ನಾಳೆ ಚಂದ್ರಗ್ರಹಣವಿದ್ದು, ಕೆಲವು ರಾಶಿಯವರಿಗೆ ದೋಷವಿದೆ ಎಂದು ಶಾಸ್ತ್ರಜ್ಞರು ಹೇಳುತ್ತಾರೆ. ಹಾಗಿದ್ದರೆ ದೋಷ ನಿವಾರಣೆಗೆ ಚಂದ್ರಗ್ರಹಣ ಸಂದರ್ಭದಲ್ಲಿ ಯಾವ ಸ್ತೋತ್ರ ಪಠಿಸಬೇಕು ನೋಡಿ.
ಈ ಬಾರಿ ರಾಹುಗ್ರಸ್ಥ ರಕ್ತಚಂದ್ರಗ್ರಹಣವಾಗಲಿದ್ದು ಭಾರತದಲ್ಲೂ ಗೋಚರವಾಗಲಿದೆ. ಕುಂಭ, ಮೀನ, ಕರ್ಕಟಕ, ಕನ್ಯಾ ರಾಶಿಯವರಿಗೆ ಚಂದ್ರಗ್ರಹಣದಿಂದ ದೋಷವಾಗಲಿದೆ. ಹೀಗಾಗಿ ಈ ರಾಶಿಯವರು ತಪ್ಪದೇ ದೋಷ ನಿವಾರಣೆಗೆ ಪೂಜೆ ಮಾಡಬೇಕು.
ಚಂದ್ರ ಗ್ರಹಣದ ಸಮಯದಲ್ಲಿ ಈ ಮಂತ್ರಗಳನ್ನು ಹೇಳಬಹುದು.
ಓಂ ಏಂ ಕ್ಲೀಂ ಸೌಮಾಯ ನಾಮಾಯ ನಮಃ
ಅಥವಾ ಓಂ ಶ್ರಾಂ ಶ್ರೀಂ ಶ್ರೌಂ ಚಂದ್ರಾಯ ನಮಃ
ಅಥವಾ ಓಂ ಕ್ಷೀರ ಪುತ್ರಾಯ ವಿದ್ಮಹೇ ಅಮೃತ ತತ್ವಾಯ ಧೀಮಹೀ ತನ್ನೋ ಸೋಮ ಪ್ರಚೋದಯಾತ್
ಚಂದ್ರಗ್ರಹಣದ ಸಮಯದಲ್ಲಿ ಈ ಮಂತ್ರಗಳನ್ನು ಪಠಿಸುತ್ತಾ ಕಾಲ ಕಳೆದರೆ ಗ್ರಹಣದಿಂದ ಬರುವ ದೋಷಗಳಿಗೆ ತಕ್ಕಮಟ್ಟಿಗೆ ಪರಿಹಾರ ಸಿಗುವುದು.