ಅನಿರೀಕ್ಷಿತ ಬಂಧುಗಳ ಆಗಮನವಾಗಲಿದೆ.

ಕುಂಭ: ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ನೀಡುವಿರಿ. ಕಷ್ಟದ ಸಮಯದಲ್ಲಿ ಮಿತ್ರರ ಸಹಕಾರ ದೊರೆಯಲಿದೆ. ಹಿರಿಯರಿಗೆ ಪುಣ್ಯ ಕ್ಷೇತ್ರಗಳ ಸಂದರ್ಶನ ಯೋಗವಿದೆ. ಮನೆಯಲ್ಲಿ ಕಳ್ಳತನದ ಭೀತಿಯಿದ್ದು, ಎಚ್ಚರ. ವಾತ ಸಂಬಂಧೀ ಆರೋಗ್ಯ ಸಮಸ್ಯೆ ಕಾಡಬಹುದು.

ಮೀನ: ಇಂದಿನ ದಿನ ನಿಮಗೆ ಶುಭದಾಯಕವಾಗಿದ್ದು, ದೈವಾನುಕೂಲದಿಂದ ಅಂದುಕೊಂಡ ಕೆಲಸಗಳನ್ನು ಸುಗಮವಾಗಿ ನೆರವೇರಿಸಲಿದ್ದೀರಿ. ಆರ್ಥಿಕವಾಗಿ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗಲಿದ್ದು ಸಾಲಬಾಧೆಯಿಂದ ಮುಕ್ತರಾಗುವಿರಿ. ಹೆಚ್ಚಿನ ಶುಭ ಫಲಗಳಿಗೆ ದೇವತಾ ಪ್ರಾರ್ಥನೆ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪಿತಪ್ಪಿಯೂ ಮಹಿಳೆಯರು ಅಡುಗೆ ಮನೆಯಲ್ಲಿ ಈ ತಪ್ಪನ್ನು ಮಾಡಬೇಡಿ