ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಧನಲಾಭವಾಗಲಿದೆ. ಆದರೆ ಅದೇ ರೀತಿ ನಾನಾ ರೀತಿಯ ಖರ್ಚುಗಳೂ ತೋರಿಬರಲಿವೆ. ಹಿರಿಯರಿಂದ ಬಂದ ಆಸ್ತಿ ಕಳೆದುಕೊಳ್ಳುವ ಭೀತಿಯಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಮಾತಿನ ಮೇಲೆ ನಿಗಾ ಇರಲಿ.
ವೃಷಭ: ಮಕ್ಕಳ ವಿಚಾರದಲ್ಲಿ ಸಂಗಾತಿಯೊಂದಿಗೆ ಮನಸ್ತಾಪ ಮಾಡಿಕೊಳ್ಳುವಿರಿ. ಗೃಹ ಬಳಕೆ ವಸ್ತುಗಳ ಖರೀದಿಗೆ ಹೆಚ್ಚಿನ ಧನವ್ಯಯವಾಗಲಿದೆ. ಅನಿರೀಕ್ಷಿತವಾಗಿ ಬಂಧು ಮಿತ್ರರ ಭೇಟಿಯಾಗುವಿರಿ. ನಿರುದ್ಯೋಗಿಗಳಿಗೆ ದೈವಬಲದಿಂದ ಬಯಸಿದ ಉದ್ಯೋಗ ಸಿಗಲಿದೆ.
ಮಿಥುನ: ರಾಜಕೀಯ ರಂಗದಲ್ಲಿರುವವರಿಗೆ ಹೊಸ ಶತ್ರುಗಳ ಹುಟ್ಟಿಕೊಳ್ಳಲಿದ್ದಾರೆ. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರ. ದೇಹಾರೋಗ್ಯದಲ್ಲಿ ಏರುಪೇರಾಗಬಹುದು. ಆದಾಯ ಸಾಕಷ್ಟಿದ್ದರೂ ಖರ್ಚಿನ ಚಿಂತೆ ಕಾಡಲಿದೆ. ದೇವಾಲಯ ಸಂದರ್ಶನ ಯೋಗವಿದೆ.
ಕರ್ಕಟಕ: ಕೈಗೆ ಸಿಗದ ದ್ರಾಕ್ಷಿ ಹುಳಿ ಎನ್ನುವಂತೆ ನಿಮ್ಮ ಕೈಗೆ ಸಿಗದ ಯಶಸ್ಸಿನ ಬಗ್ಗೆ ಹಳಿದುಕೊಳ್ಳುವಂತಹ ಪರಿಸ್ಥಿತಿ ಎದುರಾಗಲಿದೆ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ದೊರೆಯಲಿದೆ. ಉದ್ಯೋಗ ವರ್ಗದವರಿಗೆ ಮೇಲಧಿಕಾರಿಗಳಿಂದ ಕಿರಿ ಕಿರಿ ಇರಬಹುದು.
ಸಿಂಹ: ಇದುವರೆಗೆ ಯೋಜನೆ ಮಾಡಿಕೊಂಡಿದ್ದ ಕಾರ್ಯಗಳನ್ನು ಕಾರ್ಯರೂಪಕ್ಕೆ ತಂದು ಯಶಸ್ಸು ಪಡೆಯುವಿರಿ. ನೂತನ ದಂಪತಿಗಳಿಗೆ ಮಧುಚಂದ್ರದ ಭಾಗ್ಯವಿದೆ. ಮಕ್ಕಳಿಂದ ಸಂತಸದ ವಾರ್ತೆ ನಿರೀಕ್ಷಿಸಬಹುದು. ವ್ಯಾಪಾರಿ ವರ್ಗದವರಿಗೆ ಅಭಿವೃದ್ಧಿ ಉಂಟಾಗಲಿದೆ.
ಕನ್ಯಾ: ವೃತ್ತಿರಂಗದಲ್ಲಿ ನಿಮ್ಮ ಹಾದಿಗೆ ಅಡ್ಡಲಾಗಿ ನಿಂತವರನ್ನು ನಿಭಾಯಿಸುವುದರ ಬಗ್ಗೆ ಚಿಂತೆಯಾಗಬಹುದು. ಬೇರೆಯವರ ಪ್ರಚೋದನೆಗೆ ಒಳಗಾಗಿ ತೊಂದರೆಗೆ ಸಿಲುಕಿಕೊಳ್ಳಬೇಕಾಗಬಹುದು. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆಯುಂಟಾಗಬಹುದು. ದೇವತಾ ಪ್ರಾರ್ಥನೆ ಮಾಡಿ.
ತುಲಾ: ಹಣಕಾಸಿನ ಅಡಚಣೆಯಿಂದಾಗಿ ನೀವು ಅಂದುಕೊಂಡಿದ್ದ ಕೆಲಸ ಅರ್ಧಕ್ಕೇ ಸ್ಥಗಿತಗೊಳ್ಳಬಹುದು. ವಿಲಾಸೀ ಮನೋಭಾವಕ್ಕೆ ಕಡಿವಾಣ ಹಾಕಬೇಕಿದೆ. ಪ್ರಾಮಾಣಿಕ ಪ್ರಯತ್ನಕ್ಕೆ ಯಶಸ್ಸು ಸಿಗಲಿದೆ. ಶೀತ ಸಂಬಂಧೀ ಆರೋಗ್ಯ ಸಮಸ್ಯೆ ಎದುರಾಗಬಹುದು.
ವೃಶ್ಚಿಕ: ಕೌಟುಂಬಿಕವಾಗಿ ಸಂಯಮದಿಂದ ಇರುವುದು ಮುಖ್ಯ. ದುಡುಕಿನ ನಿರ್ಧಾರಗಳಿಂದ ಪ್ರೀತಿ ಪಾತ್ರರಿಗೆ ಅಸಮಾಧಾನವಾಗಬಹುದು. ಸಂಗಾತಿಗೆ ಅನಾರೋಗ್ಯ ಭೀತಿಯಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯವಿದೆ. ದಿನದಂತ್ಯಕ್ಕೆ ಶುಭವಾಗಲಿದೆ.
ಧನು: ಅಧಿಕಾರದ ದಾಹ ನಿಮ್ಮ ಮನಸ್ಸು, ಕಣ್ಣು ಕುರುಡಾಗಿಸಬಹುದು. ಕಿರಿಯರೊಂದಿಗೆ ಪ್ರೀತಿಯ ವರ್ತನೆ ತೋರಿ. ಮಹಿಳೆಯರಿಗೆ ಉದ್ಯೋಗದಲ್ಲಿ ಮುನ್ನಡೆ ಸಿಗಲಿದೆ. ನಾಲಿಗೆ ಚಪಲದಿಂದ ದೇಹಾರೋಗ್ಯ ಹದಗೆಡಬಹುದು. ಖರೀದಿ ವ್ಯವಹಾರದಲ್ಲಿ ನಷ್ಟವಾಗದಂತೆ ಎಚ್ಚರವಹಿಸಿ.
ಮಕರ: ಹಿರಿಯರಿಗೆ ತೀರ್ಥಯಾತ್ರೆ ಕೈಗೊಳ್ಳುವ ಯೋಗವಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ವಿದೇಶ ಯಾನ, ದೂರ ಪ್ರಯಾಣ ಮಾಡಬೇಕಾಗಬಹುದು. ಕೃಷಿಕರಿಗೆ ಸಾಲಗಾರರ ಕಾಟವಿರಲಿದೆ. ವಾಹನ, ಭೂಮಿ ಖರೀದಿಗೆ ಕೆಲವು ಸಮಯ ಕಾಯುವುದು ಉತ್ತಮ.
ಕುಂಭ: ಮಾನಸಿಕವಾಗಿ ಕಾಡುವ ಚಿಂತೆಗಳ ಪರಿಹಾರಕ್ಕೆ ದೇವರ ಮೊರೆ ಹೋಗುವಿರಿ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡಲಿದ್ದೀರಿ. ಪತ್ನಿಯ ಮನದಾಸೆ ಪೂರೈಸಬೇಕಾಗುತ್ತದೆ. ವಾಹನ ಖರೀದಿ ಯೋಗವಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ಮೀನ: ಅವಿವಾಹಿತರ ವಿವಾಹ ಪ್ರಯತ್ನಕ್ಕೆ ಮುನ್ನಡೆ ದೊರಕಲಿದೆ. ನೂತನ ದಂಪತಿಗಳಲ್ಲಿ ಹೊಂದಾಣಿಕೆಯ ಕೊರತೆ ಕಂಡುಬರಬಹುದು. ನೆರೆಹೊರೆಯವರ ವಿಚಾರಕ್ಕೆ ತಲೆಹಾಕದಿದ್ದರೇ ಉತ್ತಮ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ. ದೇವರ ಪ್ರಾರ್ಥನೆ ಮಾಡಿ.