Publish Date: Thu, 24 Jan 2019 (09:08 IST)
Updated Date: Thu, 24 Jan 2019 (09:10 IST)
ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ಒಂದೊಂದು ಗುಣ ಸ್ವಭಾವವಿರುತ್ತದೆ. ಆ ಸ್ವಭಾವಕ್ಕೆ ತಕ್ಕಂತ ವ್ಯಕ್ತಿಗಳನ್ನು ಮದುವೆಯಾದರೆ ಮಾತ್ರ ಸುಖವಾಗಿರಲು ಸಾಧ್ಯ. ಇಂದು ಮಿಥುನ ರಾಶಿ ನೋಡೋಣ.
ಮಿಥುನ ರಾಶಿಯವರಿಗೆ ಬೋರ್ ಎನ್ನುವ ಪದದ ಅರ್ಥವೇ ಗೊತ್ತಿರುವುದಿಲ್ಲ. ಇವರು ಲವ್ ಲೈಫ್ ನ್ನು ತುಂಬಾ ಎಂಜಾಯ್ ಮಾಡುವವರು. ಇವರು ತಮ್ಮ ಸಂಗಾತಿಯನ್ನೂ ಖುಷಿಯಾಗಿಡುತ್ತಾರೆ. ಹೀಗಾಗಿ ತುಂಬಾ ಮುಕ್ತ ಮನಸ್ಸಿನ ಕುಂಭ ರಾಶಿಯವರು ಇವರಿಗೆ ಸೂಕ್ತರಾಗುತ್ತಾರೆ.
ಹಾಗೆಯೇ ಇವರ ಬುದ್ಧಿ ಮತ್ತೆ ಮತ್ತು ದೈವಿಕ ಮನೋಭಾವಕ್ಕೆ ಸರಿಹೊಂದುವಂತೆ ಕನ್ಯಾ ರಾಶಿಯವರೂ ಸರಿ ಹೊಂದುತ್ತಾರೆ. ಇವರ ಸ್ನೇಹಪೂರ್ವ ವ್ಯಕ್ತಿತ್ವಕ್ಕೆ ಸಿಂಹ ರಾಶಿಯವರೂ ಮ್ಯಾಚ್ ಆಗುತ್ತಾರೆ. ಈ ಮೂರೂ ರಾಶಿಯಲ್ಲಿ ಯಾವುದೇ ರಾಶಿಯವರನ್ನೂ ಮದುವೆಯಾದರೂ ಇವರು ಸುಖವಾಗಿರುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ