Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 6 ಜನವರಿ 2019 (08:41 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಹಿತಶತ್ರುಗಳ ಕಾಟದಿಂದ ಮನಸ್ಸಿಗೆ ಕಿರಿ ಕಿರಿ. ಉದ್ಯೋಗಿಗಳಿಗೆ ಕಾರ್ಯದೊತ್ತಡವಿರುವುದು. ಕ್ರೀಡಾಳುಗಳಿಗೆ ಯಶಸ್ಸು. ಆರೋಗ್ಯ ಕೊಂಚ ಹದ ತಪ್ಪುವುದು.


ವೃಷಭ: ಕೈಗೊಂಡ ವ್ಯವಹಾರದಲ್ಲಿ ನಿವ್ವಳ ಲಾಭವಾಗಿ ಸಂತಸ ಮೂಡುವುದು. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ. ಉದ್ಯೋಗಿಗಳಿಗೆ ಬಡ್ತಿ. ಆರ್ಥಿಕವಾಗಿ ಮುನ್ನಡೆ.

ಮಿಥುನ: ಅವಿವಾಹಿತರಿಗೆ ಹೊಸ ವಿವಾಹ ಪ್ರಸ್ತಾಪಗಳು ಬಂದರೂ ಮನಸ್ಸಿಗೆ ಹಿತವೆನಿಸುವ ಸಂಬಂಧವಾಗಿರದು. ಪ್ರೇಮಿಗಳೂ ಮನೆಯವರ ವಿರೋಧ ಕಟ್ಟಿಕೊಳ್ಳಬೇಕಾದೀತು. ದೇವರ ಪ್ರಾರ್ಥನೆ ಮಾಡಿ.

ಕರ್ಕಟಕ: ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಶುಭ ಕಾರ್ಯ ಮಾಡಲು ಸೂಕ್ತ ಸಮಯವಲ್ಲ. ಆರ್ಥಿಕವಾಗಿ ಅಡಚಣೆ, ಅವಮಾನ, ಅಪವಾದಕ್ಕೆ ಗುರಿಯಾಗಬೇಕಾದೀತು.

ಸಿಂಹ: ಆದಾಯ ಧಾರಾಳವಾಗಿರುತ್ತದೆ. ಆದರೆ ಅಷ್ಟೇ ಖರ್ಚುವೆಚ್ಚಗಳೂ ಇದ್ದು ಉಳಿತಾಯ ಕಾಣಲಾರಿರಿ. ಯಾರೊಂದಿಗೆ ವ್ಯವಹಾರ ಮಾಡುವುದಿದ್ದರೂ ಎಚ್ಚರಿಕೆ ಅಗತ್ಯ. ಉದ್ಯೋಗದಲ್ಲಿ ಕೊಂಚ ಹಿನ್ನಡೆ ಅನುಭವಿಸಬೇಕಾದೀತು.

ಕನ್ಯಾ: ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ಅರಸಿ ಬರಲಿವೆ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಉದಾಸೀನತೆ ಕಂಡುಬಂದೀತು. ಖರ್ಚು ವೆಚ್ಚಗಳಿಗೆ ಕಡಿವಾಣವಿರಲಿ. ಕೈಗೊಳ್ಳುವ ಕೆಲಸಗಳಲ್ಲಿ ಅಡವಣೆ ಉಂಟಾಗುವುದನ್ನು ತಪ್ಪಿಸಲು ದೇವರ ಪ್ರಾರ್ಥನೆ ಮಾಡಿ.

ತುಲಾ: ಮಾನಸಿಕವಾಗಿ ಯಾವುದೋ ಚಿಂತೆ ನಿಮ್ಮನ್ನು ಕಾಡಲಿದೆ. ಧನಲಾಭ ಯೋಗವಿದೆ. ಹೊಸ ವಸ್ತುಗಳ ಖರೀದಿ ಮಾಡುವಿರಿ. ಆದರೆ ದಾಯಾದಿಗಳಿಂದ ವಂಚನೆಗೊಳಗಾಗುವ ಸಾಧ‍್ಯತೆಯಿದೆ.

ವೃಶ್ಚಿಕ: ಇದುವರೆಗೆ ನಿಮ್ಮನ್ನು ಬಾಧಿಸುತ್ತಿದ್ದ ಆರ್ಥಿಕ ಅಡಚಣೆ ನಿಧಾನವಾಗಿ ದೂರವಾಗುವುದು. ಉದ್ಯೋಗದಲ್ಲಿ ಮುನ್ನಡೆ ಸಾಧಿಸುವಿರಿ. ವಾಹನ ಖರೀದಿ ಯೋಗವಿದೆ. ಆದರೆ ನಷ್ಟ ಅನುಭವಿಸುವ ಸಾಧ್ಯತೆಯೂ ಇದೆ.

ಧನು: ಪ್ರಯತ್ನವಿದ್ದಲ್ಲಿ ಯಾವುದೇ ಕೆಲಸಗಳೂ ನೆರವೇರುವುದು. ಆರೋಗ್ಯದಲ್ಲಿ ತುಸು ಚೇತರಿಕೆ ಕಂಡುಬರುವುದು. ಹಾಗಿದ್ದರೂ ಮಾನಸಿಕ ಚಿಂತೆ ತಪ್ಪಿದ್ದಲ್ಲ. ದಿನದಂತ್ಯಕ್ಕೆ ಶುಭ ಸುದ್ದಿ.

ಮಕರ: ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಕೆಲಸ ಹಾಳುಗೆಡವಬೇಡಿ. ಕೆಲವೊಮ್ಮೆ ಸ್ವಾಭಿಮಾನ ಮರೆಯಬೇಕು. ತಾಳ್ಮೆಯಿಂದ ಮುನ್ನಡೆದರೆ ಅಭಿವೃದ್ಧಿ ಕಾಣುವಿರಿ. ಕುಟುಂಬದಲ್ಲೂ ಸಮಾಧಾನದಿಂದ ವ್ಯವಹರಿಸಿ.

ಕುಂಭ: ಅನಿರೀಕ್ಷಿತವಾಗಿ ಬಂಧುಮಿತ್ರರ ಆಗಮನವಾಗಲಿದೆ. ಮಿತ್ರರ ಜತೆಗೆ ಪ್ರವಾಸ ಕೈಗೊಳ್ಳುವಿರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗಲಿದೆ.

ಮೀನ: ವೃತ್ತಿಯಲ್ಲಿ ಸಮಾಧಾನಕರ ವಾತಾವರಣವಿರುತ್ತದೆ. ಬಿಡುವಿನ ದಿನದ ಸದುಪಯೋಗಪಡಿಸಿಕೊಳ್ಳುವಿರಿ. ದಂಪತಿಗಳು ಸರಸಮಯ ಕ್ಷಣಗಳನ್ನು ಕಳೆಯುವರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shani Mantra: ಶನಿ ರಕ್ಷಾಸ್ತವಃ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

Saraswathi Mantra: ವಿದ್ಯೆ ತಲೆಗೆ ಹತ್ತಬೇಕೆಂದರೆ ಸರಸ್ವತಿಯ ಈ ಸ್ತೋತ್ರ ಓದಿ

Krishna Mantra: ಶ್ರೀಕೃಷ್ಣಾಷ್ಟಕಂ ಪ್ರತಿನಿತ್ಯ ಓದಿ: ಕನ್ನಡದಲ್ಲಿ ಇಲ್ಲಿದೆ

Lakshmi Mantra: ಹಣಕಾಸಿನ ಸಮಸ್ಯೆಯಿದ್ದರೆ ತಪ್ಪದೇ ಈ ಮಂತ್ರ ಓದಿ

ಮುಂದಿನ ಸುದ್ದಿ
Show comments