Webdunia - Bharat's app for daily news and videos

Install App

ವೃಷಭ ರಾಶಿಯವರಿಗೆ 2025 ರಲ್ಲಿ ಉದ್ಯೋಗ ಮತ್ತು ವೃತ್ತಿ ಜೀವನ ಹೇಗಿರುತ್ತದೆ ನೋಡಿ

Krishnaveni K
ಸೋಮವಾರ, 18 ನವೆಂಬರ್ 2024 (15:03 IST)
ಬೆಂಗಳೂರು: ವೃಷಭ ರಾಶಿಯವರಿಗೆ 2025 ರಲ್ಲಿ ಉದ್ಯೋಗ ಮತ್ತು ವೃತ್ತಿ ಜೀವನ ಕಲರ್ ಫುಲ್ ಆಗಿರಲಿದೆಯಾ ಅಥವಾ ತೊಂದರೆಗಳಿವೆಯೇ ಎಂಬುದನ್ನು ಇಲ್ಲಿ ನೋಡಿ.

2025 ವೃಷಭ ರಾಶಿಯವರಿಗೆ ಉದ್ಯೋಗದ ದೃಷ್ಟಿಯಿಂದ ಮಹತ್ವದ ವರ್ಷವಾಗಿದೆ. ಈ ವರ್ಷ ನಿಮ್ಮ ವೃತ್ತಿ ಜೀವನಕ್ಕೆ ಸಂಬಂಧಪಟ್ಟಂತೆ ಕೆಲವು ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದೀರಿ. ಅದು ನಿಮ್ಮ ಭವಿಷ್ಯವನ್ನು ನಿರ್ಧರಿಸಲಿದೆ. ವಿಶೇಷವಾಗಿ ಮಾರ್ಚ್ ಕೊನೆಯಲ್ಲಿ ಶನಿಯು ಮೀನ ರಾಶಿಗೆ ಚಲಿಸಲಿದ್ದು, ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ.

ಈಗಾಗಲೇ ಉದ್ಯೋಗದಲ್ಲಿರುವವರಿಗೂ ಹೊಸ ಉದ್ಯೋಗಾವಕಾಶಗಳು ಹುಡುಕಿಕೊಂಡು ಬರಲಿದೆ. ಆದರೆ ಅದಕ್ಕೆ ತಕ್ಕ ಪರಿಶ್ರಮ ಪಡಬೇಕಾಗುತ್ತದೆ. ನಿಮ್ಮ ಪರಿಶ್ರಮವೇ ನಿಮ್ಮ ಯಶಸ್ಸನ್ನು ನಿರ್ಧರಿಸಲಿದೆ.  ಆಗಸ್ಟ್ ಬಳಿಕ ಹೊಸ ಒಪ್ಪಂದಗಳಿಗೆ ಸಹಿ ಹಾಕಲಿದ್ದೀರಿ. ಈ ವರ್ಷ ಯಾವುದೇ ಉದ್ಯೋಗವಾದರೂ ಸ್ಥಿರತೆ ಕಾಪಾಡಿಕೊಂಡಲ್ಲಿ ನಿಮ್ಮ ಭವಿಷ್ಯ ಚೆನ್ನಾಗಿರಲಿದೆ.

ವರ್ಷದ ಮಧ್ಯಾವಧಿಯಲ್ಲಿ ಉದ್ಯೋಗ ಬದಲಾವಣೆಯತ್ತ ಮನಸ್ಸು ಓಡಲಿದೆ. ಆದರೆ ಅದಕ್ಕೆ ನಿಯಂತ್ರಣವಿರಲಿ. ಒಂದೇ ಉದ್ಯೋಗದಲ್ಲಿದ್ದು ಯಶಸ್ಸು ಪಡೆಯಲು ಪ್ರಯತ್ನಿಸಿ. ಅದು ಒಳಿತು ಮಾಡಲಿದೆ.

ಅಕ್ಟೋಬರ್ ಬಳಿಕ ಉದ್ಯೋಗ ವಿಚಾರದಲ್ಲಿ ಇರುವ ಗೊಂದಲಗಳು, ಸಂದಿಗ್ಧತೆಗಳು ಪರಿಹಾರವಾಗಲಿದ್ದು, ಸ್ಥಿರ ಮನಸ್ಸುಳ್ಳವರಾಗಲಿದ್ದೀರಿ. ವರ್ಷಾಂತ್ಯದಲ್ಲಿ ಉದ್ಯೋಗದಲ್ಲಿ ಕೊಂಚ ಏರುಪೇರುಗಳಿದ್ದರೂ ಅದನ್ನು ಸರಿದೂಗಿಸಿಕೊಂಡು ಹೋಗುವ ದೃಢ ಮನಸ್ಸಿದ್ದರೆ ಯಶಸ್ಸು ಕಾಣಬಹುದು.

ದೇವತಾ ಆರಾಧನೆ: ಲಕ್ಷ್ಮೀ ದೇವಿಯನ್ನು ಆರಾಧಿಸಿ
ಅದೃಷ್ಟ ಸಂಖ್ಯೆ: 6,5

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ದೋಷವಿರುವವರು ಓದಲೇ ಬೇಕಾದ ಸ್ತೋತ್ರ

ಮಹಾವಿಷ್ಣು, ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಅಂದುಕೊಂಡ ಕೆಲಸವಾಗಬೇಕಾದರೆ ಸಾಯಿ ಬಾಬಾ ಪ್ರಾರ್ಥನಾಷ್ಟಕಂ ಓದಿ

ಬುಧ ಕವಚಂ ಸ್ತೋತ್ರವನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು ಯಾಕೆ ನೋಡಿ

ನಾಗದೋಷ ಪರಿಹಾರಕ್ಕಾಗಿ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments