ವೃಷಭ ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ?

ಶುಕ್ರವಾರ, 11 ಜನವರಿ 2019 (09:04 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ವೃಷಭ ರಾಶಿಯವರ ಗುಣ ಸ್ವಭವಾವೇನು? ಅವರು ಯಾವ ಉದ್ಯೋಗಕ್ಕೆ ಸರಿಹೊಂದುತ್ತಾರೆ ನೋಡೋಣ.


ವೃಷಭ ರಾಶಿಯವರನ್ನು ಮೇಲ್ನೋಟಕ್ಕೆ ತುಂಬಾ ಉದಾಸೀನ ಪ್ರವೃತ್ತಿ ಇರುವವರು ಎನಿಸುತ್ತದೆ. ಆದರೆ ಎಲ್ಲರೂ ಹಾಗಿರುವುದಿಲ್ಲ. ತಮ್ಮ ವೈಯಕ್ತಿಕ ವಿಚಾರಕ್ಕೆ ಬಂದರೆ ಅವರು ಚುರುಕಾಗಿ ಕೆಲಸ ಮಾಡುತ್ತಾರೆ.  ಸಂಘಟಿತವಾಗಿ, ಆಕ್ರಮಣಕಾರಿಯಾಗಿ ಕೆಲಸ ಮಾಡಲೂ ಹಿಂಜರಿಯುವುದಿಲ್ಲ. ಎಲ್ಲಾ ಕೆಲಸವನ್ನೂ ಯೋಜಿತವಾಗಿ ಮಾಡುವ ಸ್ವಭಾವ ವೃಷಭ ರಾಶಿಯವರದ್ದು.

ಈ ರಾಶಿಯವರಿಗೆ ಶಿಕ್ಷಕ ವೃತ್ತಿ, ಫ್ಯಾಶನ್, ಡಿಸೈನಿಂಗ್, ಆರ್ಕಿಟೆಕ್ಟ್, ಸಿನಿಮಾ ತಾಂತ್ರಿಕ ಕ್ಷೇತ್ರಗಳು ಸರಿಹೊಂದುತ್ತವೆ. ಆದಷ್ಟು ಕ್ರಿಯೇಟಿವಿಟಿಗೆ ಅವಕಾಶವಿರುವ ವೃತ್ತಿ ಮಾಡಿದರೆ ಈ ರಾಶಿಯವರು ಮುನ್ನಡೆ ಸಾಧಿಸುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದಿನಕ್ಕೊಂದು ರಾಶಿ: ಮಕರ ರಾಶಿಯ ದಂಪತಿ ನಡುವೆ ಕಲಹವೇರ್ಪಡುತ್ತಿದ್ದರೆ ಏನು ಪರಿಹಾರ?