Publish Date: Mon, 02 Nov 2020 (06:17 IST)
Updated Date: Mon, 02 Nov 2020 (06:22 IST)
ಬೆಂಗಳೂರು : ಗ್ರಹಗಳ ಸ್ಥಾನ ಬದಲಾದಾಗ ಪ್ರತಿ ರಾಶಿ, ನಕ್ಷತ್ರಕ್ಕೂ ವಿಭಿನ್ನ ರೀತಿಯಲ್ಲಿ ಫಲಿತಾಂಶಗಳನ್ನು ನೀಡುತ್ತದೆ. ಆದ್ದರಿಂದ ನಿಮ್ಮ ಜನ್ಮ ರಾಶಿ ಪ್ರಕಾರ ಪ್ರತಿಯೊಬ್ಬರೂ ಅನುಸರಿಸಬೇಕಾದ ಕೆಲವು ಪರಿಹಾರಗಳಿವೆ. ಇದರಿಂದಾಗುವ ಹಾನಿಯನ್ನು ತಪ್ಪಿಸಲು ದೇವರಿಗೆ ರಾಶಿಗನುಗುಣವಾಗಿ ಕೆಲವು ಅರ್ಪಣೆಗಳನ್ನು ಮಾಡಬೇಕಾಗುತ್ತದೆ. ಅದು ಏನು ಎಂಬುದನ್ನು ತಿಳಿದುಕೊಳ್ಳೋಣ.
ಸಾಮಾನ್ಯವಾಗಿ ಧನುರಾಶಿಯಲ್ಲಿ ಜನಿಸಿದವರು ವಿಷ್ಣುವಿನ ಸ್ಮರಣೆ ಮಾಡಬೇಕು, ಜನ್ಮದಿನದಂದು ವಿಷ್ಣು ಕ್ಷೇತ್ರ ದರ್ಶನ ಮಾಡಬೇಕು. ಹಾಗೇ ವಿಷ್ಣುವಿಗೆ ತುಳಸಿ ಮಾಲೆಯನ್ನು ಅರ್ಪಿಸಬೇಕು. ಮತ್ತು ಹಾಲಿನಿಂದ ಮಾಡಿದ ಸಿಹಿಯನ್ನು ವೈವೇದ್ಯವಾಗಿ ನೀಡಬೇಕು. ಇದರಿಂದ ಅವರ ಕನಸುಗಳು ಈಡೇರುತ್ತದೆ.