Select Your Language

Notifications

webdunia
webdunia
webdunia
webdunia

ಯುಗಾದಿ ಹಬ್ಬ ಯಾವಾಗ, ಶುಭ ಮುಹೂರ್ತದ ವಿವರ ಇಲ್ಲಿದೆ

Ugadi festival
ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ ಎಂದರೆ ಯುಗಾದಿ ಹಬ್ಬಕ್ಕೆ. ಈ ವರ್ಷ ಯುಗಾದಿ ಹಬ್ಬ ಯಾವಾಗ, ಶುಭ ಮುಹೂರ್ತದ ವಿವರ ಇಲ್ಲಿದೆ ನೋಡಿ.

ಚಂದ್ರಮಾನ ಯುಗಾದಿ ಮತ್ತು ಸೌರಮಾನ ಯುಗಾದಿ ಎಂದು ಎರಡು ದಿನ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಚಂದ್ರಮಾನ ಯುಗಾದಿ ಆಚರಣೆಯಾದರೆ, ಕೇರಳ ಮತ್ತು ತಮಿಳುನಾಡು, ಕರ್ನಾಟಕದ ಕರಾವಳಿ ಭಾಗದಲ್ಲಿ ಸೌರಮಾನ ಯುಗಾದಿ ಆಚರಿಸಲಾಗುತ್ತದೆ.

ಈ ಬಾರಿ ಚಂದ್ರಮಾನ ಯುಗಾದಿ ಮಾರ್ಚ್ 19 ರಂದು ಬರಲಿದೆ.  ಯುಗಾದಿ ಹಬ್ಬದಂದು ಎಣ್ಣೆ ಸ್ನಾನ ಮಾಡಿ ಬೇವು-ಬೆಲ್ಲ ಹಂಚಿ ಜೀವನದ ಕಹಿ ಮತ್ತು ಸಿಹಿಯನ್ನು ಸಮಾನವಾಗಿ ಸ್ವೀಕರಿಸೋಣ ಎಂದು ಸಂದೇಶ ಸಾರಲಾಗುತ್ತದೆ.

ಚೈತ್ರಮಾಸ ಶುಕ್ಲ ಪಕ್ಷದ ಪ್ರತಿಪಾದ ತಿಥಿ ಈ ದಿನ ಆರಂಭವಾಗುವುದು ಬೆಳಿಗ್ಗೆ 6.52 ಕ್ಕೆ. ಮಾರ್ಚ್ 20 ರಂದು ಬೆಳಿಗ್ಗೆ 4.52 ಕ್ಕೆ ಪ್ರತಿಪಾದ ತಿಥಿ ಮುಕ್ತಾಯವಾಗುವುದು. ಬೆಳಿಗ್ಗೆ 6 ರಿಂದ 8.30 ರ ಸಮಯದಲ್ಲಿ ಪೂಜೆ ಮಾಡಲು ಸರಿಯಾದ ಸಮಯವಾಗಿದೆ. ಈ ದಿನ ಅಭಿಜಿನ್ ಮುಹೂರ್ತ ಮಧ್ಯಾಹ್ನ 12.05 ರಿಂದ 12.55 ರವರೆಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಹಾಗಣೇಶ ಪಂಚರತ್ನ ಸ್ತೋತ್ರ ಕನ್ನಡದಲ್ಲಿ