Publish Date: Tue, 24 Mar 2026 (11:23 IST)
Updated Date: Tue, 24 Mar 2026 (11:26 IST)
ಜ್ಯೋತಿಷ್ಯದ ಪ್ರಕಾರ ಆಯಾ ಗ್ರಹಗಳಿಗೆ ಅನುಗುಣವಾಗಿ ಆಹಾರ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ತುಲಾ ರಾಶಿಯವರು ಜ್ಯೋತಿಷ್ಯದ ಪ್ರಕಾರ ಯಾವ ಆಹಾರ ಸೇವಿಸಿದರೆ ಉತ್ತಮ ಇಲ್ಲಿದೆ ವಿವರ.
ತುಲಾ ರಾಶಿಯನ್ನು ಅಳುವ ಗ್ರಹ ಶುಕ್ರ. ಈ ರಾಶಿಯವರಿಗೆ ಕಿಡ್ನಿ, ಸೊಂಟದ ಭಾಗಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಉಂಟಾದೀತು. ಹೀಗಾಗಿ ಈ ಭಾಗಗಳ ಆರೋಗ್ಯ ವೃದ್ಧಿಯಾಗುವಂತಹ ಆಹಾರ ಸೇವನೆ ಮಾಡಬೇಕು. ಆಹಾರದಲ್ಲಿ ಮಿನರಲ್ಸ್ ಹೆಚ್ಚು ಇರುವ ಆಹಾರ ಸೇವನೆ ಮಾಡಬೇಕು. ಉಳಿದಂತೆ ಯಾವ ತರಕಾರಿ, ಹಣ್ಣು, ಧಾನ್ಯ ಸೂಕ್ತ ತಿಳಿದುಕೊಳ್ಳಿ.
ತರಕಾರಿ: ಹಬೆಯಲ್ಲಿ ಬೇಯಿಸಿದ ತರಕಾರಿಗಳು, ಬಸಳೆ, ಪಾಲಕ್ ಸೊಪ್ಪು, ಟೊಮೆಟೊ, ಬಟಾಣಿ, ಕ್ಯಾರೆಟ್, ಕಾರ್ನ್ ಸೇವನೆ ಮಾಡಬೇಕು.
ಹಣ್ಣು: ಆಪಲ್, ದ್ರಾಕ್ಷಿ, ಸ್ಟ್ರಾಬೆರಿ, ಒಣದ್ರಾಕ್ಷಿ ಸೇವನೆ ಮಾಡಿ.
ಧಾನ್ಯಗಳು: ಓಟ್ಸ್, ಕಂದು ಅಕ್ಕಿ, ಗೋಧಿ ಸೇವಿಸಿ
ಈ ರಾಶಿಯವರು ಸಂಸ್ಕರಿತ ಆಹಾರಗಳು, ಹೆಚ್ಚು ಜಿಡ್ಡು ಇರುವ ಆಹಾರ ಪದಾರ್ಥಗಳು, ಮದ್ಯಪಾನ, ಅತಿಯಾದ ಉಪ್ಪಿನಂಶದ ಆಹಾರ ಸೇವನೆ ಅವಾಯ್ಡ್ ಮಾಡುವುದು ಉತ್ತಮ. ಹೆಚ್ಚು ನೀರಿನಂಶ ಸೇವನೆ ಮಾಡುವುದು ಉತ್ತಮ.