ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮಂಗಳವಾರ, 15 ಅಕ್ಟೋಬರ್ 2019 (09:00 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಕಿರಿ ಕಿರಿಯಿಂದ ತಾಳ್ಮೆ ತಪ್ಪುವ ಪ್ರಸಂಗಗಳು ಎದುರಾಗಬಹುದು. ಅವಿವಾಹಿತರಿಗೆ ವಿವಾಹ ಪ್ರಯತ್ನಕ್ಕೆ ಮುನ್ನಡೆ ಸಿಗಲಿದೆ. ಸಾಮಾಜಿಕ ರಂಗದಲ್ಲಿ ಉನ್ನತ ಸ್ಥಾನ ಮಾನ ಯೋಗವಿದೆ. ದಿನದಂತ್ಯಕ್ಕೆ ನೆಮ್ಮದಿ.

ವೃಷಭ: ವೃತ್ತಿರಂಗದಲ್ಲಿ ಹೆಚ್ಚಿನ ಜವಾಬ್ಧಾರಿಗಳು ಹೆಗಲಿಗೇರಲಿವೆ. ನಿಮ್ಮ ಪ್ರಗತಿಗೆ ಪೂರಕವಾದ ಅನೇಕ ಅವಕಾಶಗಳು ಎದುರಾಗಲಿವೆ. ಬಳಸಿಕೊಳ್ಳಬೇಕಷ್ಟೇ. ಹೂಡಿಕೆ ವ್ಯವಹಾರದಲ್ಲಿ ಲಾಭ ಕಂಡುಬರುವುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.

ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ತೋರಿಬರಲಿದೆ. ನಿಮಗೆ ಇಷ್ಟವಿಲ್ಲದಿದ್ದರೂ ಕೆಲವು ವ್ಯಕ್ತಿಗಳೊಂದಿಗೆ ವ್ಯವಹರಿಸಬೇಕಾದ ಅನಿವಾರ್ಯತೆ ಬರಲಿದೆ. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕರ್ಕಟಕ: ಕೆಲವು ಪ್ರತಿಷ್ಠಿತ ವ್ಯಕ್ತಿಗಳ ಒಡನಾಟವಾಗಲಿದೆ. ನಿಮ್ಮ ಕಾರ್ಯಸಾಧನೆಗೆ ಅನುಕೂಲಕರ ವಾತಾವರಣ ಸಿಗುವುದು. ಆರ್ಥಿಕವಾಗಿ ನಾನಾ ರೀತಿಯಲ್ಲಿ ಮುನ್ನಡೆಗೆ ಅವಕಾಶ ದೊರೆಯಲಿದೆ. ಹಿರಿಯರ ಸಲಹೆಗಳಿಗೆ ಕಿವಿಗೊಡಿ.

ಸಿಂಹ: ಹಿರಿಯರಿಗೆ ಕಿರಿಯರಿಂದ ಉಪೇಕ್ಷೆಗೊಳಗಾದ ನೋವು ಕಾಡುವುದು. ಇನ್ನೊಬ್ಬರಿಗೆ ಸಹಾಯ ಮಾಡುವಾಗ ಎಚ್ಚರಿಕೆಯಿಂದಿರಿ. ವಂಚನೆಗೊಳಗಾಗುವ ಭೀತಿಯಿದೆ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ. ಕೌಟುಂಬಿಕವಾಗಿ ನೆಮ್ಮದಿ ಇರಲಿದೆ.

 
ಕನ್ಯಾ: ಆರ್ಥಿಕವಾಗಿ ನಾನಾ ರೀತಿಯ ಖರ್ಚು ವೆಚ್ಚಗಳು ಎದುರಾಗಲಿವೆ. ವ್ಯಾಪಾರ ವ್ಯವಹಾರದಲ್ಲಿ ಕೊಂಚ ಏರುಪೇರಾಗಬಹುದು. ಧೃತಿಗೆಡಬೇಡಿ. ಹೆಚ್ಚಿನ ಧನಾರ್ಜನೆಗೆ ಅವಕಾಶಗಳು ಒದಗಿ ಬರಲಿವೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ತುಲಾ: ವೃತ್ತಿರಂಗದಲ್ಲಿ ಅಭಿವೃದ್ಧಿ ತೋರಿಬಂದರೂ ಸಹೋದ್ಯೋಗಿಗಳ ವೃತ್ತಿ ಮತ್ಸರಕ್ಕೆ ಬೇಸರವಾಗಬಹುದು. ಅನವಶ್ಯಕ ಚಾಡಿ ಮಾತುಗಳಿಗೆ ಕಿವಿಗೊಡದೇ ಇರುವುದು ಉತ್ತಮ. ನಿರುದ್ಯೋಗಿಗಳಿಗೆ ಸರಕಾರಿ ಉದ್ಯೋಗದ ಅದೃಷ್ಟವಿದೆ. ಇಷ್ಟ ದೇವರ ಪ್ರಾರ್ಥನೆ ಮಾಡಿ.

ವೃಶ್ಚಿಕ: ವೃತ್ತಿ ಕ್ಷೇತ್ರದಲ್ಲಿ ಅನಗತ್ಯ ವಿವಾದಗಳು ಕೇಳಿಬಂದಾವು. ಮಹಿಳೆಯರೊಂದಿಗೆ ವ್ಯವಹರಿಸುವಾಗ ಎಚ್ಚರದಿಂದಿರಿ. ಕೌಟುಂಬಿಕವಾಗಿ ಹೊಂದಾಣಿಕೆಯ ಮನಸ್ಥಿತಿ ಇರಲಿ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಆರ್ಥಿಕವಾಗಿ ಖರ್ಚು ವೆಚ್ಚದ ಬಗ್ಗೆ ಮಿತಿಯಿರಲಿ.

ಧನು: ನಿಮ್ಮ ಕೆಲಸದಲ್ಲಿ ಅಭಿವೃದ್ಧಿಗೆ ಪೂರಕವಾದ ಎಲ್ಲಾ ವಾತಾವರಣ ಕಂಡುಬರುವುದು. ಯೋಗ್ಯ ವಯಸ್ಕರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ ಅನುಭವಿಸಲಿದ್ದೀರಿ. ಸಹೋದರರೊಂದಿಗೆ ಆಸ್ತಿ ವಿಚಾರವಾಗಿ ಕಿರಿ ಕಿರಿಯಾಗಬಹುದು. ತಾಳ್ಮೆಯಿರಲಿ.

ಮಕರ: ಕಠಿಣ ಪರಿಶ್ರಮದಿಂದ ಅಸಾಧ್ಯವಾದುದನ್ನು ಸಾಧಿಸುವ ಛಲ ಮೂಡಲಿದೆ. ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ವ್ಯಾಪಾರ ವ್ಯವಹಾರಗಳು ನಿಮ್ಮ ಲೆಕ್ಕಾಚಾರದಂತೆ ನಡೆಯಲಿದೆ. ಗೃಹೋಪಯೋಗಿ ವಸ್ತುಗಳಿಗೆ ಖರ್ಚು ಮಾಡಲಿದ್ದೀರಿ. ವಿದ್ಯಾರ್ಥಿಗಳಿಗೆ ಮುನ್ನಡೆ ಸಿಗಲಿದೆ.

ಕುಂಭ: ಜವಾಬ್ಧಾರಿಯಿಂದ ದುಡಿಯುವವರಿಗೆ ಶ್ರಮಕ್ಕೆ ತಕ್ಕ ಪ್ರಶಂಸೆ, ಫಲ ಸಿಗಲಿದೆ. ಉದರ ಸಂಬಂಧೀ ಆರೋಗ್ಯ ಸಮಸ್ಯೆ ಕಾಡಬಹುದು. ಎಚ್ಚರಿಕೆಯಿಂದಿರಿ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕುವುದು ಒಳಿತು. ನಿರುದ್ಯೋಗಿಗಳು ಪಾಲಿಗೆ ಬಂದ  ಅವಕಾಶ ಬಳಸಿಕೊಳ್ಳುವುದು ಉತ್ತಮ.

ಮೀನ: ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ. ಪ್ರೇಮಿಗಳ ಗುಟ್ಟು ಮನೆಯವರ ಎದುರು ಬಹಿರಂಗವಾಗಲಿದೆ. ಸಾಂಸಾರಿಕವಾಗಿ ಅನಗತ್ಯ ವಿವಾದಗಳು ಮೈ ಮೇಲೆ ಎಳೆದುಕೊಳ್ಳಬೇಡಿ. ತಾಳ್ಮೆಯಿಂದಿರುವುದು ಮುಖ್ಯ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಷ್ಟ ಪರಿಹಾರವಾಗಲು ತಪ್ಪದೇ ಹೇಳಿ ಈ ಮಂತ್ರ