Select Your Language

Notifications

webdunia
webdunia
webdunia
webdunia

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ
ಬೆಂಗಳೂರು , ಸೋಮವಾರ, 14 ಅಕ್ಟೋಬರ್ 2019 (08:43 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


ಮೇಷ: ಹಲವು ವಿಷಯಗಳಿಂದ ಕಾಡುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಮನಸ್ಸು ಒಂದು ರೀತಿಯಲ್ಲಿ ಹಗುರವಾಗುವುದು. ಉದ್ಯೋಗ ಕ್ಷೇತ್ರದಲ್ಲಿ ಬಿಡುವಿಲ್ಲದ ಕೆಲಸದಿಂದ ಹೈರಾಣಾಗುವಿರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ.

ವೃಷಭ: ಪ್ರೀತಿ ಪಾತ್ರರಿಗಾಗಿ ಹೆಚ್ಚಿನ ಸಮಯ ಮೀಸಲಿಡಿ. ಸಣ್ಣ ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಸಣ್ಣ ಮಟ್ಟಿನ ಲಾಭವಾಗಲಿದೆ. ಪ್ರೀತಿ ಪಾತ್ರರೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ಸಂಗಾತಿಯ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಿ.

ಮಿಥುನ: ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಚಾಲನೆ ನೀಡುವಿರಿ. ಧಾರ್ಮಿಕ ಕಾರ್ಯಗಳನ್ನು ನಡೆಸಲು ಸಿದ್ಧತೆ ನಡೆಸುವಿರಿ. ಇಷ್ಟದೇವರ ಪ್ರಾರ್ಥನೆ ಮಾಡಿ ಕೆಲಸ ಆರಂಭಿಸಿದರೆ ಅಂದುಕೊಂಡಿದ್ದು ನೆರವೇರುವುದು. ನೂತನ ದಂಪತಿಗಳಿಗೆ ಮಧುಚಂದ್ರ ಭಾಗ್ಯವಿದೆ.

ಕರ್ಕಟಕ: ಕಲಾಕ್ಷೇತ್ರದಲ್ಲಿರುವವರು ಕೀರ್ತಿ ಸಂಪಾದಿಸಲಿದ್ದಾರೆ. ಸಾಮಾಜಿಕವಾಗಿ ಉತ್ತಮ ಸ್ಥಾನ ಮಾನ ಗಳಿಸುವಿರಿ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ  ಇರಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಸಕ್ತಿಯ ಕೊರತೆ ಕಾಣಿಸುವುದು.

ಸಿಂಹ: ಹೊಸ ವ್ಯವಹಾರಗಳಿಗೆ ಕೈ ಹಾಕಲು ಇದು ಶುಭದಿನ. ವಾಹನ, ಭೂಮಿ ಖರೀದಿ ಮಾಡಲು ಸಕಾಲ. ಉದ್ಯೋಗದಲ್ಲಿ ಮುನ್ನಡೆ, ಬಡ್ತಿ ಸಿಗುವುದು. ಸಾಂಸಾರಿಕವಾಗಿ ಹೊಂದಾಣಿಕೆಯಿಂದ ನಡೆದುಕೊಳ್ಳುವುದು ಮುಖ್ಯ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.

ಕನ್ಯಾ: ನೀವು ಮಾಡುವ ಕೆಲಸಗಳು ಸಂಗಾತಿಯ ಪ್ರೀತಿ ಆದರಗಳಿಗೆ ಕಾರಣವಾಗುವುದು. ಮಕ್ಕಳಿಂದ ಸಂತಸದ ವಾರ್ತೆ ಆಲಿಸುವಿರಿ. ಸಾಂಸಾರಿಕವಾಗಿ ನೆಮ್ಮದಿಯ ದಿನಗಳು ಇದಾಗಲಿವೆ. ಉದ್ಯೋಗ ಕ್ಷೇತ್ರದಲ್ಲಿ ಬಿಡುವಿಲ್ಲದ ಕೆಲಸವಿದ್ದರೂ ಮುನ್ನಡೆಗೆ ತೊಂದರೆಯಾಗದು.

ತುಲಾ: ರಾಜಕೀಯ ರಂಗದಲ್ಲಿರುವವರಿಗೆ ಉತ್ತಮ ಸ್ಥಾನ ಮಾನ ಲಭ್ಯವಾಗಲಿದೆ. ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನದಿಂದ ಮನಸ್ಸಿಗೆ ಸಂತಸವಾಗುವುದು.

ವೃಶ್ಚಿಕ: ಅಧಿಕ ಲಾಭ ತರುವ ಯೋಜನೆಗಳಿಗೆ ಕೈ ಹಾಕುವಿರಿ. ಹೆಚ್ಚಿನ ಆದಾಯ ಕೈಗೆ ಬಂದಂತೇ ಖರ್ಚೂ ಹೆಚ್ಚುವುದು. ಜಾಗ್ರತೆಯಿರಲಿ. ಹಿರಿಯರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡಬೇಕಾದೀತು. ಎಚ್ಚರಿಕೆಯಿಂದಿರಿ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯುವಿರಿ.

ಧನು: ಹೊಸ ಕೆಲಸಗಳಿಗೆ ಕೈ ಹಾಕಿದರೂ ನಾನಾ ರೀತಿಯ ಅಡಚಣೆಗಳುಂಟಾಗಿ ಅರ್ಧಕ್ಕೇ ನಿಲ್ಲಲಿವೆ. ತಾಳ್ಮೆಗೆಡಬೇಡಿ. ಕೆಳ ಹಂತದ ನೌಕರರಿಗೆ ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ. ಸಂಗಾತಿಯೊಂದಿಗೆ ಮನಸ್ತಾಪವಾಗದಂತೆ ಎಚ್ಚರಿಕೆ ವಹಿಸಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ಮಕರ: ಇಷ್ಟ ಮಿತ್ರರ ಭೇಟಿ,  ಭೋಜನ ಸಾಧ್ಯತೆಯಿದೆ. ಆದರೆ ಖರ್ಚು ವೆಚ್ಚದ ಬಗ್ಗೆ ಹಿಡಿತವಿರಲಿ. ಉದರ ಸಂಬಂಧೀ ಆರೋಗ್ಯ ಸಮಸ್ಯೆಗಳು ಕಂಡುಬಂದೀತು. ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನಕರ ದಿನ ನಿಮ್ಮದಾಗಲಿದೆ. ದಿನದಂತ್ಯಕ್ಕೆ ಶುಭ ಸುದ್ದಿಯಿದೆ.

ಕುಂಭ: ವಾಹನ ಸವಾರರಿಗೆ ಅಪಘಾತದ ಭೀತಿಯಿದೆ ಎಚ್ಚರಿಕೆ ಅಗತ್ಯ. ದೂರ ಸಂಚಾರದಲ್ಲಿ ಅಡೆತಡೆಗಳುಂಟಾದೀತು. ಸಂಗಾತಿಯ ಪ್ರೀತಿ ಸಿಗಲಿದೆ. ಗೃಹೋಪಯೋಗಿ ವಸ್ತುಗಳಿಗೆ ಹೆಚ್ಚಿನ ಧನವ್ಯಯ ಮಾಡುವಿರಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ.

ಮೀನ: ಮಹಿಳಾ ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಕಿರಿ ಕಿರಿಯಾಗಬಹುದು. ಋಣಾತ್ಮಕ ಆಲೋಚನೆಗಳನ್ನು ಬಿಟ್ಟು ಆತ್ಮಸ್ಥೈರ್ಯದಿಂದ ಮುನ್ನಡೆಯಬೇಕಾದ ಸಮಯವಿದು. ಪ್ರೇಮಿಗಳ ಗುಟ್ಟು ಮನೆಯವರ ಎದುರು ಬಹಿರಂಗವಾಗಲಿದೆ. ದೇವತಾ ಪ್ರಾರ್ಥನೆ ಮರೆಯದಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಗ್ರಹಗಳ ಸ್ಥಾನಕ್ಕನುಗುಣವಾಗಿ ನಿಮ್ಮ ಮಾತಿನ ಗುಣ ಹೇಗಿದೆ ತಿಳಿಯಿರಿ!