Publish Date: Sun, 08 Apr 2018 (06:23 IST)
Updated Date: Sun, 08 Apr 2018 (06:28 IST)
ಬೆಂಗಳೂರು : ಮನೆಯಲ್ಲಿ ಅನೇಕ ಒಂದಲ್ಲ ಒಂದು ರೀತಿಯಾದ ಸಮಸ್ಯೆಗಳು ಪ್ರತಿದಿನ ಕಾಡುತ್ತಿದ್ದರೆ ಅಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿದೆ ಎಂದರ್ಥ. ಇಂತಹ ಕೆಟ್ಟ ಪ್ರಭಾವವನ್ನು ತೊಡೆದು ಹಾಕಲು ಒಂದು ಸಣ್ಣ ಉಪಾಯ ಇಲ್ಲಿದೆ.
ಮನೆಯಲ್ಲಿ ಸಮಸ್ಯೆ ಇದ್ದರೆ ಬೆಳ್ಳಂಬೆಳಿಗ್ಗೆ ಸಾಂಬ್ರಾಣಿ, ಕರ್ಪೂರ, ದೇಶಿ ದನದ ತುಪ್ಪ, ಶ್ರೀಗಂಧದ ಪುಡಿಯನ್ನು ಸೇರಿಸಿ ದನದ ಸಗಣಿಯಲ್ಲಿ ಹೊಗೆ ಹಾಕಿ. ಈ ಹೊಗೆಯನ್ನು ಮನೆಯ ಕೋಣೆ ಕೋಣೆಗೆ ತೋರಿಸಿ. ಈ ಹೊಗೆ ವಾತಾವರಣದಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸುತ್ತದೆ. ಸಕಾರಾತ್ಮಕ ಶಕ್ತಿ ಮನೆಯಲ್ಲಿ ನೆಲೆಸುವಂತೆ ಮಾಡುತ್ತದೆ.
ಈ ಎಲ್ಲ ವಸ್ತು ಪವಿತ್ರವೆಂದು ಪರಿಗಣಿಸಲಾಗಿದೆ. ಪೂಜೆಯಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ. ಈ ಎಲ್ಲ ವಸ್ತು ಮನೆಯ ಸುತ್ತಮುತ್ತಲ ವಾತಾವರಣವನ್ನು ಶುದ್ಧವಾಗಿರಿಸುತ್ತದೆ. ಈ ಧೂಪವನ್ನು ಮನೆಗೆ ಹಾಕುವುದ್ರಿಂದ ದೇವಾನುದೇವತೆಗಳ ಕೃಪೆ ಮನೆ ಮೇಲಿರುತ್ತದೆ. ಧನ ಸಂಬಂಧಿ ಸಮಸ್ಯೆ ದೂರವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ