ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶನಿವಾರ, 6 ಏಪ್ರಿಲ್ 2019 (08:48 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಅನಿರೀಕ್ಷಿತ ಖರ್ಚು ವೆಚ್ಚಗಳು ತಲೆದೋರಲಿವೆ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡುವಿರಿ. ಶೀತ ಸಂಬಂಧೀ ಆರೋಗ್ಯ ಸಮಸ್ಯೆ ಕಾಡುವುದು. ಇಷ್ಟ ಭೋಜನ ಮಾಡುವಿರಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಬೇಕು.

ವೃಷಭ: ಧ‍ನಾಗಮನಕ್ಕೆ ಯಾವುದೇ ಕೊರತೆಯಿರದು. ಇದರಿಂದ ಕೈ ಹಿಡಿದ ಕೆಲಸಗಳನ್ನು ಪೂರ್ತಿ ಮಾಡುವಿರಿ. ವೃತ್ತಿ ರಂಗದಲ್ಲಿ ಮೇಲಧಿಕಾರಿಗಳ ಕಿರಿ ಕಿರಿ ಇರಲಿದ್ದು, ಮುನ್ನಡೆಗೆ ಇದುವೇ ಅಡ್ಡಗಾಲಾಗಲಿದೆ. ಎಚ್ಚರಿಕೆಯಿಂದ ಹೆಜ್ಜೆಯಿಡಿ.

ಮಿಥುನ: ಆರೋಗ್ಯ ಹದಗೆಡುವ ಸಂಭವವಿದೆ ಎಚ್ಚರಿಕೆ ಅಗತ್ಯ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ವರ್ಗಾವಣೆ ಭೀತಿಯಿದೆ. ಸಾಮಾಜಿಕ ರಂಗದಲ್ಲಿ ಉನ್ನತ ಸ್ಥಾನ ಮಾನ ಗಳಿಸುವಿರಿ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಮಾರ್ಗಗಳು ಕಾಣುವುದು.

ಕರ್ಕಟಕ: ಆರ್ಥಿಕವಾಗಿ ಉತ್ತಮ ಅಭಿವೃದ್ಧಿಯಿದ್ದು, ಮನೆ, ಆಸ್ತಿ ಖರೀದಿಗೆ ಚಿಂತನೆ ಮಾಡುವಿರಿ. ಕಚೇರಿ ವ್ಯವಹಾರಗಳಲ್ಲಿ ಜಯ ನಿಮ್ಮದಾಗುವುದು. ಆದರೆ ಓಡಾಟ ಹೆಚ್ಚು. ವಾಹನ ಖರೀದಿಗೆ ಇದು ಸಕಾಲವಲ್ಲ.

ಸಿಂಹ: ಕಷ್ಟದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗದೇ ಒದ್ದಾಡುವಿರಿ. ಈ ವೇಳೆ ಹಿರಿಯರ ಅಭಿಪ್ರಾಯಗಳಿಗೆ ಬೆಲೆಕೊಡುವುದು ಒಳ್ಳೆಯದು. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಕೆಲಸಗಳು ಕೊಂಚ ನಿಧಾನಗತಿಯಲ್ಲಿ ಸಾಗಲಿದೆ.

ಕನ್ಯಾ: ಅನಗತ್ಯ ಚಿಂತೆಗಳಿಂದ ಮನಸ್ಸಿಗೆ ಬೇಸರ ಮಾಡಿಕೊಳ್ಳುವಿರಿ. ಸತತ ಓಡಾಟದಿಂದ ದೇಹಾಯಾಸವಾಗುವುದು. ಆದರೆ ಅನಿರೀಕ್ಷಿತವಾಗಿ ಬರುವ ಬಂಧಮಿತ್ರರಿಂದ ಮನೆಯಲ್ಲಿ ಸಂತಸದ ವಾತಾವರಣವಿರುವುದು.

ತುಲಾ: ವೃತ್ತಿರಂಗದಲ್ಲಿ ನಿಮ್ಮ ಕೆಲಸಗಳಿಗೆ ಮನ್ನಣೆ ಸಿಕ್ಕಿ ಪ್ರಶಂಸೆ ಪಡೆಯಲಿದ್ದೀರಿ. ದೂರ ಸಂಚಾರ ಮಾಡುವಾಗ ಆರೋಗ್ಯ ಕೈಕೊಡುವ ಸಂಭವವಿದೆ. ಹಣಕಾಸಿಗೆ ಯಾವುದೇ ತೊಂದರೆಯಾಗದು. ಆದರೆ ಹಿತಶತ್ರುಗಳ ಬಗ್ಗೆ ಎಚ್ಚರಿಕೆ ಅಗತ್ಯ.

ವೃಶ್ಚಿಕ: ಸಾಂಸಾರಿಕವಾಗಿ ನೆಮ್ಮದಿಯ ದಿನ. ಆದರೂ ಸಂಗಾತಿ ಬಗ್ಗೆ ಬೇರೆಯವರಿಂದ ಚಾಡಿ ಮಾಡು ಕೇಳಿಬರಬಹುದು. ಆರ್ಥಿಕವಾಗಿ ಖರ್ಚು ವೆಚ್ಚಗಳು ಹೆಚ್ಚಾಗಲಿವೆ, ಕಡಿವಾಣ ಅಗತ್ಯ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರಲಿದೆ.

ಧನು: ವೃತ್ತಿರಂಗದಲ್ಲಿ ಮುನ್ನಡೆ, ಬಡ್ತಿ ಯೋಗವಿದೆ. ಆದರೆ ಸಾಂಸಾರಿಕವಾಗಿ ಕೊಂಚ ಕಿರಿ ಕಿರಿ ಇರಬಹುದು. ಸಂಗಾತಿಯೊಂದಿಗೆ ಮನಸ್ತಾಪ ಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಆಲಸ್ಯ ತೋರುವರು. ದೇವತಾ ಪ್ರಾರ್ಥನೆ ಮಾಡಿ.

ಮಕರ: ಸಂಕಷ್ಟದ ಸಮಯದಲ್ಲಿ ಅಪರೂಪಕ್ಕೆ ಸಿಗುವ ಮಿತ್ರನಿಂದ ನೆರವು ಸಿಕ್ಕಿ ಕಾರ್ಯ ಸಿದ್ಧಿಯಾಗುವುದು. ಆರ್ಥಿಕವಾಗಿ ಸಮಧಾನಕರ ದಿನ. ಸಾಲ ಕೊಡಲು ಹೋಗಬೇಡಿ. ದೂರ ಸಂಚಾರ ಮಾಡುವುದಿದ್ದರೆ ಎಚ್ಚರಿಕೆ ಅಗತ್ಯ.

ಕುಂಭ: ಇಂದಿನ ದಿನ ಶುಭ ದಿನವಾಗಿದ್ದು, ಅವಿವಾಹಿತರಿಗೆ ಮನಸ್ಸಿಗೆ ಒಪ್ಪುವಂತಹ ವಿವಾಹ ಪ್ರಸ್ತಾಪಗಳು ಬರಲಿವೆ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ. ಆರ್ಥಿಕವಾಗಿ ಉತ್ತಮ ಚೇತರಿಕೆ ಕಂಡುಬರುವುದು.

ಮೀನ: ಹಠ ಬಿಡದೇ ಮುಂದುವರಿದರೆ ಅಂದುಕೊಂಡ ಕಾರ್ಯ ನೆರವೇರಿಸುತ್ತೀರಿ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡಿಕೊಳ್ಳಲಿದ್ದೀರಿ. ದಾಂಪತ್ಯದಲ್ಲಿ ಸುಂದರ ಕ್ಷಣಗಳು ನಿಮ್ಮದಾಗುವುದು. ಸಂತೃಪ್ತಿದಾಯಕ ದಿನ ನಿಮ್ಮದಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ                         

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಪವರ್ ಫುಲ್ ಸರಸ್ವತಿ ಮಂತ್ರ ಕನ್ನಡದಲ್ಲಿ ಇಲ್ಲಿದೆ

ಮಕರ ಸಂಕ್ರಾಂತಿ ನಾಳೆಯಾ, ನಾಡಿದ್ದಾ.. ಕನ್ ಫ್ಯೂಷನ್ ಬೇಡ ಇಲ್ಲಿ ನೋಡಿ

ಏಕಾದಶಮುಖ ಹನುಮತ್ಕವಚ ಸ್ತೋತ್ರಂ ಕನ್ನಡದಲ್ಲಿ

ಕಾಶೀ ವಿಶ್ವನಾಥನ ಭಕ್ತರಾಗಿದ್ದರೆ ಈ ಸ್ತೋತ್ರ ತಪ್ಪದೇ ಓದಿ

ಶನಿ ದೋಷ ನಿವಾರಣೆಗೆ ದಶರಥ ಕೃತ ಶನಿ ಮಂತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments