Select Your Language

Notifications

webdunia
webdunia
webdunia
webdunia

ಜ್ಯೋತಿಷ್ಯ ಪ್ರಕಾರ ಕನ್ಯಾ ರಾಶಿಯವರ ಆಹಾರ ಕ್ರಮ ಹೇಗಿರಬೇಕು

Astrology
ಜ್ಯೋತಿಷ್ಯದ ಪ್ರಕಾರ ಕನ್ಯಾ ರಾಶಿಯವರು ಯಾವ ರೀತಿಯ ಆಹಾರ ಸೇವನೆ ಮಾಡಬೇಕು, ಯಾವ ರೀತಿಯ ದೇಹ ಪ್ರಕೃತಿ ಅವರದ್ದು ಎಂಬುದನ್ನು ಇಲ್ಲಿ ನೋಡಿ.

ಕನ್ಯಾ ರಾಶಿಗೆ ಬುಧ ಆಳುವ ಗ್ರಹನಾಗಿದ್ದಾನೆ. ಈ ರಾಶಿಯವರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಹೊಂದಿರುತ್ತಾರೆ. ಈ ರಾಶಿಯವರ ಜೀರ್ಣಕ್ರಿಯೆ ಮತ್ತು ಕರುಳು ಸೂಕ್ಷ್ಮವಾಗಿರುತ್ತದೆ. ಇದಕ್ಕೆ ಸಂಬಂಧಿಸಿದ ಅನಾರೋಗ್ಯ ಬರುವುದು ಹೆಚ್ಚು. ಹೀಗಾಗಿ ಈ ರಾಶಿಯವರು ಯಾವ ತರಕಾರಿ, ಯಾವ ಹಣ್ಣು, ಧಾನ್ಯ ಮತ್ತು ಮಸಾಲೆ ಪದಾರ್ಥ ಸೇವಿಸಿದರೆ ಆರೋಗ್ಯ ಚೆನ್ನಾಗಿರುತ್ತದೆ ಎಂದು ತಿಳಿದುಕೊಳ್ಳಿ.

ತರಕಾರಿ: ಸೊಪ್ಪು ತರಕಾರಿಗಳು, ಮೊಳಕೆ ಕಾಳು, ಕ್ಯಾರೆಟ್, ಬೀನ್ಸ್.
ಹಣ್ಣು: ಬಾಳೆಹಣ್ಣು, ಆಪಲ್, ಪಿಯರ್ಸ್, ಪಪ್ಪಾಯ
ಧಾನ್ಯಗಳು: ಓಟ್ಸ್, ಮಿಲ್ಲೆಟ್, ಕಂದು ಅಕ್ಕಿ, ಬಾದಾಮಿ
ಮಸಾಲೆ ಪದಾರ್ಥಗಳು: ಪುದೀನಾ, ಕೊತ್ತಂಬರಿ ಸೊಪ್ಪು, ಶುಂಠಿ, ಅರಿಶಿನ

ಬೀದಿ ಬದಿ ಆಹಾರ, ಕ್ಲೀನ್ ಇಲ್ಲದ ಕಡೆ ಆಹಾರ ಸೇವನೆ ಮಾಡುವುದು ಈ ರಾಶಿಯವರನ್ನು ಬೇಗನೇ ಅನಾರೋಗ್ಯಕ್ಕೀಡು ಮಾಡಬಹುದು. ಕೆಫೈನ್ ಅಂಶವಿರುವ ಆಹಾರಗಳನ್ನೂ ಇವರು ಅವಾಯ್ಡ್ ಮಾಡಬೇಕು. ಊಟ ಮಾಡುವಾಗಲೂ ಕೆಲಸದ ಬಗ್ಗೆ ಚಿಂತೆ ಮಾಡುತ್ತಾ ಊಟ ಮಾಡುವ ಅಭ್ಯಾಸವಿರುತ್ತದೆ. ಈ ರಾಶಿಯವರು ಹೆಚ್ಚು ಮೊಸರು, ಮಜ್ಜಿಗೆ ಸೇವನೆ ಮಾಡಬೇಕು. ಇದರಿಂದ ಜೀರ್ಣಕ್ರಿಯೆ ಸಮಸ್ಯೆಗಳು ದೂರವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋಮವಾರ ಶಿವ ಪಂಚಾಕ್ಷರಿ ಸ್ತೋತ್ರ ಓದಿ