ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಮಂಗಳವಾರ, 11 ಡಿಸೆಂಬರ್ 2018 (09:27 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಮೇಲಧಿಕಾರಿಗಳಿಂದ ಕಿರಿ ಕಿರಿ ಇದ್ದು, ಕಾರ್ಯಕ್ಷೇತ್ರದಲ್ಲಿ ಒತ್ತಡ ತೋರಿಬಂದೀತು. ಕುಟುಂಬದವರ ಸಹಕಾರದಿಂದ ನೆಮ್ಮದಿ.

ವೃಷಭ: ಹಳೆಯ ಬಾಕಿಯೊಂದು ಪಾವತಿಯಾಗಲಿದೆ. ನೆಮ್ಮದಿಯ ಸಂತೋಷದ ದಿನ ಇಂದು ನಿಮ್ಮದಾಗಲಿದೆ. ಹೊಸ ವೃತ್ತಿಯಲ್ಲಿ ತೊಡಗಿಸಿಕೊಳ್ಳಲಿದ್ದೀರಿ.

ಮಿಥುನ: ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ಕೌಟುಂಬಿಕ ಸಮಸ್ಯೆಗಳಿಂದ ತಾಳ್ಮೆ ಕಳೆದುಕೊಳ್ಳುವಿರಿ. ಸಮಾಧಾನವಿರಲಿ.

ಕರ್ಕಟಕ: ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಲಿದೆ. ಹೊಸ ಸುದ್ದಿ ಕೇಳಿಬರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಸಿಂಹ: ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ದೊರೆಯಲಿದೆ. ತುಸು ತಾಳ್ಮೆ ಅಗತ್ಯ. ಕೀಳರಿಮೆ ಆಲೋಚನೆಗಳಿಂದ ಚಿಂತೆಯಲ್ಲಿ ಮುಳುಗದಿರಿ.

ಕನ್ಯಾ: ವೃತ್ತಿ ರಂಗದಲ್ಲಿ ಯಶಸ್ಸು ಲಭಿಸುತ್ತದೆ. ಕೊಂಚ ಮಾನಸಿಕ ಒತ್ತಡಗಳಿದ್ದರೂ ಅವು ನಿಮ್ಮ ದೈನಂದಿನ ಜೀವನವನ್ನು ಹೆಚ್ಚಾಗಿ ಬಾಧಿಸಲಾರದು.

ತುಲಾ: ಮಹಿಳೆಯರಿಗೆ ಸಂತಸದ ದಿನವಿದು. ಪ್ರಯತ್ನ ಬಲದಿಂದ ಯಶಸ್ಸು ಗಳಿಸುತ್ತೀರಿ. ಬೇರೆಯವರ ಮಾತುಗಳಿಗೆ ಕಿವಿಗೊಡಬೇಕಿಲ್ಲ.

ವೃಶ್ಚಿಕ: ವಿವಾಹ ಸಂಬಂಧವಾಗಿ ಕುಟುಂಬದವರ ಜತೆ ಕೊಂಚ ಕಿರಿ ಕಿರಿ ಅನುಭವಿಸುವಿರಿ. ತಾಳ್ಮೆ ಸಮಾಧಾನವಿದ್ದಲ್ಲಿ ಯಶಸ್ಸು ಸಾಧ್ಯ.

ಧನು: ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಂಗಾತಿಯ ಅಭಿಪ್ರಾಯ ಕೇಳಿ ಮುಂದುವರಿಯಿರಿ. ದಿನದಂತ್ಯಕ್ಕೆ ಶುಭ ವಾರ್ತೆ ಲಭಿಸಬಹುದು.

ಮಕರ: ಮನೆಯವರ ಪ್ರೀತಿ ಸಹಕಾರದಿಂದ ಇಂದು ನೀವು ಅಂದುಕೊಂಡ ಕೆಲಸ ಪೂರ್ಣಗೊಳಿಸುವಿರಿ. ದೇವಾಲಯಗಳಿಗೆ ಭೇಟಿ ನೀಡುವಿರಿ.

ಕುಂಭ: ಯಾರ ಜತೆಗೂ ಇಂದು ಶತ್ರುತ್ವ ಕಟ್ಟಿಕೊಳ್ಳಬೇಡಿ. ಎಷ್ಟೇ ಅಡಚಣೆಗಳಿದ್ದರೂ ತಾಳ್ಮೆಯಿಂದ ನಿಭಾಯಿಸಿದರೆ ಇಂದು ನೀವು ಅಂದುಕೊಂಡ ಕಾರ್ಯ ನೆರವೇರುತ್ತದೆ.

ಮೀನ: ದೂರ ಸಂಚಾರ ಮಾಡುವಿರಿ ಮತ್ತು ಧನವ್ಯಯವೂ ಆಗುವುದು. ಏನೇ ಕೆಲಸ ಮಾಡುವುದಿದ್ದರೂ ಕುಟುಂಬದವರೊಂದಿಗೆ ಚರ್ಚಿಸದೇ ಮುಂದುವರಿಯಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಬಳಿಕ ಈ ಐದು ರಾಶಿಯವರಿಗೆ ಸಂಕಷ್ಟ ತಪ್ಪಿದ್ದಲ್ಲ

ಗ್ರಹಗತಿಗಳ ದೋಷ ನಿವಾರಣೆಗೆ ನವಗ್ರಹ ಕವಚಂ ಸ್ತೋತ್ರ ಓದಿ

ದೀಪಾವಳಿ ಸಂದರ್ಭದಲ್ಲಿ ಯಾವ ರಾಶಿಯವರು ಯಾವ ಲಕ್ಷ್ಮೀ ಮಂತ್ರ ಹೇಳಬೇಕು ನೋಡಿ

ಶುಕ್ರವಾರ ಶ್ರೀ ಧನಲಕ್ಷ್ಮಿ ಸ್ತೋತ್ರವನ್ನು ತಪ್ಪದೇ ಓದಿ

ದೀಪಾವಳಿ ದಿನ ಯಾವ ರಾಶಿಯವರು ಯಾವ ಬಟ್ಟೆ ಹಾಕಿಕೊಂಡರೆ ಅದೃಷ್ಟ ನೋಡಿ

ಮುಂದಿನ ಸುದ್ದಿ
Show comments