Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

webdunia
ಬೆಂಗಳೂರು , ಶುಕ್ರವಾರ, 15 ಮಾರ್ಚ್ 2019 (08:54 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ದೂರ ಸಂಚಾರ ಕೈಗೊಳ್ಳುವಿರಿ. ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗುವುದು. ಬಂಧು ಮಿತ್ರರ ಭೇಟಿಯಾಗುವಿರಿ. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡ ಹೆಚ್ಚುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.

ವೃಷಭ: ಕುಟುಂಬದಲ್ಲಿ ಕಲಹ, ಭಿನ್ನಾಭಿಪ್ರಾಯಗಳು ಮೂಡುವುದು. ಮೌನವೇ ಎಲ್ಲದಕ್ಕೂ ಪರಿಹಾರ. ದುಡುಕಿನ ವರ್ತನೆ ತೋರಬೇಡಿ. ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಕೈಗೊಂಡ ಕಾರ್ಯಗಳು ಯಶಸ್ವಿಯಾಗಲಿದೆ.

ಮಿಥುನ: ಕಾರ್ಮಿಕ ವರ್ಗದವರಿಗೆ ಕಷ್ಟ-ನಷ್ಟಗಳು ಎದುರಾಗಲಿವೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ನೆರೆಹೊರೆಯವರೊಂದಿಗೆ ಸಂಬಂಧ ಹಾಳಾಗಬಹುದು. ತಾಳ್ಮೆಯಿಂದಿರಿ.

ಕರ್ಕಟಕ: ದುಡಿದಷ್ಟೇ ಖರ್ಚಾಗುವ ಕಾರಣ ಒಂದು ರೀತಿಯ ಬೇಸರ ಮನಸ್ಸಿಗೆ ಉಂಟಾಗಲಿದೆ. ಅವಿವಾಹಿತರಿಗೆ ಮನಸ್ಸಿಗೆ ಹಿಡಿಸುವಂತಹ ಸಂಬಂಧಗಳು ಕೂಡಿಬರಲಿವೆ. ಮನೆಯಲ್ಲಿ ಶುಭ ಕಾರ್ಯ ನೆರವೇರಿಸುವಿರಿ.

ಸಿಂಹ: ಅನಿರೀಕ್ಷಿತವಾಗಿ ಆಗಮಿಸುವ ಬಂಧು ಮಿತ್ರರಿಂದ ಶುಭ ಸುದ್ದಿ. ಆರ್ಥಿಕವಾಗಿ ಅಭಿವೃದ್ಧಿ ಕಾಣುವಿರಿ. ವ್ಯವಹಾರದಲ್ಲಿ ಚೇತರಿಕೆ ಇರುವುದು. ಶತ್ರುಬಾಧೆಗಳು ನಿವಾರಣೆಯಾಗಲಿವೆ. ಆದರೆ ಮೇಲಧಿಕಾರಿಗಳಿಂದ ಕಿರಿ ಕಿರಿ ತಪ್ಪದು.

ಕನ್ಯಾ: ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗ ಕಂಡರೂ ಮನಸ್ಸಿಗೆ ಸಮಾಧಾನವಿರದು. ಆಸ್ತಿ ಸಂಬಂಧ ವ್ಯವಹಾರಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಅವಿವಾಹಿತರು ವಿವಾಹ ಭಾಗ್ಯಕ್ಕೆ ಸ್ವಲ್ಪ ದಿನ ಕಾಯಬೇಕಾಗುತ್ತದೆ.

ತುಲಾ: ಆರೋಗ್ಯದಲ್ಲಿ ಸುಧಾರಣೆ ಕಾಣಲಿದ್ದೀರಿ. ಅರ್ಧಕ್ಕೆ ನಿಂತ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಕಚೇರಿ ಕೆಲಸ ಮಾಡುವವರಿಗೆ ಬಡ್ತಿ, ಮುನ್ನಡೆ ಯೋಗವಿದೆ. ಮಿತ್ರರೊಂದಿಗೆ ಪ್ರವಾಸ ಕೈಗೊಳ್ಳುವಿರಿ.

ವೃಶ್ಚಿಕ: ಗೃಹ ಸಂಬಂಧೀ ಖರ್ಚು ವೆಚ್ಚಗಳು ಬರಲಿವೆ. ಆರೋಗ್ಯ ಹದಗೆಡುವುದು. ಒಂದು ರೀತಿಯ ಮಾನಸಿಕ ಚಿಂತೆ ಕಾಡಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರುವುದು. ಕಾರ್ಯನಿಮಿತ್ತ ಸಂಚಾರ ಮಾಡಬೇಕಾಗುತ್ತದೆ.

ಧನು: ಬಾಯ್ತಪ್ಪಿ ಆಡುವ ಮಾತಿಗೆ ಹಿರಿಯರಿಂದ ಬೈಸಿಕೊಳ್ಳಬೇಕಾಗುತ್ತದೆ. ವಾಸಸ್ಥಳ ಬದಲಾವಣೆಗೆ ಚಿಂತನೆ ಮಾಡುವಿರಿ. ಬಂಧು ಮಿತ್ರ ಆಗಮನವಾಗಿ ಖರ್ಚು ವೆಚ್ಚಗಳು ಹೆಚ್ಚಾಗುವುದು. ನೂತನ ದಂಪತಿಗೆ ಮಧು ಚಂದ್ರ ಭಾಗ್ಯವಿದೆ.

ಮಕರ: ಮಹಿಳೆಯರಿಗೆ ಶುಭ ದಿನವಾಗಿದ್ದು, ಕಾರ್ಯನಿಮಿತ್ತ ವಿದೇಶ ಪ್ರಯಾಣ ಯೋಗವೂ ಇದೆ. ಆದರೆ ಆರೋಗ್ಯ ಹದಗೆಡಬಹುದು. ಆಸ್ತಿ ಸಂಬಂಧ ವ್ಯಾಜ್ಯಗಳಲ್ಲಿ ಜಯ ನಿಮ್ಮದಾಗಲಿದೆ. ವ್ಯಾಪಾರಿಗಳಿಗೆ ಲಾಭವಾಗುವುದು.

ಕುಂಭ:  ಮನೆ ನಿರ್ವಹಣೆಗಾಗಿ ಖರ್ಚು ವೆಚ್ಚಗಳು ಅಧಿಕವಾಗುವುದು. ಆಸ್ತಿ ಸಂಬಂಧ ದಾಯಾದಿ ಕಲಹಗಳು ಏರ್ಪಡಲಿವೆ. ಹಿರಿಯರ ಮಾತಿಗೆ ಮನ್ನಣೆ ಕೊಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯ.

ಮೀನ: ಉದ್ಯೋಗ ಕ್ಷೇತ್ರದಲ್ಲಿ ಬಡ್ತಿ, ವೇತನ ಹೆಚ್ಚಳ ಸಾಧ್ಯತೆಯಿದೆ. ನಿಮ್ಮ ಕೆಲಸಗಳಿಂದ ಮೇಲಧಿಕಾರಿಗಳ ‍ಪ್ರಶಂಸೆಗೊಳಗಾಗುವಿರಿ. ಮನೆ ಕೆಲಸಗಳ ಕಡೆ ಗಮನ ಕೊಡಬೇಕಾಗುತ್ತದೆ. ಆದಾಯ ಹೆಚ್ಚಳದ ಮಾರ್ಗದ ಬಗ್ಗೆ ಚಿಂತನೆ ಮಾಡುವಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಯಾಣಿಸುವ ವೇಳೆ ಇದು ಕಣ್ಣಿಗೆ ಬಿದ್ದರೆ ನೀವು ಹೋದ ಕೆಲಸ ಯಶಸ್ವಿಯಾಗುವುದು ಖಂಡಿತ