ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶುಕ್ರವಾರ, 20 ಸೆಪ್ಟಂಬರ್ 2019 (08:44 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕಾರ್ಯಕ್ಷೇತ್ರದಲ್ಲಿ ಅಡಚಣೆಗಳು ಕಂಡುಬರಲಿದೆ. ನಿಮ್ಮ ಮನಸ್ಸಿಗೆ ವಿರುದ್ಧವಾದ ಕೆಲಸಗಳನ್ನು ಬಲವಂತವಾಗಿ ಮಾಡಬೇಕಾಗುತ್ತದೆ. ಸ್ತ್ರೀಯರಿಗೆ ಸಾಂಸಾರಿಕವಾಗಿ ಶುಭಫಲಗಳಿವೆ. ಕೌಟುಂಬಿಕವಾಗಿ ನೆಮ್ಮದಿಯಿರಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಕೃಷಿಕರಿಗೆ ಅಂದುಕೊಂಡ ಕೆಲಸಗಳು ನೆರವೇರಿ ನಿವ್ವಳ ಲಾಭ ಕೈಗೆ  ಬರಲಿವೆ. ಆದಾಯಕ್ಕೆ ತೊಂದರೆಯಾಗದು. ಆದರೆ ಖರ್ಚು ವೆಚ್ಚಗಳು ಅಧಿಕವಾಗುವುದು. ಸಾಂಸಾರಿಕವಾಗಿ ದಂಪತಿಗಳಲ್ಲಿ ಮನಸ್ತಾಪವಾಗದಂತೆ ಎಚ್ಚರವಹಿಸಬೇಕು.

ಮಿಥುನ: ಇಂದು ನೀವು ಎಷ್ಟು ಮೌನವಾಗಿರುತ್ತೀರೋ ಅಷ್ಟು ಒಳ್ಳೆಯದು. ದುಡುಕಿ ಮಾತನಾಡಿ ಸಂಬಂಧದಲ್ಲಿ ತೊಂದರೆ ತಂದುಕೊಳ್ಳುವಿರಿ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟುಗಳು ಎದುರಾಗಲಿವೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ. ದೇವತಾ ಪ್ರಾರ್ಥನೆ ಮಾಡಿ.

ಕರ್ಕಟಕ: ಸಾಲಗಾರರಿಂದ ಮುಕ್ತಿ ಸಿಗಲಿದೆ. ಆರ್ಥಿಕವಾಗಿ ನಾನಾ ಮೂಲಗಳಿಂದ ಧನಾಗಮನವಾಗಲಿದೆ. ಹೊಸ ವ್ಯವಹಾರಗಳು ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಸಕಾಲ. ಸಂಗಾತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ವೃತ್ತಿರಂಗದಲ್ಲಿ ಮುನ್ನಡೆಯಿರುವುದು.

ಸಿಂಹ: ಗೃಹೋಪಯೋಗಿ ವಸ್ತುಗಳಿಗಾಗಿ ಹೆಚ್ಚಿನ ಧನವ್ಯಯ ಮಾಡುವಿರಿ. ಸರಕಾರಿ ಉದ್ಯೋಗಿಗಳಿಗೆ ಬಡ್ತಿ ಯೋಗವಿದೆ. ಆರೋಗ್ಯದಲ್ಲಿ ಹಂತ ಹಂತವಾಗಿ ಸುಧಾರಣೆ ಕಾಣುವಿರಿ. ಮನಸ್ಸಿನ  ನೆಮ್ಮದಿಗೆ ಭಂಗ ತರುವ ಘಟನೆಗಳು ಸಂಭವಿಸೀತು. ತಾಳ್ಮೆ ಕಳೆದುಕೊಳ್ಳಬೇಡಿ.

ಕನ್ಯಾ: ಪತಿ-ಪತ್ನಿಯರ ಹೊಂದಾಣಿಕೆ ಉತ್ತಮವಾಗಿರಲಿದ್ದು, ಸುಮಧುರ ಕ್ಷಣ ಕಳೆಯುವಿರಿ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟುಗಳು ಎದುರಾಗುವುದರಿಂದ ಅಂದುಕೊಂಡ ಕೆಲಸಗಳಿಗೆ ವಿಘ‍್ನಗಳು ಎದುರಾಗಲಿವೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ತುಲಾ: ಬಹುದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಯೋಗವಿದೆ. ಆರ್ಥಿಕವಾಗಿ ಲಾಭ ಕಂಡುಬರಲಿದೆ. ದೈವಾನುಕೂಲದಿಂದ ಮನೆಯಲ್ಲೂ ನೆಮ್ಮದಿಯ ವಾತಾವರಣವಿರುವುದು. ದಿನದಂತ್ಯಕ್ಕೆ ಮತ್ತಷ್ಟು ಶುಭಫಲವಿದೆ.

ವೃಶ್ಚಿಕ: ದೈವಾನುಕೂಲ ನಿಮಗಿಂದ ಕೊಂಚ ಕಡಿಮೆ. ಹೀಗಾಗಿ ಅಂದುಕೊಂಡ ಕಾರ್ಯಗಳಿಗೆ ವಿಘ್ನ,  ಅಡಚಣೆಗಳು ತೋರಿಬಂದೀತು. ಆದರೆ ತಾಳ್ಮೆ ಕಳೆದುಕೊಳ್ಳಬೇಡಿ. ಮುಂದೆ ಗೃಹ ವಾಹನಾದಿ ಲಾಭಗಳಿವೆ. ವ್ಯವಹಾರದಲ್ಲಿ ಎಚ್ಚರಿಕೆಯಿರಲಿ.

ಧನು: ಸಾಂಸಾರಿಕವಾಗಿ ಸಂತಸದ ಕ್ಷಣ ಕಳೆಯುವಿರಿ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲಿತಾಂಶ ಸಿಗುವುದು. ಮಕ್ಕಳಿಂದ ಸಂತಸ ಸಿಗುವುದು. ಆದರೆ ದೇಹಾರೋಗ್ಯ ಏರುಪೇರಾಗಬಹುದು. ಅನಿರೀಕ್ಷಿತವಾಗಿ ಕೆಲವು ಖರ್ಚು ವೆಚ್ಚಗಳು ಎದುರಾಗಬಹುದು.

ಮಕರ: ಅಂದುಕೊಂಡ ಕಾರ್ಯಗಳನ್ನು ಸುಗಮವಾಗಿ ನೆರವೇರಿಸುವಿರಿ. ವ್ಯವಹಾರದಲ್ಲಿ ಏಳಿಗೆ ಕಂಡುಬರುವುದು. ಆರ್ಥಿಕವಾಗಿ ಸ್ಥಿತಿ ಗತಿ ಸುಧಾರಿಸುವುದು. ಕೌಟುಂಬಿಕವಾಗಿ ಸಂಗಾತಿಯೊಂದಿಗೆ ಮನಸ್ತಾಪಗಳಾದಂತೆ ಎಚ್ಚರ ವಹಿಸಿ.

ಕುಂಭ: ಸಂಗಾತಿಯ ಮನೋಕಾಮನೆಗಳನ್ನು ಪೂರೈಸಲು ಶ್ರಮಪಡಬೇಕಾಗುತ್ತದೆ. ಕೆಲಸ ಕಾರ್ಯದಲ್ಲಿ ವಿಳಂಬ ಕಂಡುಬಂದೀತು. ಮಹಿಳೆಯರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಧಾರ್ಮಿಕ ಕೆಲಸಗಳಿಗೆ ಧನವಿನಿಯೋಗ ಮಾಡುವಿರಿ.

ಮೀನ: ಉದರ ಸಂಬಂಧೀ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಂಡುಬಂದೀತು. ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು ಸಾಧಿಸುವಿರಿ. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಆದರೆ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಿಮ್ಮ ಸಮಸ್ಯೆಗಳೆಲ್ಲಾ ದೂರವಾಗಲು ತುಳಸಿ ಎಲೆಯಿಂದ ಹೀಗೆ ಮಾಡಿ