Webdunia - Bharat's app for daily news and videos

Install App

ಶನಿ ದೇವನ ಈ ಮಂತ್ರಗಳನ್ನು ಪಠಿಸಿದರೆ ಶನಿ ದೋಷ ನಿವಾರಣೆಯಾಗುವುದು

Krishnaveni K
ಶನಿವಾರ, 14 ಸೆಪ್ಟಂಬರ್ 2024 (08:20 IST)
ಬೆಂಗಳೂರು: ಇಂದು ಶನಿವಾರವಾಗಿದ್ದು, ಶನಿ ದೇವನಿಗೆ ವಿಶೇಷವಾದ ದಿನವಾಗಿದೆ. ಶನಿ ದೋಷ ನಿಮ್ಮನ್ನು ಕಾಡುತ್ತಿದ್ದರೆ ಶನಿ ದೇವನಿಗೆ ಈ ಮಂತ್ರಗಳನ್ನು ಪಠಿಸಿ ಅವನ ವಕ್ರದೃಷ್ಟಿಯಿಂದ ಪಾರಾಗಬಹುದು.

ಶನಿಯು ದೋಷಪೂರಿತನಾಗಿದ್ದರೆ ನಮಗೆ ಜೀವನದಲ್ಲಿ ಅನೇಕ ಕಷ್ಟ-ನಷ್ಟಗಳನ್ನು ತಂದೊಡ್ಡುತ್ತಾನೆ. ಹಣಕಾಸಿನ ನಷ್ಟ, ದೈಹಿಕ ನೋವು, ಸಂಬಂಧಗಳಲ್ಲಿ ಬಿರುಕು, ಉದ್ಯೋಗದಲ್ಲಿ ತೊಡಕು, ಅಪವಾದದ ಭೀತಿ ಇತ್ಯಾದಿ ಸಮಸ್ಯೆಗಳು ಶನಿ ದೋಷದಿಂದ ಬರಬಹುದು.

ಆದರೆ ಶನಿ ಲಾಭಕಾರಕನಾದರೆ ಅತ್ಯಂತ ಶುಭ ಫಲಗಳನ್ನೇ ನೀಡುವನು. ಉದ್ಯೋಗದಲ್ಲಿ ಅಭಿವೃದ್ಧಿ, ಹಣಕಾಸಿನ ಗಳಿಕೆ, ಯಶಸ್ಸು ನಿಮ್ಮದಾಗುವುದು. ಆದರೆ ಶನಿ ದೋಷ ನಿವಾರಣೆಯಾಗಿ ಶನಿಯ ಶುಭ ಫಲಗಳನ್ನು ಪಡೆಯಬೇಕಾದರೆ ಈ ಮಂತ್ರಗಳನ್ನು ಪಠಿಸುವುದು ಉತ್ತಮ. ಅವುಗಳು ಯಾವುವೆಂದರೆ:
ಓಂ ಕಾಕಧ್ವಜಾಯ ವಿದ್ಮಹೇ
ಖಡ್ಗಹಸ್ತಾಯ ಧೀಮಹಿ, ತನ್ನೋ ಮಂದ ಪ್ರಚೋದಯಾತ್

ಅಥವಾ
ಓಂ ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ
ಛಾಯಾಮಾರ್ತಂಡ ಸಂಭೂತಂ ತಂ ನಮಾಮಿ ಶನೈಶ್ಚರಂ

ಪ್ರತಿನಿತ್ಯ ಪಶ್ಚಿಮ ಅಥವಾ ಪೂರ್ವಾಭಿಮುಖವಾಗಿ ಕುಳಿತು ಕೈಯಲ್ಲಿ ರುದ್ರಾಕ್ಷಿ ಸರ ಹಿಡಿದು ನೀಲಿ ಬಣ್ಣದ ಬಟ್ಟೆ ಧರಿಸಿ ಈ ಮಂತ್ರಗಳನ್ನು ಪಠಿಸಿದರೆ ಶನೀಶ್ವರನ ಕೃಪೆಗೆ ಪಾತ್ರರಾಗುತ್ತೀರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ವೆಂಕಟೇಶ್ವರ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ

ವಿಘ್ನ ವಿನಾಯಕನ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ತಪ್ಪದೇ ಓದಿ

ಇಂದು ಅಂದುಕೊಂಡ ಕೆಲಸವಾಗಬೇಕಾದರೆ ಆಂಜನೇಯನ ಈ ಮಂತ್ರ ಹೇಳಿ

ಗ್ರಹಗತಿಗಳ ಸಮಸ್ಯೆಯಿದ್ದಲ್ಲಿ ಈ ಸ್ತೋತ್ರವನ್ನು ತಪ್ಪದೇ ಓದಿ

ಆಂಜನೇಯ ಅಷ್ಟಕಂ ಕನ್ನಡದಲ್ಲಿ ಇಲ್ಲಿದೆ ಈ ದೋಷವಿರುವವರು ತಪ್ಪದೇ ಓದಿ

ಮುಂದಿನ ಸುದ್ದಿ
Show comments