Publish Date: Sat, 18 Apr 2026 (10:59 IST)
Updated Date: Sat, 18 Apr 2026 (11:02 IST)
ಜಾತಕದಲ್ಲಿ ಅಪರೂಪಕ್ಕೆ ಶನಿ ಮತ್ತು ಮಂಗಳ ಗ್ರಹಗಳು ಒಂದೇ ಮನೆಯಲ್ಲಿದ್ದಾಗ ಅಥವಾ ಎದುರು ಬದುರು ಇದ್ದಾಗ ದೋಷವುಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಏನೆಲ್ಲಾ ಬದಲಾವಣೆ, ಪರಿಣಾಮಗಳು ಜೀವನದಲ್ಲಿ ಎದುರಾಗುತ್ತವೆ ನೋಡಿ.
ಮಂಗಳ ಗ್ರಹ ವೇಗ, ಉತ್ಸಾಹ, ಆಕ್ರಮಣಕಾರೀ ಸ್ವಭಾವ ಹೊಂದಿರುತ್ತವೆ. ಶನಿ ಗ್ರಹ ವಿಳಂಬ, ಅಡೆತಡೆಗಳ ಲಕ್ಷಣಗಳನ್ನು ಹೊಂದಿರುತ್ತವೆ. ಈ ಎರಡೂ ತದ್ವಿರುದ್ಧ ಸ್ವಭಾವದ ಗ್ರಹ ದೋಷವಾದಾಗ ಜೀವನದಲ್ಲಿ ಏನೆಲ್ಲಾ ತೊಂದರೆಯಾಗುತ್ತದೆ ಗೊತ್ತಾ?
ನೀವು ಜೀವನದಲ್ಲಿ ಎಷ್ಟೇ ಕಠಿಣ ಪ್ರಯತ್ನ ಮಾಡಿದರೂ ಅದಕ್ಕೆ ತಕ್ಕ ಫಲ ಸಿಗದೇ ಹತಾಶೆ ಅನುಭವಿಸಬೇಕಾದೀತು. ಯಾವುದೇ ಕೆಲಸ ಮಾಡಲು ಹಿಂಜರಿಕೆ, ಎಷ್ಟೋ ಸಮಯದಿಂದ ಅದುಮಿಟ್ಟಿದ್ದ ಕೋಪ ನಿಯಂತ್ರಿಸಲಾಗದೇ ಒಮ್ಮೆಲೆ ಹೊರ ಹೊಮ್ಮುವ ಸನ್ನಿವೇಶಗಳು ಎದುರಾದೀತು.
ಈ ದೋಷವಿದ್ದಾಗ ಅಪಘಾತವಾಗುವ ಸಾಧ್ಯತೆ, ಶಸ್ತ್ರಚಿಕಿತ್ಸೆ ಅಥವಾ ಗಾಯಗಳಾಗುವ ಸಂಭವ ಹೆಚ್ಚು. ಅಲ್ಲದೆ ದೈಹಿಕವಾಗಿ ಸುಸ್ತಾಗುತ್ತೀರಿ. ವೃತ್ತಿ ಜೀವನದಲ್ಲಿ ಮೇಲಧಿಕಾರಿಗಳೊಂದಿಗೆ ಸಂಘರ್ಷಗಳನ್ನು ಎದುರಿಸಬೇಕಾದೀತು. ಇನ್ನು, ಸಂಬಂಧಗಳಲ್ಲೂ ನಿಮ್ಮ ವ್ಯಂಗ್ಯ ಭರಿತ ಮಾತುಗಳಿಂದ ನೋವು, ಹೊಂದಾಣಿಕೆಯ ಕೊರತೆ ಉಂಟಾದೀತು. ಈ ಸಮಯದಲ್ಲಿ ಆದಷ್ಟು ಶನಿ ದೇವ ಮತ್ತು ಸುಬ್ರಹ್ಮಣ್ಯನ ಸೇವೆ ಮಾಡುತ್ತಿರಬೇಕು. ಶನಿ ಮಂತ್ರ, ಹನುಮಾನ್ ಚಾಲೀಸಾ, ಮಹಾಮೃತ್ಯುಂಜತ ಮಂತ್ರ ಪಠಿಸುತ್ತಿರಬೇಕು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ