Select Your Language

Notifications

webdunia
webdunia
webdunia
webdunia

ಸತ್ತ ನಂತರ ಮೃತ ದೇಹದ ಕಾಲಿನ ಹೆಬ್ಬೆರಳುಗಳನ್ನು ಹಗ್ಗದಿಂದ ಕಟ್ಟವುದು ಇದೇ ಕಾರಣಕ್ಕಂತೆ!

ಸತ್ತ ನಂತರ ಮೃತ ದೇಹದ ಕಾಲಿನ ಹೆಬ್ಬೆರಳುಗಳನ್ನು ಹಗ್ಗದಿಂದ ಕಟ್ಟವುದು ಇದೇ ಕಾರಣಕ್ಕಂತೆ!
ಬೆಂಗಳೂರು , ಶನಿವಾರ, 24 ಮಾರ್ಚ್ 2018 (06:38 IST)
ಬೆಂಗಳೂರು : ಹಿಂದೂಗಳ ಶಾಸ್ತ್ರದಲ್ಲಿಒಬ್ಬ ವ್ಯಕ್ತಿ ಸತ್ತ ನಂತರ ಆ ವ್ಯಕ್ತಿಯ ಮೃತದೇಹಕ್ಕೆ ಸ್ನಾನ ಮಾಡಿಸುವುದು, ಅಲಂಕರಿಸುವುದು, ಶವಯಾತ್ರೆ ಮಾಡುವುದು, ದಹನ ಮಾಡುವ ಕ್ರಿಯೆಗಳು ನಡೆಯುತ್ತವೆ. ಆದರೆ ಇವೆಲ್ಲಕ್ಕಿಂತಲೂ ಮೊದಲು ವ್ಯಕ್ತಿ ಸತ್ತ ಕೂಡಲೆ ಆತನ ಕಾಲಿನ ಹೆಬ್ಬೆರಳುಗಳೆರಡನ್ನು ಸೇರಿಸಿ ಚಿಕ್ಕ ಹಗ್ಗದಿಂದ ಕಟ್ಟುತ್ತಾರೆ. ಆ ಬಳಿಕ ದಹನ ನಡೆಯುವವರೆಗೂ ಆ ದಾರ ಹಾಗೆಯೇ ಇರುತ್ತದೆ. ದಹನ ಕ್ರಿಯೆಯಲ್ಲಿ ಮೃತದೇಹದ ಜತೆಗೆ ಸುಟ್ಟುಹೋಗುತ್ತದೆ. ಆದರೆ ಆ ರೀತಿ ಹಗ್ಗ ಅಥವಾ ಬಳ್ಳಿಯಿಂದ ಕಾಲಿನ ಹೆಬ್ಬೆರಳುಗಳನ್ನು ಯಾಕೆ ಕಟ್ಟುತ್ತಾರೆ ಗೊತ್ತಾ.


ಮನುಷ್ಯ ಸತ್ತ ಬಳಿಕ ಆತನಿಗೆ ಶ್ರಾದ್ಧ ಕರ್ಮಗಳನ್ನು ಮಾಡುವವರೆಗೂ ಆತನ ಆತ್ಮ ಈ ಲೋಕದಲ್ಲೇ ಸುತ್ತುತ್ತಿರುತ್ತದೆಂದು ಹಿಂದೂ ಪುರಾಣಗಳು ಹೇಳುತ್ತವೆ. ಆದರೆ ಆ ಆತ್ಮ ಮತ್ತೆ ಮನೆಗೆ ಮರಳಬಾರದು ಎಂಬ ಉದ್ದೇಶದಿಂದ ವ್ಯಕ್ತಿ ಮರಣಿಸಿದ ಬಳಿಕ ಆತನ ಕಾಲಿನ ಹೆಬ್ಬೆರಳುಗಳನ್ನು ಸೇರಿಸಿ ಕಟ್ಟುತ್ತಾರೆ. ಇದರಿಂದ ಕಾಲುಗಳು ಕದಲುವುದಿಲ್ಲ. ಆದಕಾರಣ ಆತ್ಮ ಮತ್ತೆ ಪ್ರವೇಶಿಸುವ ಅವಕಾಶ ಇರಲ್ಲ ಎಂಬುದು ನಂಬಿಕೆ.


ಆದರೆ ವೈಜ್ಞಾನಿಕ ಕಾರಣ ಸತ್ತ ಬಳಿಕ ಮನುಷ್ಯನ ದೇಹ ಬಿಗಿಯಾಗುತ್ತದೆ. ಈ ಕ್ರಿಯೆಯಲ್ಲಿ ಕಾಲುಗಳು ಬೇರೆಬೇರೆಯಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಮೊದಲೇ ಕಾಲಿನ ಹೆಬ್ಬೆರಳುಗಳನ್ನು ಆ ರೀತಿ ಹಗ್ಗದಿಂದ ಕಟ್ಟಿಹಾಕುತ್ತಾರೆ.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯ ಹೊಸ್ತಿಲಿಗೆ ಅರಿಶಿನ ಕುಂಕುಮ ಹಚ್ಚುವುರಿಂದ ಏನಾಗುತ್ತೆ ಗೊತ್ತಾ…?