Select Your Language

Notifications

webdunia
webdunia
webdunia
webdunia

ಲಕ್ಷ್ಮೀ ದೇವಿಯ ಅನುಗ್ರಹ ಸಿಗಬೇಕಾದರೆ ಶುಕ್ರವಾರ ಮಾಡಲೇಬೇಕಾದ ಕೆಲಸಗಳು

Lakshmi Godess
ಇಂದು ಶುಕ್ರವಾರವಾಗಿದ್ದು ಲಕ್ಷ್ಮೀ ದೇವಿಗೆ ವಿಶೇಷವಾದ ದಿನವಾಗಿದೆ. ಇಂದು ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಕೆಲವು ಕೆಲಸಗಳನ್ನು ತಪ್ಪದೇ ಮಾಡಿ.

ಮನೆ ಬಾಗಿಲಲ್ಲೇ ಸ್ವಚ್ಛವಾಗಿದ್ದರೆ ಲಕ್ಷ್ಮೀ ದೇವಿ ಸಂತುಷ್ಟಳಾಗುತ್ತಾಳಂತೆ. ಹೀಗಾಗಿ ಬೆಳಿಗ್ಗೆ ಎದ್ದ ತಕ್ಷಣ ಮುಂಬಾಗಿಲ ಬಳಿ ಗುಡಿಸಿ, ನೀರು ಹಾಕಿ ರಂಗೋಲಿ ಬಿಡಿಸಿ. ಬಾಗಿಲಿಗೆ ತೋರಣಗಳಿಂದ ಅಲಂಕರಿಸಿ. ನೀವೂ ಸ್ನಾನ ಮಾಡಿ ಶುದ್ಧರಾಗಿದ್ದರೆ ಲಕ್ಷ್ಮೀ ದೇವಿ ಪ್ರಸನನ್ನಳಾಗುತ್ತಾಳೆ.

ವಿಶೇಷವಾಗಿ ಶುಕ್ರವಾರಗಳಂದು ತುಪ್ಪದ ದೀಪವನ್ನೇ ಹಚ್ಚಿ. ದೇವರ ಮನೆಯನ್ನು ತಾವರೆ ಹೂ, ದಾಸವಾಳ ಹೂಗಳಿಂದ ಅಲಂಕರಿಸಿ. ಇಂದು ಶ್ರೀ ಸೂಕ್ತ ಅಥವಾ ಲಕ್ಷ್ಮೀ ಅಷ್ಟೋತ್ತರ ಪಠಿಸಿ ಪೂಜೆ ಮಾಡಿ. ಹಾಲಿನ ನೈವೇದ್ಯ ತಪ್ಪದೇ ಇಡಿ. ಅಥವಾ ಸಾಧ್ಯವಾದಲ್ಲಿ ಹಾಲು ಹಾಕಿದ ಪಾಯಸ ತಯಾರಿಸಿ ನೈವೇದ್ಯ ಮಾಡಿ.

ವಿಶೇಷವಾಗಿ ಬಡವರಿಗೆ ಹಾಲು, ಸಕ್ಕರೆ ಅಥವಾ ಬಿಳಿ ವಸ್ತ್ರ ದಾನ ಮಾಡಿ. ಗೋವುಗಳಿಗೆ ಅಕ್ಕಿ, ಬೆಲ್ಲ ಗ್ರಾಸ ನೀಡಿ. ಸಂಜೆ ಹೊತ್ತು ಬಾಗಿಲ ಬಳಿ, ತುಳಸಿ ಕಟ್ಟೆ ಬಳಿ ಮತ್ತು ದೇವರ ಮನೆಯಲ್ಲಿ ದೀಪ ಹಚ್ಚುವುದನ್ನು ಮರೆಯಬೇಡಿ. ಹೀಗೆ ಮಾಡಿದಲ್ಲಿ ಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳೆ ಎಂಬ ನಂಬಿಕೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇವಿಯ ಅನುಗ್ರಹಕ್ಕಾಗಿ ಇಲ್ಲಿದೆ ಸರಳ, ಚುಟುಕಾದ ದೇವಿ ಮಂತ್ರ