Publish Date: Sun, 11 Nov 2018 (07:33 IST)
Updated Date: Sun, 11 Nov 2018 (07:36 IST)
ಬೆಂಗಳೂರು : ಕೆಲವು ಮಕ್ಕಳಿಗೆ ಮರೆವಿನ ಸಮಸ್ಯೆ ಇರುತ್ತದೆ. ಇದರಿಂದ ಅವರಿಗೆ ಏನೇ ಕಲಿತರು ಅದು ನೆನಪಲ್ಲಿ ಉಳಿಯೋದಿಲ್ಲ. ಪರೀಕ್ಷೆಯಲ್ಲಿಯೂ ಕೂಡ ಉತ್ತಮ ಅಂಕ ಗಳಿಸಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಗೆ ಉತ್ತಮ ಪರಿಹಾರವೆಂದರೆ ಅದು ಗಣೇಶ ರುದ್ರಾಕ್ಷಿ ಧರಿಸುವುದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಕ್ಕಳ ಜಾತಕದಲ್ಲಿ ಬುಧಗ್ರಹ ದೋಷವಿದ್ದರೆ ಈ ಸಮಸ್ಯೆ ಕಾಡುತ್ತದೆಯಂತೆ. ಆದ್ದರಿಂದ ಮಕ್ಕಳ ಮೇಲೆ ಬುಧಗ್ರಹ ಅನುಗ್ರಹವಿರಬೇಕು. ಗಣೇಶ ರುದ್ರಾಕ್ಷಿ ಮಾಲೆಯನ್ನು ಧರಿಸಿದ್ರೆ ಬುಧಗ್ರಹ ಅನುಗ್ರಹ ದೊರೆಯುತ್ತದೆ.
ಗಣೇಶ ರುದ್ರಾಕ್ಷಿ ಧರಿಸುವ ಮೊದಲು ಹಸುವಿನ ಹಾಲು ಅಥವಾ ಗೋ ಮೂತ್ರದಿಂದ ರುದ್ರಾಕ್ಷಿಯನ್ನು ಸ್ವಚ್ಛಗೊಳಿಸಬೇಕು. ನಂತ್ರ ಪೂಜೆ ಮಾಡಬೇಕು. ಗಣೇಶ ರುದ್ರಾಕ್ಷಿಯನ್ನು ಹಸಿರು ಬಣ್ಣದ ದಾರದಲ್ಲಿ ಪೊಣಿಸಿ ಹಾಕಿಕೊಳ್ಳಬೇಕು. ಯಾವ ತಿಂಗಳಲ್ಲಿಯಾದ್ರೂ ಸರಿ ಶುಕ್ಷ ಪಕ್ಷದಲ್ಲಿ ಸರಸ್ವತಿ ಯೋಗ ಬಂದ ಬುಧವಾರ ರುದ್ರಾಕ್ಷಿ ಧರಿಸಬೇಕು. ಇದರಿಂದಾಗಿ ಸಾಮಾನ್ಯ ಬುದ್ಧಿವಂತ ವಿದ್ಯಾರ್ಥಿ ಕೂಡ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯುತ್ತಾನಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.