Publish Date: Sat, 21 Mar 2026 (09:04 IST)
Updated Date: Sat, 21 Mar 2026 (09:07 IST)
ಜ್ಯೋತಿಷ್ಯ ಪ್ರಕಾರ ಸಿಂಹ ರಾಶಿಯವರು ಯಾವ ರೀತಿಯ ಆಹಾರ ಸೇವಿಸಬೇಕು, ಯಾವ ಆಹಾರವನ್ನು ಅವಾಯ್ಡ್ ಮಾಡಬೇಕು ಇಲ್ಲಿದೆ ವಿವರ.
ಸಿಂಹ ರಾಶಿ ಆಳುವ ಗ್ರಹ ಸೂರ್ಯ. ಸೂರ್ಯನು ಹೃದಯ ಮತ್ತು ಬೆನ್ನುಮೂಳೆಯನ್ನು ಆಳುವುದರಿಂದ, ಸಿಂಹ ರಾಶಿಯ ವ್ಯಕ್ತಿಗಳು ಹೃದಯರಕ್ತನಾಳದ ಆರೋಗ್ಯವನ್ನು ಬೆಂಬಲಿಸುವ ಮತ್ತು ಅವರ ಹೆಚ್ಚಿನ ನೈಸರ್ಗಿಕ ಶಕ್ತಿಯನ್ನು ಕಾಪಾಡಿಕೊಳ್ಳುವ ಆಹಾರವನ್ನು ಹೆಚ್ಚಾಗಿ ಬಯಸುತ್ತಾರೆ. ಈ ರಾಶಿಯವರು ಯಾವ ತರಕಾರಿ, ಯಾವ ಹಣ್ಣು, ಧಾನ್ಯ, ಮಸಾಲೆ ಪದಾರ್ಥ ಸೇವಿಸಬೇಕು ಇಲ್ಲಿದೆ ನೋಡಿ ವಿವರ.
ತರಕಾರಿ: ಬೆಂಡೆಕಾಯಿ, ಬಸಳೆ, ಪಾಲಕ್ ಸೊಪ್ಪು, ಬ್ರಾಕೊಲಿ, ಸೌತೆಕಾಯಿ
ಹಣ್ಣು: ಕಿತ್ತಳೆ, ಆಪಲ್, ಪೀಚ್, ಸೂರ್ಯಕಾಂತಿ ಬೀಜಗಳು.
ಧಾನ್ಯಗಳು: ಇಡೀ ಗೋಧಿ, ಬಾದಾಮಿ, ವಾಲ್ ನಟ್
ಮಸಾಲೆ ಪದಾರ್ಥಗಳು: ಕೇಸರಿ, ಬೆಳ್ಳುಳ್ಳಿ, ಶುಂಠಿ, ಅರಿಶಿನ
ಈ ರಾಶಿಯವರು ಹೃದಯ ಸದೃಢಗೊಳಿಸುವಂತಹ ಆಹಾರಗಳನ್ನು ಸೇವಿಸಬೇಕು. ಸಿಂಹ ರಾಶಿ ಎಂದರೆ ಅಗ್ನಿಗೆ ಸಮಾನ. ಹೀಗಾಗಿ ಈ ರಾಶಿಯವರು ದೇಹ ತಂಪು ಮಾಡುವಂತಹ ಆಹಾರಗಳನ್ನು ಸೇವಿಸಬೇಕು. ಅತಿಯಾಗಿ ಉಪ್ಪು, ಎಣ್ಣೆ ಪದಾರ್ಥಗಳ ಸೇವನೆ ಅವಾಯ್ಡ್ ಮಾಡಬೇಕು.