Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 13 ಜನವರಿ 2019 (08:57 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಮನೆಯಲ್ಲಿ ಸಣ್ಣಪುಟ್ಟ ಕಿರಿ ಕಿರಿ ಇದ್ದೇ ಇರುತ್ತದೆ. ಆದರೆ ಮೌನವೇ ಎಲ್ಲದಕ್ಕೂ ಪರಿಹಾರ. ಮಾಡಬೇಕಾದ ಕೆಲಸಗಳಲ್ಲಿ ಕೊಂಚ ಉದಾಸೀನತೆ ಕಂಡುಬಂದೀತು. ಆದರೆ ಧನಲಾಭವಾಗಲಿದೆ. ಸಾಲ ಮರುಪಾವತಿಯಾಗಲಿದೆ. ಹೊಸ ವಸ್ತು ಖರೀದಿ ಮಾಡಲಿದ್ದೀರಿ.

ವೃಷಭ: ಎಷ್ಟೋ ದಿನದಿಂದ ಬಾಕಿಯಿದ್ದ ಸಮಸ್ಯೆಗಳಿಗೆ ಇಂದು ಮುಕ್ತಿ ಸಿಗಲಿದೆ. ಹಳೆಯ ಗೆಳೆಯರನ್ನು ಭೇಟಿಯಾಗುವಿರಿ. ನೂತನ ದಂಪತಿಗಳು ಸರಸದ ಕ್ಷಣ ಕಳೆಯುವರು. ಪ್ರೇಮಿಗಳಿಗೆ ಹಿರಿಯರಿಂದ ಕೊಂಚ ಅಡೆತಡೆ ತೋರಿಬಂದೀತು.

ಮಿಥುನ: ಸಾಹಿತ್ಯ ಕ್ಷೇತ್ರದಲ್ಲಿದ್ದವರಿಗೆ ಉತ್ತಮ ದಿನ. ಉದ್ಯೋಗಿಗಳಿಗೆ ಇಂದೂ ಕಾರ್ಯದೊತ್ತಡವಿರಲಿದೆ. ಅವಿವಾಹಿತರಿಗೆ ಹೊಸ ವಿವಾಹ ಪ್ರಸ್ತಾಪ ಬರುವುದು. ದೇವರ ದರ್ಶನ ಪಡೆಯುವಿರಿ.

ಕರ್ಕಟಕ: ಮನೆಯಲ್ಲಿ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ಮಾಡುವಿರಿ. ಆದರೆ ಅನಿರೀಕ್ಷತವಾಗಿ ಬರುವ ವಾರ್ತೆಯೊಂದು ನಿಮ್ಮನ್ನು ದುಃಖಕ್ಕೆ ಈಡುಮಾಡೀತು. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಸಿಂಹ: ವಿದ್ಯಾರ್ಥಿಗಳಿಗೆ ಪ್ರಯತ್ನಬಲದ ಅಗತ್ಯವಿದೆ. ಆತ್ಮವಿಶ್ವಾಸದ ಕೊರತೆಯಿಂದ ಬಳಲುತ್ತೀರಿ.  ಮಾನಸಿಕ ಕೊರಗು ಕಾಡುತ್ತಿರುತ್ತದೆ. ಆದರೆ ಅದನ್ನು ನಿಭಾಯಿಸುವ ಶಕ್ತಿ ಪಡೆಯುತ್ತೀರಿ. ದಿನದಂತ್ಯಕ್ಕೆ ಶುಭ ಸುದ್ದಿಯಿದೆ.

ಕನ್ಯಾ: ಬಂಧು ಮಿತ್ರರ ಜತೆ ಪ್ರವಾಸ ಹೋಗುವಿರಿ. ಆದರೆ ಖರ್ಚು ವೆಚ್ಚ ಹಿಡಿತದಲ್ಲಿರಲಿ. ಸಂಗಾತಿಯ ಮಾತಿಗೆ ಕಿವಿಗೊಡಬೇಕಾದೀತು. ಸಂಚಾರದಲ್ಲಿ ಎಚ್ಚರ ಅಗತ್ಯ. ಅವಘಡಗಳಾಗುವ ಸಾದ್ಯತೆಯಿದೆ.

ತುಲಾ: ಹಿತ ಶತ್ರುಗಳಿಂದ ವಂಚನೆಗೊಳಗಾಗುವಿರಿ. ಆಸ್ತಿ ವಿವಾದಗಳಿದ್ದರೆ ಅದರಲ್ಲಿ ನಿಮ್ಮ ಜಾಣ್ಮೆಯಿಂದಲೇ ಪರಿಹಾರ ಕಂಡುಕೊಳ್ಳುವಿರಿ. ದಾಯಾದಿಗಳು ನಿಮಗೆ ಗೊತ್ತಿಲ್ಲದೇ ನೆರವಾಗುವರು. ಕುಲದೇವರ ದರ್ಶನ ಪಡೆದರೆ ಉತ್ತಮ.

ವೃಶ್ಚಿಕ: ಧನಲಾಭವಾದಷ್ಟೇ ಖರ್ಚುಗಳೂ ಮಿತಿ ಮೀರುತ್ತಿವೆ ಎಂಬ ಚಿಂತೆ ಕಾಡಲಿದೆ. ಮಹಾಲಕ್ಷ್ಮಿಯನ್ನು ಆರಾಧಿಸಿದರೆ ಎಲ್ಲವೂ ಶುಭ. ಹೊಸ ವಾಹನ ಖರೀದಿಗೆ ಮುಂದಾಗುವಿರಿ. ಆದರೆ ವಂಚನೆಗೊಳಗಾದಂತೆ ಎಚ್ಚರ ವಹಿಸಿ.

ಧನು: ನೀವು ನಂಬಿಕೊಂಡ ವ್ಯಕ್ತಿಗಳಿಂದಲೇ ಮೋಸ ಹೋಗುವ ಸಂಭವವಿದೆ. ಯಾರನ್ನೂ ಕಣ್ಣು ಮುಚ್ಚಿ ನಂಬುವುದು ಬೇಡ. ಹಾಗೆಯೇ ಮಾತಿನ ಮೇಲೆ ಹಿಡಿತವಿರಲಿ. ಆರೋಗ್ಯ ಸಮಸ್ಯೆಗಳು ಸುಧಾರಿಸಿ ನೆಮ್ಮದಿ ಇರುವುದು.

ಮಕರ: ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗುವುದು. ಅವಿವಾಹಿತರಿಗೆ ವಿವಾಹ ಪ್ರಸ್ತಾಪ ಬಂದರೂ ಅದು ಕೈಗೂಡುವ ಸಾಧ್ಯತೆ ಕಡಿಮೆ. ಬಾಯ್ತಪ್ಪಿ ಆಡುವ ಮಾತು ಸಂಬಂಧ ಕೆಡಿಸೀತು. ಎಚ್ಚರಿಕೆಯಿಂದಿರಿ.

ಕುಂಭ: ತಾಳ್ಮೆಯೇ ಇಂದು ನಿಮ್ಮ ಪ್ರಮುಖ ಅಸ್ತ್ರವಾಗಲಿದೆ. ಮನೆಯಲ್ಲಿ ಕೊಂಚ ಕಿರಿ ಕಿರಿ ಇದ್ದೀತು. ವಿದ್ಯಾರ್ಥಿಗಳು ಪ್ರಯತ್ನ ಪಟ್ಟಷ್ಟು ಫಲಿತಾಂಶ ಸಿಗದೇ ನಿರಾಶೆಗೊಳಗಾಬೇಕಾದೀತು. ಆದರೆ ಆರ್ಥಿಕ ಲಾಭವಾಗಲಿದೆ.

ಮೀನ: ಹೊಸ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಲು ಸಕಾಲ. ಆದರೆ ಯಾವುದೇ ಕೆಲಸ ಮಾಡುವುದಕ್ಕೂ ಮೊದಲು ಯೋಜನೆ ಅಗತ್ಯ. ಸಂಗಾತಿಯಿಂದ ಸೂಕ್ತ ಸಲಹೆ ಸಿಗುವುದು. ಹಣಕಾಸಿನ ಮುಗ್ಗಟ್ಟುಗಳು ದೂರವಾಗುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Lucky number: ಹುಟ್ಟಿದ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ನೋಡಿ

Tulsi Mantra: ಹೆಣ್ಣು ಮಕ್ಕಳಿಗಾಗಿ ತುಳಸಿ ಅಷ್ಟೋತ್ತರ ಮಂತ್ರ ಇಲ್ಲಿದೆ

Parashurama Stuthi: ಪ್ರತಿನಿತ್ಯ ಬೆಳಿಗ್ಗೆ ಪರಶುರಾಮ ಸ್ತುತಿ ಓದಿ, ಎಷ್ಟು ಲಾಭವಿದೆ ನೋಡಿ

Subramanya Mantra: ಸುಬ್ರಹ್ಮಣ್ಯ ಅಷ್ಟೋತ್ತರ ಇಲ್ಲಿದೆ, ಇದನ್ನು ಯಾರು ಓದಬೇಕು ನೋಡಿ

Kaali Mantra: ಶತ್ರು ಭಯವಿದ್ದರೆ ಕಾಳಿಯ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments