ಮಕರ ಸಂಕ್ರಾಂತಿ ದಿನ ಇವುಗಳನ್ನು ದಾನ ಮಾಡಿದರೆ ಉತ್ತಮ

ಬುಧವಾರ, 15 ಜನವರಿ 2020 (08:49 IST)
ಬೆಂಗಳೂರು: ಇಂದು ಎಲ್ಲೆಡೆ ಮಕರ ಸಂಕ್ರಾಂತಿ ಅಥವಾ ಪೊಂಗಲ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ದಿನ ಕೆಲವೊಂದು ವಸ್ತುಗಳನ್ನು ದಾನ ಮಾಡುವುದರಿಂದ ಶುಭವಾಗುತ್ತದೆ. ಅವುಗಳು ಯಾವುವು ನೋಡೋಣ.


ಮಕರ ಸಂಕ್ರಮಣದ ದಿನ ಎಳ್ಳು, ಬೆಲ್ಲ ಹಂಚುವುದು ಸಂಪ್ರದಾಯ. ಇದು ಉತ್ತರಾಯಣದ ಕಾಲವಾಗಿದ್ದು ಸಮಸ್ತ ದೇವತಾ ಕಾರ್ಯಗಳಿಗೆ ಶುಭ ದಿನವಾಗಿದೆ. ಈ ಪುಣ್ಯ ಕಾಲದಲ್ಲಿ ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ ಎಳ್ಳು ದಾನ ಮಾಡಬೇಕು. ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚಬೇಕು.  ಇಂದಿನ ದಿನ ಮಾಡಿದ ದಾನದ ಫಲ ನಮಗೆ ಜನ್ಮ ಜನ್ಮಾಂತರಗಳಲ್ಲೂ ಸಿಕ್ಕಿ ಸೂರ್ಯ ದೇವನ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂಬ ನಂಬಿಕೆಯಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?