ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಸ್ವಾಭಿಮಾನ ವಿಚಾರದಲ್ಲಿ ರಾಜಿಯಾಗದ ನಿಮ್ಮ ಗುಣ ಕೆಲವೊಮ್ಮೆ ಸಂಕಷ್ಟ ತರಬಹುದು. ಆದರೆ ನಿಮ್ಮ ಆತ್ಮಸ್ಥೈರ್ಯವೇ ನಿಮಗೆ ಶ್ರೀರಕ್ಷೆ. ನಿಮ್ಮ ಬಗ್ಗೆ ಕೇಳಿಬರುವ ಅಪವಾದಗಳಿಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಮಾನಸಿಕವಾಗಿ ಗಟ್ಟಿಯಾಗಿ.
ವೃಷಭ: ಸಾಂಸಾರಿಕವಾಗಿ ಇದುವರೆಗೆ ಇದ್ದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವಿರಿ. ದುರಾಭಿಮಾನದಿಂದ ಪ್ರಯೋಜನವಾಗದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. ಆದರೆ ಖರ್ಚು ವೆಚ್ಚಗಳ ಬಗ್ಗೆ ಕಾಳಜಿವಹಿಸಿ. ದಿನದಂತ್ಯಕ್ಕೆ ಕಾರ್ಯಸಾಧನೆಯಾಗುವುದು.
ಮಿಥುನ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ವೃತ್ತಿರಂಗದಲ್ಲಿ ನಿಮ್ಮ ಪ್ರಯತ್ನಕ್ಕೆ ಫಲ ಸಿಗದೇ ಇರದು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ತಾಳ್ಮೆಯಿಂದ ನಡೆದುಕೊಳ್ಳುವುದು ಮುಖ್ಯ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.
ಕರ್ಕಟಕ: ಹಿರಿಯರ ಸೂಕ್ತ ಸಲಹೆಗಳನ್ನು ಪಾಲಿಸಿದರೆ ನಿಮ್ಮ ಕಷ್ಟಗಳನ್ನು ಸುಲಭವಾಗಿ ನಿಭಾಯಿಸಬಹುದು. ಆದರೆ ಕಾರ್ಯಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಒಂದು ರೀತಿಯಲ್ಲಿ ಅನಾದರಣೆಗೊಳಗಾದ ಭಾವ ಕಾಡಲಿದೆ. ಕಿರು ಸಂಚಾರ ಯೋಗವಿದೆ.
ಸಿಂಹ: ಸಾಂಸಾರಿಕವಾಗಿ ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಪ್ರೀತಿ ಪಾತ್ರರ ಮನಸ್ಸಿಗೆ ನೋವಾಗುವಂತೆ ನಡೆದುಕೊಳ್ಳಬೇಡಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುವರು. ವ್ಯಾಪಾರ ವ್ಯವಹಾರದಲ್ಲಿ ಮುನ್ನಡೆ ಕಾಣುವಿರಿ.
ಕನ್ಯಾ: ಉದರ ಸಂಬಂಧೀ ಆರೋಗ್ಯ ಸಮಸ್ಯೆ ಕಾಡಬಹುದು. ಉದ್ಯೋಗ ಕ್ಷೇತ್ರದಲ್ಲಿ ಕಿರಿ ಕಿರಿ ಇರಲಿದೆ. ಸಹೋದ್ಯೋಗಿಗಳ ಸಹಾಯ ಸಿಗದೇ ಬೇಸರವಾಗಬಹುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಕೌಟುಂಬಿಕವ ವಿಚಾರದಲ್ಲಿ ಹೊರಗಿನವರ ಗಾಳಿಮಾತುಗಳಿಗೆ ಕಿವಿಗೊಡಬೇಡಿ.
ತುಲಾ: ಕಡಿದು ಹೋಗಿದ್ದ ಕೌಟುಂಬಿಕ ಬಂಧಗಳು ಮತ್ತೆ ಕೂಡಿಕೊಳ್ಳಲಿವೆ. ಕಲಾ ಕ್ಷೇತ್ರದಲ್ಲಿರುವವರಿಗೆ ಹೆಸರು,ಕೀರ್ತಿ ಸಂಪಾದಿಸಲು ಉತ್ತಮ ಸಮಯ. ಕಾರ್ಮಿಕ ವರ್ಗದವರಿಗೆ ಮುನ್ನಡೆ. ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಯೋಗವಿದೆ. ದಿನದಂತ್ಯಕ್ಕೆ ಶುಭ ಸುದ್ದಿ.
ವೃಶ್ಚಿಕ: ಹಿರಿಯರ ದೇಹಾರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡಬೇಕಾಗಿತ್ತು. ಆರ್ಥಿಕವಾಗಿ ಲಾಭ, ನಷ್ಟದ ಲೆಕ್ಕಾಚಾರ ಹಾಕುತ್ತಾ ಕೂತರೆ ವ್ಯವಹಾರದಲ್ಲಿ ಮುಂದುವರಿಯಲು ಕಷ್ಟ. ವೃತ್ತಿರಂಗದಲ್ಲಿ ನಿರುತ್ಸಾಹ ಕಾಡಲಿದೆ. ದೇವತಾ ಪ್ರಾರ್ಥನೆ ಮಾಡಿ.
ಧನು: ಆರ್ಥಿಕವಾಗಿ ಅಧಿಕ ಖರ್ಚು ವೆಚ್ಚಗಳು ಕಂಡುಬರಲಿವೆ. ಮಹಿಳೆಯರಿಗೆ ಚಿನ್ನಾಭರಣ ಖರೀದಿ ಯೋಗವಿದೆ. ಕಿರಿಯರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಿ. ಅವಿವಾಹಿತರಿಗೆ ವಿವಾಹ ಭಾಗ್ಯ ಶೀಘ್ರದಲ್ಲೇ ಒದಗಿ ಬರಲಿದೆ. ವಾಹನ ಸವಾರರು ಎಚ್ಚರವಾಗಿರಬೇಕು.
ಮಕರ: ನಿರುದ್ಯೋಗಿಗಳಿಗೆ ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಮಾಡಬೇಕಾಗಿ ಬರುತ್ತದೆ. ಅಭಿಪ್ರಾಯ ವ್ಯತ್ಯಾಸದಿಂದಾಗಿ ಸಂಗಾತಿಯೊಂದಿಗೆ ಕಲಹವಾಗಬಹುದು. ದುಡುಕಿನ ಮಾತನಾಡಲು ಹೋಗಬೇಡಿ. ಹಳೆ ಮಿತ್ರರ ಭೇಟಿಯಾಗುವಿರಿ.
ಕುಂಭ: ವ್ಯಾಪಾರ ವ್ಯವಹಾರದಲ್ಲಿ ಮುನ್ನಡೆಯಿರಲಿದೆ. ಆದರೆ ಅಧಿಕ ಓಡಾಟದಿಂದ ದೇಹಾಯಾಸವಾಗಬಹುದು. ಕೌಟುಂಬಿಕ ವಿಚಾರದಲ್ಲಿ ದೂರದೃಷ್ಟಿ ಒಳ್ಳೆಯದು. ಅನಿರೀಕ್ಷಿತವಾಗಿ ಬಂಧು, ಮಿತ್ರರ ಭೇಟಿಯಿಂದ ಮನಸ್ಸಿಗೆ ಖುಷಿಯಾಗುವುದು. ದೂರ ಸಂಚಾರದಲ್ಲಿ ಎಚ್ಚರ.
ಮೀನ: ಹಿರಿಯರಿಂದ ಉಡುಗೊರೆ ಸಿಗಲಿದೆ. ಧಾರ್ಮಿಕವಾಗಿ ಧನವಿನಿಯೋಗ ಮಾಡುವಿರಿ. ಶುಭ ಮಂಗಲ ಕಾರ್ಯಗಳಿಗೆ ಓಡಾಟ ನಡೆಸುವಿರಿ. ಮಾನಸಿಕವಾಗಿ ಋಣಾತ್ಮಕ ಚಿಂತನೆಗಳಿಗೆ ಬ್ರೇಕ್ ಹಾಕಬೇಕಿದೆ. ವಾಹನ ಖರೀದಿ ಯೋಗವಿದೆ. ದಿನದಂತ್ಯದಲ್ಲಿ ಅಚ್ಚರಿಯ ಸುದ್ದಿ.