ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರುವಾರ, 3 ಜನವರಿ 2019 (08:45 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಹಿರಿಯರ ಆರೋಗ್ಯದ ಬಗ್ಗೆ ಚಿಂತೆ ಮಾಡಬೇಕಾದೀತು. ವೃತ್ತಿಯಲ್ಲಿ ಮುಂಬಡ್ತಿ ಸಿಗುತ್ತದೆ. ಆದರೆ ನಿರ್ಧಾರ ಕೈಗೊಳ್ಳುವಾಗ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ. ದೂರ ಸಂಚಾರ ಯೋಗವೂ ಇದೆ.

ವೃಷಭ: ಅನಿರೀಕ್ಷಿತವಾಗಿ ಅಪರಿಚಿತರ ನೆರವಿನಿಂದ ಅಂದುಕೊಂಡ ಕಾರ್ಯ ನೆರವೇರಲಿದೆ. ಸಮಾಜದಲ್ಲಿ ಗೌರವ, ಸ್ಥಾನ ಮಾನ ಪ್ರಾಪ್ತಿಯಾಗುವುದು. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ.

ಮಿಥುನ: ಯಾವುದೋ ಒಂದು ಪ್ರಮುಖ ವಿಚಾರಕ್ಕೆ ಕುಟುಂಬದವರೊಂದಿಗೆ ಭಿನ್ನಾಭಿಪ್ರಾಯ ಮಾಡಿಕೊಳ್ಳುತ್ತೀರಿ.ವಿದ್ಯಾರ್ಥಿಗಳಿಗೆ ಪ್ರಯತ್ನಬಲವಿಲ್ಲದೇ ಯಶಸ್ಸು ಸಿಗದು. ಹೊಸ ವ್ಯಕ್ತಿಗಳು ಕಷ್ಟ ಕಾಲದಲ್ಲಿ ನೆರವಾಗಲಿದ್ದಾರೆ.

ಕರ್ಕಟಕ: ದೃಢಚಿತ್ತರಾಗಿ ಕಾರ್ಯದಲ್ಲಿ ತೊಡಗಿಸಿಕೊಂಡರೆ ಯಶಸ್ವಿಯಾಗುವಿರಿ. ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಆರೋಗ್ಯದ ಬಗ್ಗೆ ತುಸು ಕಾಳಜಿ ಅಗತ್ಯ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ.

ಸಿಂಹ: ಕೈಗೊಂಡ ಕಾರ್ಯಗಳಲ್ಲಿ ಪ್ರಗತಿ ಕಂಡುಬಂದು ನೆಮ್ಮದಿ ಮೂಡುತ್ತದೆ. ಕುಟುಂಬದಲ್ಲೂ ಶಾಂತಿಯ ವಾತಾವರಣವಿರುತ್ತದೆ. ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಕೊಂಚ ಅಡೆತಡೆ ಎದುರಾಗಬಹುದು.

ಕನ್ಯಾ: ವ್ಯಾಪಾರಿಗಳಿಗೆ ಅಧಿಕ ಲಾಭ ದೊರಕಿ ಶುಭದಿನವಾಗಲಿದೆ. ಕಷ್ಟ ಕಾಲದಲ್ಲಿ ಸ್ನೇಹಿತರು ನೆರವಿಗೆ ಬರುತ್ತಾರೆ. ಖರ್ಚು ವೆಚ್ಚಗಳು ಅಧಿಕವಾಗಿದ್ದರೂ ಅಷ್ಟೇ ಆದಾಯವೂ ಇರುತ್ತದೆ.

ತುಲಾ: ಮಾನಸಿಕವಾಗಿ ನಿಮ್ಮನ್ನು ಕೊರೆಯುತ್ತಿದ್ದ ಚಿಂತೆ ದೂರವಾಗಲಿದೆ. ವೃತ್ತಿ ರಂಗದಲ್ಲಿ ಯಶಸ್ಸು ಸಾಧಿಸುವಿರಿ. ಆರ್ಥಿಕ ಲಾಭವಾಗಿ ಸಂತಸ ಹೊಂದುವಿರಿ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ.

ವೃಶ್ಚಿಕ: ಕುಟುಂಬದಲ್ಲಿ ನೆಮ್ಮದಿ ನೆಲೆಸಿರುತ್ತದೆ. ಆದರೆ ಸಮಸ್ಯೆಗಳು ಬಂದಾಗ ನೀವು ಏಕಾಂಗಿಯಾಗಿ ಹೋರಾಡಬೇಕಾಗುತ್ತದೆ. ಧೃತಿ ಗೆಡಬೇಡಿ. ಆರ್ಥಿಕವಾಗಿ ತುಸು ಚೇತರಿಕೆ ಕಂಡುಬರುವುದು.

ಧನು: ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಬಂಧು ಮಿತ್ರರೊಂದಿಗೆ ಪ್ರವಾಸ ಕೈಗೊಳ್ಳುವಿರಿ. ಸಂಗಾತಿಯೊಂದಿಗೆ ಸುಖ-ನೆಮ್ಮದಿಯ ಕಾಲ ಕಳೆಯುವಿರಿ. ನಿರುದ್ಯೋಗಿಗಳಿಗೆ ಉದ್ಯೋಗ ದೊರಕಲಿದೆ.

ಮಕರ: ಈಗಷ್ಟೇ ನಿಮಗೆ ಶುಭದಿನಗಳು ಪ್ರಾರಂಭವಾಗಿದೆ. ದೇವರ ಪ್ರಾರ್ಥನೆಯನ್ನು ಮರೆಯಬೇಡಿ. ಕೈಗೊಂಡ ಕಾರ್ಯಗಳು ನೆರವೇರುವುದು. ನಿಮ್ಮ ಕೆಲಸಗಳಿಗೆ ಹಿರಿಯರ ಬೆಂಬಲ ಸಿಗುವುದು. ದಿನದಂತ್ಯಕ್ಕೆ ಇನ್ನಷ್ಟು ಶುಭ ಸುದ್ದಿ.

ಕುಂಭ: ವ್ಯವಹಾರ ಮಾಡುವವರಿಗೆ ಸುಗ್ಗಿ ಕಾಲ. ಕೈಗೊಂಡ ಕಾರ್ಯ ಯಶಸ್ವಿಯಾಗುವುದಲ್ಲದೆ, ಲಾಭವೂ ಪಡೆಯುವಿರಿ. ಕುಟುಂಬದಲ್ಲಿ ಮಂಗಲ ಕಾರ್ಯಗಳಿಗಾಗಿ ಧನವಿನಿಯೋಗಿಸಬೇಕಾದೀತು. ವೃತ್ತಿ ರಂಗದಲ್ಲಿ ನೆಮ್ಮದಿಯ ವಾತಾವರಣವಿರುವುದು.

ಮೀನ:ಆತ್ಮವಿಶ್ವಾಸದಿಂದ ನಡೆದರೆ ಮಾತ್ರ ಯಶಸ್ಸು ಸಾಧ್ಯ. ದ್ವಂದ್ವ ಮನಸ್ಸು ಬಿಟ್ಟು ಹಾಕಿ. ಉದ್ಯೋಗದಲ್ಲಿ ಯಶಸ್ಸು ಸಾಧಿಸುವಿರಿ. ಅನಿರೀಕ್ಷಿತ ಸಂತಸದ ಸುದ್ದಿ ಕೇಳುವಿರಿ. ಖರ್ಚು ವೆಚ್ಚಗಳ ಬಗ್ಗೆ ಕಡಿವಾಣವಿರಲಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮನೆಯಲ್ಲಿ ಸಕರಾತ್ಮಕ ಶಕ್ತಿ ಹೆಚ್ಚಿಸಿಕೊಳ್ಳಲು ಮಣ್ಣಿನಿಂದ ಮಾಡಿದ ಈ ವಸ್ತುವನ್ನು ಈಶಾನ್ಯ ದಿಕ್ಕಿನಲ್ಲಿಡಿ