Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

webdunia
ಗುರುವಾರ, 5 ಡಿಸೆಂಬರ್ 2019 (08:41 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಹಿರಿಯರ ಆರೋಗ್ಯದಲ್ಲಿ ಏರುಪೇರಾಗಬಹುದು. ಗೃಹೋಪಯೋಗಿ ವಸ್ತುಗಳಿಗಾಗಿ ಹೆಚ್ಚಿನ ಧನವ್ಯಯವಾಗಲಿದೆ. ವೃತ್ತಿ ಬದಲಾವಣೆಗೆ ಮನಸ್ಸು ಮಾಡುವಿರಿ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಖರೀದಿ ನಡೆಸುವಿರಿ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ಆದಾಯ ವೃದ್ಧಿಗೆ ನಾನಾ ಮೂಲಗಳನ್ನು ಹುಡುಕುವಿರಿ. ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ಹೀಗಾಗಿ ಒಂದು ರೀತಿಯ ನಿರಾಶೆಯ ಭಾವ ಕಾಡಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಗೆ ಕೆಳ ಹಂತದ ನೌಕರರ ಅಸಹಕಾರ ಕಂಡುಬರಲಿದೆ.

ಮಿಥುನ: ಗೃಹಿಣಿಯರಿಗೆ ಚಿನ್ನಾಭರಣ ಖರೀದಿ ಯೋಗವಿದೆ. ಪತ್ನಿಗೆ ತವರು ಮನೆಯಿಂದ ಉಡುಗೊರೆ ಲಭ್ಯವಾಗುವುದು. ವೈದ್ಯಕೀಯ ವೃತ್ತಿಯವರಿಗೆ ಮುನ್ನಡೆಯ ಲಾಭವಾಗಲಿದೆ. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಿದೆ. ದಿನದಂತ್ಯಕ್ಕೆ ಶುಭ ಸುದ್ದಿ.

ಕರ್ಕಟಕ: ದಾಂಪತ್ಯದಲ್ಲಿ ವಿರಸ, ವಿರಹ ಕಂಡುಬರಲಿದೆ.ಕೌಟುಂಬಿಕ ಮನಸ್ತಾಪಗಳನ್ನು ನಿಭಾಯಿಸಲು ಹಿರಿಯರ ಸಲಹೆ ಪಡೆಯಿರಿ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ನೆರವು ಸಿಗಲಿದೆ. ಕ್ರೀಡಾ ಪಟುಗಳಿಗೆ ಯಶಸ್ಸು. ವಿದ್ಯಾರ್ಥಿಗಳಿಗೆ ಮುನ್ನಡೆ ಸಿಗಲಿದೆ.

ಸಿಂಹ: ಸರಕಾರಿ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಮುನ್ನಡೆಯ ಲಾಭವಾಗಲಿದೆ. ಹಣಕಾಸಿನ ಖರ್ಚುವೆಚ್ಚದ ಬಗ್ಗೆ ಎಚ್ಚರಿಕೆ ವಹಿಸಿ. ಸಾಲಗಾರರಿಂದ ಮುಕ್ತಿ ಸಿಗಲಿದೆ. ಹಿರಿಯರ ದೇಹಾರೋಗ್ಯದ ಬಗ್ಗೆ ಗಮನಕೊಡಬೇಕಾಗುತ್ತದೆ. ಅತೀ ಸಲುಗೆ ಒಳ್ಳೆಯದಲ್ಲ.

 
ಕನ್ಯಾ: ಮಕ್ಕಳ ಭವಿಷ್ಯ ಚಿಂತೆಗೆ ಕಾರಣವಾಗಲಿದೆ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆ ಬರುವುದು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಪಾಲು ಬಂಡವಾಳ ವ್ಯವಹಾರದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು.

ತುಲಾ: ಕಲೆ, ಸಾಹಿತ್ಯ ಕ್ಷೇತ್ರದಲ್ಲಿರುವವರ ಕ್ರಿಯಾತ್ಮಕತೆಗೆ ಬೆಲೆ ಬರಲಿದೆ. ಸಾಮಾಜಿಕವಾಗಿ ಉನ್ನತ ಸ್ಥಾನ ಮಾನ ಸಿಗಲಿದೆ. ಬಡ್ಡಿ ವ್ಯವಹಾರದಲ್ಲಿ ಆದಾಯ ಗಳಿಸುವಿರಿ. ನಿವೇಶನ ಖರೀದಿಗೆ ಮನಸ್ಸು ಮಾಡುವಿರಿ. ಅಹಿತಕರ ವಾರ್ತೆ ಕೇಳಿಬಂದೀತು.

ವೃಶ್ಚಿಕ: ಆದಾಯ ವೃದ್ಧಿಯಾದರೂ ಕೈಗೆಟುಕದ ಸ್ಥಿತಿ. ಹಣ ಬಂದ ಹಾಗೇ ಖರ್ಚುಗಳಿಗೂ ದಾರಿಯಾಗುತ್ತದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಕ್ರಿಯಾತ್ಮಕತೆಗೆ ಬೆಲೆ ಸಿಗಲಿದೆ. ದಾಂಪತ್ಯದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳೇ ದೊಡ್ಡದಾಗಬಹುದು. ಎಚ್ಚರಿಕೆಯಿಂದಿರಿ.

ಧನು: ಗೃಹ ಕಲಹಗಳು ತಿಳಿಯಾಗಿ ನೆಮ್ಮದಿಯ ವಾತಾವರಣವಿರಲಿದೆ. ವಿನಾಕಾರಣ ಇಲ್ಲದ ಅನುಮಾನ ತಲೆಯಲ್ಲಿ ತುಂಬಿಕೊಂಡು ಚಿಂತೆ ಮಾಡಬೇಡಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ದಿನದಂತ್ಯಕ್ಕೆ ಶುಭ ಸುದ್ದಿ.

ಮಕರ: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಉನ್ನತಿ ಕಂಡುಬರಲಿದೆ. ಶಿಕ್ಷಕರಿಂದ ಪ್ರಶಂಸೆಗೊಳಗಾಗುವರು. ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರಿಂದ ಅಪವಾದದ ಭೀತಿಯಿದೆ. ಸಂಚಾರದಿಂದ ಆರೋಗ್ಯ ಹಾನಿಯಾದೀತು. ಎಚ್ಚರಿಕೆ ಅಗತ್ಯ.

ಕುಂಭ: ಕಟ್ಟಡ ಕಾಮಗಾರಿ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಮುನ್ನಡೆಯಿರಲಿದೆ. ಆದಾಯ ಹೆಚ್ಚುವುದು. ಅಂದುಕೊಂಡ ಕೆಲಸ ಕಾರ್ಯಗಳನ್ನು ನೆರವೇರಿಸುವಿರಿ. ಆದರೆ ಅಪರಿಚಿತರನ್ನು ನಂಬಿ ಹೂಡಿಕೆ ಮಾಡಲು ಹೋಗಬೇಡಿ. ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ಮಾಡುವಿರಿ.

ಮೀನ: ಆತುರದ ಬುದ್ಧಿ ಯಾರಿಗೂ ಒಳ್ಳೆಯದಲ್ಲ. ದುಡುಕಿ ನಿರ್ಧಾರ ತೆಗೆದುಕೊಳ್ಳಲು ಹೋದರೆ ಕೈಸುಟ್ಟುಕೊಳ್ಳಬೇಡಿ. ರಾಜಕೀಯ ರಂಗದವರಿಗೆ ಹಿನ್ನಡೆಯಾದೀತು. ಪ್ರಯತ್ನ ಬಲಕ್ಕೆ ಫಲ ಸಿಗದೇ ನಿರಾಶೆ ಕಾಡಬಹುದು. ಆದರೆ ಮಿತ್ರರ ಸಹಕಾರ ದೊರಕಲಿದೆ.

Share this Story:

Follow Webdunia Hindi

ಮುಂದಿನ ಸುದ್ದಿ

ಮನೆಯ ಮುಖ್ಯದ್ವಾರದ ಎದುರುಗಡೆ ಈ ವಸ್ತುವನ್ನು ಇರಿಸಿದರೆ ಅದೃಷ್ಟ ಹೊರಟುಹೋಗುತ್ತದೆ