ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶನಿವಾರ, 12 ಜನವರಿ 2019 (08:46 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಇಂದು ಸುಖ-ದುಃಖ ಎರಡೂ ಸಮನಾಗಿ ಇರಲಿದೆ. ಅಸಿಡಿಟಿ, ಹೊಟ್ಟೆಯುರಿಯಂತಹ ಸಮಸ್ಯೆಯಿಂದ ದೈನಂದಿನ ಜೀವನಕ್ಕೆ ತೊಂದರೆಯಾಗುವುದು. ಉದ್ಯೋಗದಲ್ಲಿ ನಿರೀಕ್ಷಿತ ಮುನ್ನಡೆಯಿದ್ದರೂ ಕಾರ್ಯದ ಒತ್ತಡದಿಂದ  ಹೈರಾಣಾಗುವಿರಿ.

ವೃಷಭ: ಮನೆಯಲ್ಲಿ ಮಂಗಲ ಕಾರ್ಯಗಳನ್ನು ನೆರವೇರಿಸಲು ಮುಂದಾಗುವಿರಿ. ಆದರೆ ಹಿತ ಶತ್ರುಗಳ ಬಗ್ಗೆ ಎಚ್ಚರವಿರಿ. ಕಾರ್ಯ ಕ್ಷೇತ್ರದಲ್ಲಿ ಕೈ ಹಿಡಿದ ಕಾರ್ಯಗಳು ನೆರವೇರುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.

ಮಿಥುನ: ಬಂಧು ಮಿತ್ರರಿಂದ ವಂಚನೆಗೊಳಗಾಗುವ ಸಂಭವವಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಹುಡುಕಾಟಕ್ಕಾಗಿ ದೂರ ಸಂಚಾರ ಮಾಡಬೇಕಾಗಬಹುದು. ಮನೆಗಾಗಿ ಹೊಸ ವಸ್ತುಗಳ ಖರೀದಿ ಮಾಡುವಿರಿ. ವಿವಾಹಿತರಿಗೆ ಸರಸಮಯ ಕ್ಷಣ ಕಳೆಯುವ ಅವಕಾಶ.

ಕರ್ಕಟಕ: ಕುಟುಂಬದಲ್ಲಿ ಕೊಂಚ ಶಾಂತಿ ಕದಡುವ ಸಂಭವವಿದ್ದರೂ ತಾಳ್ಮೆಯಿಂದ ವರ್ತಿಸಿದರೆ ಎಲ್ಲವೂ ಸುಸೂತ್ರವಾಗಲಿದೆ. ಖರ್ಚು ವೆಚ್ಚಗಳು ಅಧಿಕವಾಗಲಿದೆ. ಆದರೆ ತಾಳ್ಮೆಯಿಂದಿದ್ದರೆ ದಿನದಂತ್ಯಕ್ಕೆ ಶುಭ ಸುದ್ದಿ ಸಿಗಲಿದೆ.

ಸಿಂಹ: ವೃತ್ತಿ ರಂಗದಲ್ಲಿ ಅಧಿಕಾರ ವರ್ಗದವರಿಗೆ ಕಿರಿ ಕಿರಿ ಎದುರಾಗಬಹುದು. ಮೇಲಧಿಕಾರಿಗಳಿಂದ ಕಿರುಕುಳ ಅನುಭವಿಸುವಿರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಕುಲದೇವರ ದರ್ಶನ ಪಡೆಯಿರಿ.

ಕನ್ಯಾ: ನಿಮ್ಮದಲ್ಲದ ತಪ್ಪಿಗೆ ಶಿಕ್ಷೆಗೊಳಗಾಗಿ ಬೇಸರಕ್ಕೊಳಗಾಗುವಿರಿ. ನೂತನ ದಂಪತಿಗಳಿಗೆ ಮಧುಚಂದ್ರದ ಭಾಗ್ಯ ಸಿಗಲಿದೆ. ಆರ್ಥಿಕವಾಗಿ ಧನಾಗಮನವಾಗಿ ನೆಮ್ಮದಿ ಹೊಂದುವಿರಿ. ಸಾಲಗಳು ಮರುಪಾವತಿಯಾಗುವುದು.

ತುಲಾ: ಆರ್ಥಿಕವಾಗಿ ಸಾಕಷ್ಟು ಹಣ ಸಂಪಾದನೆ ಮಾಡುವಿರಿ. ಕೆಲವೊಮ್ಮೆ ಕೆಳ ಹಂತದ ಅಧಿಕಾರಿ ವರ್ಗದವರಿಂದ ಸಹಾಯವೂ ಸಿಗುತ್ತದೆ. ಕುಟುಂಬದಲ್ಲೂ ನೆಮ್ಮದಿಯ ವಾತಾವರಣವಿರುದು. ಒಟ್‍ಟಾರೆ ಇಂದು ಶುಭ ದಿನ.

ವೃಶ್ಚಿಕ: ಹೊಸ ವಸ್ತುಗಳು, ಆಸ್ತಿ, ವಾಹನ ಖರೀದಿಗೆ ಮುಂದಾಗುವಿರಿ. ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಓಡಾಡಬೇಕಾದೀತು. ಕುಟುಂಬದಲ್ಲಿ ಸಂಗಾತಿಯ ಸಲಹೆಗೆ ಮನ್ನಣೆ ಕೊಡಿ.

ಧನು: ವಿದೇಶ ಪ್ರಯಾಣ ಮಾಡುವ ಯೋಗವಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ಅವಿವಾಹಿತರಿಗೆ ಕಂಕಣ ಬಲ ಒದಗಿಬರಲಿದೆ. ದೇವರ ದರ್ಶನ ಪಡೆಯುವಿರಿ. ಖರ್ಚು ವೆಚ್ಚಗಳು ಅಧಿಕವಾಗುವುದು.

ಮಕರ: ಉದ್ಯೋಗದಲ್ಲಿ ಎಚ್ಚರಿಕೆಯಿಂದ ಮುನ್ನಡೆದರೆ ಯಶಸ್ಸು. ಉದ್ಯೋಗ ನಿಮಿತ್ತ ಬೇರೆ ಊರುಗಳಿಗೆ ಪ್ರಯಾಣ ಮಾಡಬೇಕಾದೀತು. ಆದರೆ ಆರೋಗ್ಯ ಕೈ ಕೊಟ್ಟು ನೆಮ್ಮದಿ ಕಳೆದುಕೊಳ್ಳುವಿರಿ. ದೇವರ ಪ್ರಾರ್ಥನೆ ಮಾಡಿ.

ಕುಂಭ: ಕುಟುಂಬದಲ್ಲಿ ತಾಳ್ಮೆಯಿಂದ ವರ್ತಿಸಿದಷ್ಟೂ ಇಂದು ನಿಮ್ಮ ದಿನ ಶುಭವಾಗುತ್ತದೆ. ಆರ್ಥಿಕವಾಗಿ ವಿಪರೀತ ಖರ್ಚು ವೆಚ್ಚದಿಂದ ಚಿಂತೆಯಾಗುವುದು. ಬೆನ್ನು ನೋವಿನ ಸಮಸ್ಯೆ ಕಾಡಬಹುದು.

ಮೀನ: ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಅವಕಾಶ ಅರಸಿ ಬರುವುದು. ಸಂಗಾತಿಯ ಮಾತಿಗೆ ಬೆಲೆ ಕೊಡಬೇಕಾಗುತ್ತದೆ. ಬಂಧು ಮಿತ್ರರು ಅನಿರೀಕ್ಷಿತವಾಗಿ ಆಗಮಿಸಿ ಅಚ್ಚರಿಯ ವಾರ್ತೆ ನೀಡುವರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅವಳಿ ಬಾಳೆಹಣ್ಣನ್ನು ದೇವರ ಪೂಜೆಗೆ ಬಳಸಬಹುದೇ?