Select Your Language

Notifications

webdunia
webdunia
webdunia
webdunia

ಲಕ್ಷ್ಮೀ ದೇವಿ ನಿಮ್ಮ ಮನೆಯಲ್ಲಿ ಸದಾ ಇರಬೇಕೆಂದರೆ ಹೀಗೆ ಮಾಡಿ!

ಹಾಲು
ಬೆಂಗಳೂರು , ಸೋಮವಾರ, 12 ಮಾರ್ಚ್ 2018 (06:52 IST)
ಬೆಂಗಳೂರು : ನಾವು ಮಾಡುವ ಹಲವು ಕೆಲಸಗಳನ್ನು ಹೇಗೆ ಮಾಡಬೇಕು, ಏನು ಮಾಡಬಾರದು ಎಂಬುದನ್ನು ಶಾಸ್ತ್ರಗಳು ಹೇಳುತ್ತವೆ. ಆದರೆ ನಮ್ಮಲ್ಲಿ ಬಹಳಷ್ಟು ಜನರಿಗೆ ಅದು ತಿಳಿದಿರುವುದಿಲ್ಲ. ಹಿಂದೂ ಧರ್ಮದ ಸಂಪ್ರದಾಯದಲ್ಲಿ ಹಾಲು, ನೀರು, ಧಾನ್ಯ ಇವುಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ. ಇವುಗಳನ್ನು ಪೂರ್ತಿಯಾಗಿ ಖಾಲಿಯಾಗುವ ಮೊದಲೇ ಮನೆಯಲ್ಲಿ ತಂದಿಟ್ಟುಕೊಳ್ಳಬೇಕು ಎಂದು ನಮ್ಮ ಹಿರಿಯರು ಹೇಳುತ್ತಿರುತ್ತಾರೆ.


ಏಕೆಂದರೆ ಇವುಗಳನ್ನು ಲಕ್ಷ್ಮೀಸ್ವರೂಪವಾಗಿ ಭಾವಿಸುತ್ತಾರೆ. ಇವು ಮನೆಯ ತುಂಬಾ ಇದ್ದರೆ ಧನ ಇರುತ್ತದೆ ಎಂದು ನಂಬುತ್ತಾರೆ. ದೇವರ ಕೋಣೆಯಲ್ಲಿ ಚೊಂಬಿನ ತುಂಬಾ ನೀರನ್ನು ಇಟ್ಟು, ಆ ನೀರನ್ನು ಪ್ರತಿದಿನ ಬದಲಾಯಿಸುತ್ತಿರಬೇಕು. ಅಡುಗೆ ಕೋಣೆಯಲ್ಲಿ ನೀರು ತುಂಬಿದ ಕೊಡ ಇದ್ದರೆ ಆ ಮನೆಯಲ್ಲಿ ಲಕ್ಷ್ಮೀ ನೆಲೆಸಿರುತ್ತಾಳೆ. ಸ್ನಾನದ ಕೊಠಡಿಯಲ್ಲಿಯೂ ಕೂಡ ಬಕೆಟ್ ಅಥವಾ ತೊಟ್ಟಿಗಳಲ್ಲಿ ನೀರು ಖಾಲಿಯಾಗದಂತೆ ನೋಡಿಕೊಳ್ಳಬೇಕು. ಹಾಗೆಯೇ ನಾವು ನೀರನ್ನು ಕುಡಿಯುವಾಗ ಪೂರ್ತಿಯಾಗಿ ಕುಡಿಯದೆ ಸ್ವಲ್ಪ ನೀರನ್ನು ಉಳಿಸುವುದರಿಂದ ಲಕ್ಷ್ಮೀದೇವಿಯು ನಮ್ಮ ಮನೆಯನ್ನು ಬಿಟ್ಟು ಹೋಗುವುದಿಲ್ಲವಂತೆ.


ತಾಜಾ ಸುದ್ದಿಗಳನ್ನು ಓದಲು ದೇವರ ಕೋಣೆಯಲ್ಲಿ ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಕೋರಿಕೆಗಳು ಈಡೇರಲು ದೇವರಿಗೆ ಈ ನೈವೇದ್ಯ ಅರ್ಪಿಸಿ