ಸೆಪ್ಟೆಂಬರ್ 7, 2025 ರ ಭಾನುವಾರ ಪೂರ್ವಭಾದ್ರಪದ ನಕ್ಷತ್ರ ಕುಂಭರಾಶಿಯಲ್ಲಿ ಚಂದ್ರನಿಗೆ ರಾಹುಗ್ರಹಣವು ಸಂಭವಿಸಲಿದೆ. ಇದು ಭಾರತದಲ್ಲಿ ಗೋಚರವಿದ್ದು, ಹೀಗಾಗಿ ಆಸ್ತಿಕರು ಗ್ರಹಣ ಆಚರಣೆ ಮಾಡಬೇಕಾಗುತ್ತದೆ.
ರಾತ್ರಿ 09.56 ಕ್ಕೆ ಗ್ರಹಣ ಸ್ಪರ್ಶವಾಗಲಿದ್ದು, 11.40 ಕ್ಕೆ ಮಧ್ಯಕಾಲವಾಗಿರಲಿದೆ. 1.25 ಕ್ಕೆ ಮೋಕ್ಷ ಕಾಲವಾಗಿರುತ್ತದೆ. ಸಂಜೆಯೇ ಊಟ ಮುಗಿಸಬೇಕು. ಶಾಸ್ತ್ರದ ಪ್ರಕಾರ ಈ ದಿನ ಮಧ್ಯಾಹ್ನ 1.45 ಕ್ಕೆ ಭೋಜನ ಮುಗಿಸಬೇಕು. ಮಕ್ಕಳು, ಅನಾರೋಗ್ಯ ಪೀಡಿತರು, ವೃದ್ಧರು ಮಾತ್ರ ಸಂಜೆ 6.45 ರೊಳಗಾಗಿ ಊಟ ಮುಗಿಸಬೇಕು. ಮರುದಿನ ಬೆಳಿಗ್ಗೆ ಸ್ನಾನದ ನಂತರ ಶುದ್ಧರಾಗಿ ಅಡಿಗೆ, ತಿಂಡಿ ಇತ್ಯಾದಿ ಮಾಡಬೇಕು.
ಯಾವೆಲ್ಲಾ ರಾಶಿಗೆ ದೋಷ?
ಕುಂಭ ರಾಶಿಯಲ್ಲಿ ಗ್ರಹಣವಾಗಿರುವುದರಿಂದ ಈ ರಾಶಿಯವರಿಗೆ, ಮೀನ, ಕರ್ಕಟಕ, ಕನ್ಯಾ ರಾಶಿಯವರಿಗೂ ಗ್ರಹಣದಿಂದ ದೋಷಗಳಿವೆ. ಗ್ರಹಣ ದಿನ ಅಥವಾ ಮರುದಿನ ಶಿವನ ದೇವಾಲಯಕ್ಕೆ ತೆರಳಿ ಹಾಲಿನ ಅಭಿಷೇಕ ಅಥವಾ ಪೂಜೆ ಮಾಡುವುದರಿಂದ ತಕ್ಕ ಮಟ್ಟಿಗೆ ದೋಷ ಕಡಿಮೆಯಾಗುವುದು.