Webdunia - Bharat's app for daily news and videos

Install App

ಇಂದಿನ ರಾಶಿ ಭವಿಷ್ಯ

Webdunia
ಭಾನುವಾರ, 18 ನವೆಂಬರ್ 2018 (15:44 IST)
ಬೆಂಗಳೂರು : ಇಂದಿನ ರಾಶಿ ಭವಿಷ್ಯ ಹೀಗಿದೆ. ಯಾವ ರಾಶಿಯವರು ಏನು ಮಾಡಬೇಕು. ಏನು ಮಾಡಬಾರದು? ಯಾವ ಯಾವ ರಾಶಿಯವರಿಗೆ ಏನೇನು ಫಲ ಎಂಬುದನ್ನು ತಿಳಿದುಕೊಳ್ಳಿ.



ಮೇಷ ರಾಶಿ : ಅತಿಯಾಗಿ ತಿನ್ನುವುದನ್ನು ತಪ್ಪಿಸಿ ಮತ್ತು ಫಿಟ್ ಆಗಿ ಉಳಿಯಲು ನಿಯಮಿತವಾಗಿ ಹೆಲ್ತ್ ಕ್ಲಬ್‌ಗೆ ಭೇಟಿ ನೀಡಿ. ನೀವು ತ್ವರಿತ ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ನಿಮ್ಮ ಅತಿಥಿಗಳ ಜೊತ ಒರಟಾಗಿ ನಡೆದುಕೊಳ್ಳಬೇಡಿ.  


 ವೃಷಭ ರಾಶಿ : ಕಿರಿಕಿರಿ ನಿಮ್ಮ ಮಾನಸಿಕ ಶಾಂತಿಗೆ ತೊಂದರೆ ತಂದರೂ ಒಬ್ಬ ಸ್ನೇಹಿತರು ನಿಮ್ಮ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅಪಾರವಾದ ಸಹಾಯ ಮಾಡುತ್ತಾರೆ. ಒತ್ತಡ ತೊಡೆದುಹಾಕಲು ಹಿತವಾದ ಸಂಗೀತವನ್ನು ಆಲಿಸಿ. ಹೊಸ ಹಣಗಳಿಕೆಯ ಅವಕಾಶಗಳು ಲಾಭದಾಯಕವಾಗಿರುತ್ತವೆ.

 
ಮಿಥುನ ರಾಶಿ : ನಿಮ್ಮ ದೇಹದ ಪುನಃಶ್ಚೇತನಕ್ಕಾಗಿ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳದಿದ್ದರೆ ನೀವು ಆಯಾಸ ಹಾಗೂ ನಿರಾಸೆಯಲ್ಲಿ ಸಿಲುಕುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದರೂ ಹಣದ ಹೊರಹರಿವು ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ತೊಂದರೆಯುಂಟುಮಾಡುತ್ತದೆ

 
ಕರ್ಕ ರಾಶಿ : ಒತ್ತಡದ ದಿನದ ಹೊರತಾಗಿಯೂ ಆರೋಗ್ಯ ಪರಿಪೂರ್ಣವಾಗಿರುತ್ತದೆ. ನಿಮ್ಮ ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ ನಿಮ್ಮ ಮನಸ್ಸಿನ ಶಾಂತಿಗೆ ಭಂಗ ತರುತ್ತದೆ. ನೀವು ಅಪರೂಪಕ್ಕೆ ಭೇಟಿ ಮಾಡುವ ಜನರನ್ನು ಸಂಪರ್ಕಿಸಲು ಒಳ್ಳೆಯ ದಿನ.


 ಸಿಂಹ ರಾಶಿ : ನೀವು ಬಹಳ ವಿಚಿತ್ರವಾದ ಪರಿಸ್ಥಿತಿಯಲ್ಲಿ ಸಿಲುಕಿದರೂ ಅದನ್ನು ಎದುರಿಸಲು ನಿಮ್ಮ ಇಚ್ಛಾಶಕ್ತಿ ಇಂದು ಸಹಾಯ ಮಾಡಬಹುದು. ಒಂದು ಅತ್ಯಂತ ಭಾವನಾತ್ಮಕ ನಿರ್ಧಾರ ಕೈಗೊಳ್ಳುವಾಗ ನೀವು ಸ್ತಿಮಿತ ಕಳೆದುಕೊಳ್ಳಬಾರದು 


ಕನ್ಯಾ ರಾಶಿ : ಕೆಲಸದಲ್ಲಿ ಹಿರಿಯರಿಂದ ಒತ್ತಡ ಮತ್ತು ಮನೆಯಲ್ಲಿ ಅಪಶ್ರುತಿ ನಿಮ್ಮ ಏಕಾಗ್ರತೆಗೆ ತೊಂದರೆ ತರಬಹುದು. ಇಂದು ನೀವು ಒಳ್ಳೆಯ ಹಣ ಮಾಡುತ್ತೀರಿ - ಆದರೆ ಅದು ನಿಮ್ಮ ಕೈಯಿಂದ ಜಾರಿಹೋಗದಿರಲು ಪ್ರಯತ್ನಿಸಿ.


ತುಲಾ ರಾಶಿ : ನಿಮ್ಮ ಆರೋಗ್ಯ ಸುಧಾರಿಸಲು ಸಹಕಾರಿಯಾಗುವ ಕೆಲಸಗಳನ್ನು ಮಾಡಬಹುದಾದ ಒಂದು ದಿನ. ನಿಮ್ಮ ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ ನಿಮ್ಮ ಮನಸ್ಸಿನ ಶಾಂತಿಗೆ ಭಂಗ ತರುತ್ತದೆ. ಎಲ್ಲರನ್ನೂ ನಿಮ್ಮ ದೊಡ್ಡ ಪಾರ್ಟಿಗೆ ಕರೆಯಿರಿ



ವೃಶ್ಚಿಕ ರಾಶಿ : ನಿಮ್ಮ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ದೊಡ್ಡ ಗುಂಪಿನಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು ಅತ್ಯಂತ ಮನರಂಜನಾತ್ಮಕವಾಗಿರುತ್ತದೆ- ಆದರೆ ನಿಮ್ಮ ವೆಚ್ಚಗಳು ಹಚ್ಚಾಗುತ್ತವೆ. ನೀವು ನಿಮ್ಮ ದೈನಂದಿನ ಕಾರ್ಯಕ್ರಮಗಳಿಂದ ಬಿಡುವು ಮಾಡಿಕೊಂಡು ನಿಮ್ಮ ಸ್ನೇಹಿತರೊಂದಿಗೆ ಇಂದು ಹೊರಗೆ ಹೋಗಬೇಕು


ಧನು ರಾಶಿ : ಬೆಂಬಲ ನೀಡುವ ಸ್ನೇಹಿತರು ನಿಮ್ಮನ್ನು ಸಂತೋಷವಾಗಿರಿಸುತ್ತಾರೆ. ತಾತ್ಕಾಲಿಕ ಸಾಲಕ್ಕಾಗಿ ನಿಮ್ಮ ಬಳಿ ಬರುವವರನ್ನು ನಿರ್ಲಕ್ಷಿಸಿ. ಕೆಲಸದ ಒತ್ತಡ ಕಡಿಮೆಯಿದ್ದು ನೀವು ಕುಟುಂಬದ ಸದಸ್ಯರ ಜೊತೆಗಿನ ಸಮಯವನ್ನು ಆನಂದಿಸುವ ಒಂದು ದಿನ

 
ಮಕರ ರಾಶಿ : ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ. ಆರ್ಥಿಕ ನಿರ್ಬಂಧಗಳನ್ನು ತಪ್ಪಿಸಲು ನಿಮ್ಮ ಬಜೆಟ್‌ಗೆ ಅಂಟಿಕೊಳ್ಳಿ. ಕುಟುಂಬ ಸದಸ್ಯರಿಗೆ ಸಹಾಯ ಮಾಡಲು ಮುಕ್ತ ಸಮಯದ ಲಾಭ ತೆಗೆದುಕೊಳ್ಳಿ. ಪ್ರಣಯ ನಿಮ್ಮ ಹೃದಯ ಮತ್ತು ಮನಸ್ಸನ್ನು ಆಳುತ್ತದೆ
.

ಕುಂಭ ರಾಶಿ : ನೀವು ಕೆಲವು ಗಂಭೀರ ತೊಂದರೆಗಳನ್ನು ಎದುರಿಸಲು ಸಾಧ್ಯತೆಯಿರುವುದರಿಂದ ನಿಮ್ಮನ್ನು ನಿಯಂತ್ರಿಸಿಕೊಳ್ಳಿ. ವಿಶೇಷವಾಗಿ ಸಣ್ಣ ಹುಚ್ಚಲ್ಲದೇ ಬೇರೇನೂ ಅಲ್ಲದ ನಿಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಿ

 
ಮೀನ ರಾಶಿ : ಆಧ್ಯಾತ್ಮಿಕ ಜೀವನದ ಪೂರ್ವಾಪೇಕ್ಷಿತವಾಗಿರುವಂತಹ ನಿಮ್ಮ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಿ. ಒಳ್ಳೆಯದೂ ಹಾಗೂ ಕೆಟ್ಟದೆಲ್ಲವೂ ಮನಸ್ಸಿನ ಮೂಲಕವೇ ಬರುವುದರಿಂದ ಬುದ್ದಿ ಜೀವನದ ಹೆಬ್ಬಾಗಿಲಾಗಿದೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Horoscope 2025: ಮೀನ ರಾಶಿಯವರು 2025 ರಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಗಮನಹರಿಸಿ

Horoscope 2025: ಕುಂಭ ರಾಶಿಯವರಿಗೆ 2025 ರಲ್ಲಿ ಆರೋಗ್ಯವನ್ನು ಹಗುರವಾಗಿ ಪರಿಗಣಿಸುವಂತಿಲ್ಲ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Horoscope 2025: ಮಕರ ರಾಶಿಯವರಿಗೆ 2025 ರಲ್ಲಿ ಆರೋಗ್ಯದ ಬಗ್ಗೆ ಚಿಂತೆ ಬೇಡ

Horoscope 2025: ಧನು ರಾಶಿಯವರಿಗೆ ಆರೋಗ್ಯದಲ್ಲಿ ಕುಟುಂಬಕ್ಕೂ ತೊಂದರೆ

ಮುಂದಿನ ಸುದ್ದಿ
Show comments