Select Your Language

Notifications

webdunia
webdunia
webdunia
webdunia

ಸೂರ್ಯನ ಸರಳ ಮಂತ್ರಗಳು ಕನ್ನಡದಲ್ಲಿ: ಸಂಕ್ರಾಂತಿ ಸಮಯದಲ್ಲಿ ತಪ್ಪದೇ ಓದಿ

Surya God

Krishnaveni K

ಬೆಂಗಳೂರು , ಸೋಮವಾರ, 13 ಜನವರಿ 2025 (08:46 IST)
ಬೆಂಗಳೂರು: ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಸೂರ್ಯನ ಸರಳ ಮಂತ್ರಗಳನ್ನು ತಪ್ಪದೇ ಕನ್ನಡದಲ್ಲಿ ಓದಿ. ಇದರಿಂದ ನಿಮ್ಮ ಹಲವು ಸಂಕಷ್ಟಗಳು ದೂರವಾಗುತ್ತದೆ.
 

ಸೂರ್ಯನಮಸ್ಕಾರ ಸಂದರ್ಭದಲ್ಲಿ ಪ್ರಮುಖವಾಗಿ 12 ಮಂತ್ರಗಳನ್ನು ಹೇಳಲಾಗುತ್ತದೆ. ಅದರ ಹೊರತಾಗಿ ಸೂರ್ಯನ ಕುರಿತಾದ ಕೆಲವೊಂದು ಮಂತ್ರಗಳಿವೆ. ಇದು ನಮಗೆ ಆಧ್ಯಾತ್ಮಿಕ ಭಾವನೆ ಉದ್ದೀಪನಗೊಳಿಸುವುದಲ್ಲದೆ, ಮನಸ್ಸಿಗೆ ಧೈರ್ಯ ನೀಡುತ್ತದೆ. ಮಕ್ಕಳಲ್ಲಿ ಒತ್ತಡ ನಿವಾರಣೆಗೆ, ವಿದ್ಯಾಭ್ಯಾಸದಲ್ಲಿ ಪ್ರಗತಿಗೆ ಸೂರ್ಯ ಮಂತ್ರಗಳನ್ನು ಹೇಳಿಸಿ. ಇದರಲ್ಲಿ ಈ ಸರಳ ಮಂತ್ರಗಳನ್ನು ಓದಿ.

ಓಂ ಸೂರ್ಯಾಯ ನಮಃ: ಸೂರ್ಯನಿಗೆ ಅರ್ಘ್ಯ ಬಿಡುತ್ತಾ ಈ ಮಂತ್ರವನ್ನು ಹೇಳಬೇಕು.

ನಮಃ ಸೂರ್ಯಾಯ ಶಾಂತಾಯಾ ಸರ್ವರೋಗ ನಿವಾರಿಣಿ
ಆಯುರ್ ಆರೋಗ್ಯ ಮ ಐಶ್ವರ್ಯ ಮ ದೇಹಿ ದೇವಾಃ ಜಗತ್ಪತೆ

ಈ ಮಂತ್ರವನ್ನು ಓದುವುದರಿಂದ ಆರೋಗ್ಯ ವೃದ್ಧಿಯಾಗುವುದು. ಜೊತೆಗೆ ಮನೆಯಲ್ಲಿ ಐಶ್ವರ್ಯ, ನೆಮ್ಮದಿ ನೆಲೆಸುವುದು.

ಓಂ ಆದಿತ್ಯಾಯ ವಿದ್ಮಹೇ ಮಾರ್ತಾಂಡಾಯ ಧೀಮಹೀ
ತನ್ನೋಃ ಸೂರ್ಯಃ ಪ್ರಚೋದಯಾತ್

ಇದು ಸೂರ್ಯ ಗಾಯತ್ರಿ ಮಂತ್ರವಾಗಿದ್ದು ವಿಶೇಷವಾಗಿ ಕಣ್ಣಿನ ಆರೋಗ್ಯ, ದೈಹಿಕ ರೋಗಗಳು, ಸರ್ವ ಗ್ರಹಗಳ ದೋಷ ನಿವಾರಣೆಯಾಗಲು ಓದಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?